Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ತೀವ್ರ ಮಾನಸಿಕ ಒತ್ತಡವನ್ನು ಹೊರದಬ್ಬುವ 10 ಮಸಾಜ್
ಮಾನಸಿಕ ಒತ್ತಡ ಸೈಲೆಂಟಾಗಿ ನಮ್ಮನ್ನು ಇಂಚು-ಇಂಚಾಗಿ ಕೊಲ್ಲುತ್ತದೆ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಹಾಗಂತ ಮಾನಸಿಕ ಒತ್ತಡ ಯಾರಿಗೆ ಇಲ್ಲ ಹೇಳಿ? ಪ್ರತಿಯೊಬ್ಬರು ಒಂದಲ್ಲಾ ಒಂದು ಕಾರಣದಿಂದ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾ ಇರುತ್ತಾರೆ. ಸಮಸ್ಯೆಯಿದೆ ಅಂತ ಅದರ ಬಗ್ಗೆ ಯೋಚಿಸುತ್ತಾ ಕೂತರೆ ಮಾನಸಿಕ ನೋವು ಮತ್ತಷ್ಟು ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ.
ಮನೆ ಜವಬ್ದಾರಿ, ಕೆಲಸದ ಒತ್ತಡ ಇವೆಲ್ಲಾ ನಮ್ಮ ಮಾನಸಿಕ ಒತ್ತಡವನ್ನು ಇಂಚು-ಇಂಚಾಗಿ ಹೆಚ್ಚಿಸಿ, ನಮ್ಮನ್ನು ಖಿನ್ನತೆಗೆ ತಳ್ಳುತ್ತದೆ. ಆದ್ದರಿಂದ ಮಾನಸಿಕ ಒತ್ತಡವನ್ನು ಹೊರದಬ್ಬುವ ಪ್ರಯತ್ನವನ್ನು ನಾವೇ ಮಾಡಬೇಕು.
ಇಲ್ಲಿ ಕೆಲವು ಮಸಾಜ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಸಾಜ್ ಗಳು ಮಾನಸಿಕ ಒತ್ತಡವನ್ನು ಹೊರಹಾಕುವಲ್ಲಿ ತುಂಬಾ ಸಹಕಾರಿಯಾಗಿದೆ:

ಥಾಯಿ ಮಸಾಜ್
ಈ ಮಸಾಜ್ ಮಾನಸಿಕ ಒತ್ತಡವನ್ನು ಸಂಪೂರ್ಣವಾಗಿ ಹೊರ ಹಾಕುತ್ತದೆ. ಮನಸ್ಸಿನ ಮತ್ತು ದೇಹದ ಚೈತನ್ಯ ಹೆಚ್ಚಿಸಲು ಈ ಮಸಾಜ್ ಮಾಡಿಸಿದರೆ ಒಳ್ಳೆಯದು.

ಆರ್ಯುವೇದಿಕ್ ಮಸಾಜ್
ಆರ್ಯುವೇದದಲ್ಲಿ ಗಿಡ ಮೂಲಿಕೆ ಮತ್ತು ತೈಲಗಳನ್ನು ಬಳಸಿ ಮಾಡಲಾಗುವುದು. ಮನಸ್ಸಿಗೆ ತುಂಬಾ ಬೇಜಾರಾದಾಗ ಈ ಮಸಾಜ್ ಮಾಡಿಸಿ, ಮನಸ್ಸು ನಿರಾಳವಾಗುವುದು.

ಸೂಜಿ ಚಿಕಿತ್ಸೆ ಮಸಾಜ್
ಸೂಜಿ ಚಿಕಿತ್ಸೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಸೂಜಿ ಚಿಕಿತ್ಸೆ ಮಸಾಜ್ ನಲ್ಲಿ ಮುಳ್ಳಿನ ರೀತಿಯ ಉಪಕರಣವನ್ನು ಬಳಸಿ ಮಸಾಜ್ ಮಾಡಲಾಗುವುದು. ಇದು ನಿಮ್ಮ ನರಗಳ ಸೆಳೆತವನ್ನು ಕಮ್ಮಿ ಮಾಡಿ ಮನಸ್ಸನ್ನು ನಿರಾಳವಾಗಿ ಮಾಡುತ್ತದೆ.

ಸ್ವೆಡೀಷ್ ಮಸಾಜ್
ವಿವಿಧ ಬಗೆಯ ತೈಲವನ್ನು ಮಿಶ್ರಣ ಮಾಡಿ ಈ ಮಸಾಜ್ ಮಾಡಲಾಗುವುದು. ಈ ಮಸಾಜ್ ಮಾಡಿಸಿದರೆ ಮಸಾಜ್ ಮಾಡಿಸಲು ಹೋಗುವಾಗ ಇರುವ ಖಿನ್ನತೆ ಬರುವಾಗ ಮಾಯವಾಗಿರುತ್ತದೆ.

ಆರೋಮ ಥೆರಪಿ
ತುಂಬಾ ಮಾನಸಿಕ ಒತ್ತಡ ಇರುವಾಗ ಸುಗಂಧ ತೈಲದಿಂದ ಪಾದಗಳಿಗೆ ಮಸಾಜ್ ನೋಡಿ, ಏನೋ ನಿರಾಳ ಅನಿಸುತ್ತದೆ. ಆದ್ದರಿಂದ ಅಪರೂಪಕ್ಕೆ ಆರೋಮ ಥೆರಪಿ ಮಸಾಜ್ ಮಾಡಿಸಿಕೊಳ್ಳಿ.

ಬಾಲಿ ಮಸಾಜ್
ಈ ಮಸಾಜ್ ಭಾರತ ಮತ್ತು ಚೈನಾದ ಮಸಾಜ್ ವಿಧಾನಗಳ ಮಿಶ್ರವಾಗಿದೆ. ಈ ಮಸಾಜ್ ಮಾಡಿಸಿದರೆ ಪುಟಿಯುವ ಉತ್ಪಾಹ ಮರಳಿ ದೊರೆಯುವುದು.

ಲೋಮಿ-ಲೋಮಿ ಮಸಾಜ್
ಇದರಲ್ಲಿ ಯಾವುದೇ ಎಣ್ಣೆ, ಮೂಲಿಕೆ ಬಳಸುವುದಿಲ್ಲ, ಬದಲಾಗಿ ಹೆಬ್ಬರಳನ್ನು ಬಳಸಿ ಮಸಾಜ್ ಮಾಡಲಾಗುವುದು. ಒತ್ತಡವನ್ನು ಹೊರದಬ್ಬುವಲ್ಲಿ ಇದು ಕೂಡ ಸಹಕಾರಿ.

ಹಾಟ್ ಸ್ಟೋನ್ ಮಸಾಜ್
ಇದು ವೈಜ್ಞಾನಿಕವಾದ ಮಸಾಜ್ ಆಗಿದೆ. ಹೆಚ್ಚಿನ ಸ್ಪಾ ಸೆಂಟರ್ ಗಳಲ್ಲಿ ಈ ಮಸಾಜ್ ಮಾಡಲಾಗುವುದು.

ಬಿಸಿ ಎಣ್ಣೆಯ ಮಸಾಜ್
ಈ ಮಸಾಜ್ ಮಾಡಿಸಿದರೆ ಕ್ಷಣಾರ್ಧದಲ್ಲಿ ಟಾರ್ಗೆಟ್, ಇತರ ಸಮಸ್ಯೆಯಿಂದ ಮನಸ್ಸು ಹೊರಬಂದು ನಿರಾಳವಾಗುವಿರಿ.

ಕಳಾರಿ ಮಸಾಜ್
ಕಳಾರಿ ಮಸಾಜ್ ಗೆ ಕೇರಳ ತುಂಬಾ ಫೇಮಸ್. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಚುರುಕಾಗಿ ಇರುವಂತೆ ಮಾಡುವುದಲ್ಲದೆ, ಮಾನಸಿಕ ಒತ್ತಡವನ್ನು ಹೊರದಬ್ಬುತ್ತದೆ.



Click it and Unblock the Notifications