Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಡಲೆಯಲ್ಲಿರುವ ಪ್ರಮುಖ ಆರೋಗ್ಯಕರ ಗುಣಗಳು
ಸ್ವಲ್ಪ ಹೊತ್ತು ಸುಮ್ಮನೆ ಕೂತಾಗ ಅಥವಾ ಸ್ನೇಹಿತರ ಜೊತೆ ಪೇಟೆ ತಿರುಗಾಡುವಾಗ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಈ ರೀತಿ ಅನಿಸಿದಾಗ ಕುರುಕುರೆ, ಚಿಪ್ಸ್ ಅಂತ ತಿನ್ನುವ ಬದಲು ಕಡಲೆಯನ್ನು ಕೊಂಡು ತಿನ್ನುವುದು ಒಳ್ಳೆಯದು. ಏಕೆಂದರೆ ಚಿಪ್ಸ್ ನಂತಹ ಕರಿದ ಪದಾರ್ಥಗಳು ಬಾಯಿಗೆ ರುಚಿ ಕೊಟ್ಟರೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಆದರೆ ಕಡಲೆ ತಿಂದರೆ ಬಾಯಿಗೆ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಕಡಲೆ ತಿಂದರೆ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ನೋಡೋಣ ಬನ್ನಿ.
ಕಡಲೆಯ ಆರೋಗ್ಯಕರ ಗುಣಗಳು:
ಬಾಡಿ ಬಿಲ್ಡರ್ ಗೆ ಹಾಗೂ ದೇಹದ ತೂಕ ಹೆಚ್ಚಿಸಿಕೊಳ್ಳುವವರಿಗೆ ಬೆಸ್ಟ್ ಸ್ನ್ಯಾಕ್ಸ್:ಕಡಲೆಯಲ್ಲಿ ಪ್ರೊಟೀನ್, ಖನಿಜಾಂಶಗಳು, antioxidants, ವಿಟಮಿನ್ ಗಳು ಅಧಿಕವಾಗಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅಮೈನೋ ಆಸಿಡ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ: ಇದರಲ್ಲಿ Antioxidants ಹೆಚ್ಚಾಗಿ ಇರುವುದರಿಂದ ಕರುಳಿನ ಕ್ಯಾನ್ಸರ್ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಇದರಲ್ಲಿರುವ ಪಾಲಿ ಫಿನೋಲಿಕ್ ಆಸಿಡ್ ಕ್ಯಾನ್ಸರ್, ಹೃದಯದ ತೊಂದರೆ, ಸೋಂಕು, ಅಲ್ಜೈಮರ್ಸ್ ಈ ರೀತಿಯ ತೊಂದರೆಗಳು ಬರದಂತೆ ತಡೆಯುತ್ತದೆ.
ವಿಟಮಿನ್ ಇ ಅಧಿಕವಾಗಿದೆ: ದೇಹದ ಹಾಗೂ ತ್ವಚೆಯೆ ಆರೋಗ್ಯಕ್ಕೆ ವಿಟಮಿನ್ ಇ ತುಂಬಾ ಒಳ್ಳೆಯದು ಹಾಗೂ ಅವಶ್ಯಕ ಕೂಡ. ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಲು ಕಡಲೆಯಲ್ಲಿರುವ ವಿಟಮಿನ್ ಇ ಪ್ರಮುಖ ಕಾರಣವಾಗಿದೆ.
ಪೋಷಕಾಂಶಗಳು: ಕಡಲೆಯಲ್ಲಿ ಪೋಷಕಾಂಶಗಳಾದ ರೈಬೋಫ್ಲೇವಿನ್, ಥೈಯಾಮಿನ್,ಪಾನ್ಥೋಥೆನಿಕ್ ಆಸಿಡ್ (pantothenic acid), ವಿಟಮಿನ್ ಬಿ, ಫೋಲೆಟ್ ಇವುಗಳು ಹೆಚ್ಚಾಗಿ ಇರುವುದರಿಂದ ಕಡಲೆ ತಿಂದರೆ ಈ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.
ಒಳ್ಳೆಯ ಕೊಬ್ಬಿನಂಶ: ಇದರಲ್ಲಿ ಒಳ್ಳೆಯ ಕೊಬ್ಬಿನಂಶವಿರುವುದರಿಂದ ಕಿಡ್ನಿ ಸಮಸ್ಯೆ, ಗಂಟಲಿನ ಸಮಸ್ಯೆ, ಥೈರಾಯ್ಡ್ ಈ ರೀತಿಯ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
