Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುಂಬಾ ಬೇಜಾರಾದಾಗ ಏನನ್ನ ತಿನ್ನಬೇಕು?
ಸಾಮಾನ್ಯವಾಗಿ ಮನಸ್ಸಿನಲ್ಲಿ ಏನಾದರೂ ಚಿಂತೆ ಇದ್ದಾಗ, ಬೇಸರದಲ್ಲಿದ್ದಾಗ ಖಿನ್ನತೆ ಕಾಣಿಸಿ ಕೊಳ್ಳುತ್ತದೆ. ಆದರೆ ಆ ರೀತಿಯ ಖಿನ್ನತೆ ಸ್ವಲ್ಪ ಹೊತ್ತಿನ ಬಳಿಕ ಹೆಚ್ಚೆಂದರೆ 2-3 ದಿನದ ಬಳಿಕ ಕಡಿಮೆಯಾಗುವುದು. ಅದೇ ಖಿನ್ನತೆ ತುಂಬಾ ದಿನ ಇದ್ದರೆ ಮಾನಸಿಕ ಅಸ್ವಸ್ಥರಾಗುತ್ತಾರೆ. ಆದ್ದರಿಂದ ಮನೆಯಲ್ಲಿ ಖಿನ್ನತೆ ಕಾಯಿಲೆ ಕಾಣಿಸಿಕೊಂಡರೆ ತುಂಬಾ ಎಚ್ಚರದಿಂದ ಇರಬೇಕು. ಖಿನ್ನತೆಯಲ್ಲಿರುವವರಿಗೆ ಕೌನ್ಸಿಲಿಂಗ್ ಕೊಡಿಸಬೇಕು, ಚಿಕಿತ್ಸೆ ನೀಡಬೇಕು, ಅದರಲ್ಲೂ ಕೆಲವೊಂದು ಆಹಾರಗಳಿವೆ ಅವುಗಳನ್ನು ಅವರ ಆಹಾರಕ್ರಮದಲ್ಲಿ ಸೇರಿಸಬೇಕು. ಆಗ ಖಿನ್ನತೆ ಕಡಿಮೆಯಾಗುವುದು.
ಮನಸ್ಸಿಗೆ ತುಂಬಾ ಬೇಜಾರು ಅನಿಸಿದಾಗ ಅದೇ ವಿಷಯದ ಬಗ್ಗೆ ಯೋಚಿಸುತ್ತಾ ಕೂತರೆ ಮನಸ್ಸಿಗೆ ಮತ್ತಷ್ಟು ಬೇಜಾರಾಗುತ್ತದೆ. ಆ ಸಮಯದಲ್ಲಿ ಮನಸ್ಸಿಗೆ ಸಮಧಾನ ಸಿಗಲು ಸಂಗೀತ ಕೇಳುವುದು, ಪ್ರಕೃತಿಯ ಸೌಂದರ್ಯವನ್ನು ನೋಡಲು ಹೋಗಿ ಬಿಡಬೇಕು. ಕೆಲವೊಮ್ಮೆ ವಿನಾಕಾರಣ ಮನಸ್ಸಿಗೆ ಬೇಜಾರಾಗುತ್ತಿರುತ್ತದೆ. ಈ ರೀತಿ ಬೇಜಾರಾಗಲು ಹಾರ್ಮೋನ್ ಗಳ ವ್ಯತ್ಯಾಸ ಕಾರಣವಾಗಿದೆ.
ಮನಸ್ಸಿಗೆ ಬೇಜಾರಾದಾಗ ಈ ಆಹಾರಗಳನ್ನು ತಿನ್ನಿ, ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ಮೂಡ್ ಸರಿಯಾಗಿ ಮಾಮೂಲಿ ಸ್ಥಿತಿಗೆ ಬರುತ್ತದೆ. So, stay cool!

1. ಡಾರ್ಕ್ ಚಾಕಲೇಟ್:
ಇದರಲ್ಲಿರುವ ಕೋಕಾದಲ್ಲಿ ಖಿನ್ನತೆಯನ್ನು ಹೋಗಲಾಡಿಸುವ ಔಷಧೀಯ ಗುಣವಿದೆ. ಇದರಲ್ಲಿರುವ ವಿಟಮಿನ್ ಬಿ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಚಾಕಲೇಟ್ ನಲ್ಲಿ ಸೆರಾಟಿನ್, ಡೊಪೈನ್, ಪೀನಲ್ ಈಥೇಲ್ ಮೈನ್ ಎಂಬ ಅಂಶಗಳಿದ್ದು ಖಿನ್ನತೆಯನ್ನು ಹೋಗಲಾಡಿಸಲು ಸಹಕಾರಿಯಾಗದೆ.

2. ಕಾರ್ಬೋಹೈಡ್ರೇಟ್:
ಡಯಟ್ ನ ಹೆಸರಿನಲ್ಲಿ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ತಿನ್ನದಿರುವುದು ಒಳ್ಳೆಯದಲ್ಲ. ಪ್ರತಿದಿನ ದೇಹಕ್ಕೆ ಇತರ ಪೋಷಕಾಂಶಗಳ ಜೊತೆ ಕಾರ್ಬೋಹೈಡ್ರೇಟ್ ಆಹಾರ ಕೂಡ ಅವಶ್ಯಕ. ಆ ಆಹಾರಗಳಿಗೆ ಖಿನ್ನತೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಇದೆ.

3. ಸಮುದ್ರ ಆಹಾರ:
ಮೀನು, ಮೃದ್ವಂಗಿಗಳು, ಏಡಿ ಈ ಆಹಾರಗಳು ಖಿನ್ನತೆಯನ್ನು ಹೋಗಲಾಡಿಸುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

4.ಚಿಕನ್:
ಚಿಕನ್ ನಲ್ಲಿ ಒಮೆಗಾ 3 ಅಂಶ ಹಾಗೂ ಅಮೈನೋ ಅಂಶವಿರುತ್ತದೆ. ನಾನ್ ವೆಜ್ ತಿನ್ನುವವರು ಮನಸ್ಸಿನಲ್ಲಿ ಬೇಜಾರು ಇದ್ದಾಗ ಚಿಕನ್ ಸೂಪ್ ಕುಡಿದರೆ ಸಾಕು ದುಃಖ ಖಿನ್ನತೆ ದೂರವಾಗುತ್ತದೆ.

5. ಹಾಲು:
ಮನಸ್ಸಿಗೆ ಬೇಜಾರು ಅನಿಸುತ್ತಿದೆಯೇ ಒಂದು ಲೋಟ ಹಾಲು ಅಥವಾ ಮೊಸರು ಕುಡಿಯಿರಿ ಮನಸ್ಸಿಗೆ ಸಮಧಾನ ಸಿಗುತ್ತದೆ.

6. ಕಿಡ್ನಿ ಬೀನ್ಸ್:
ಕಿಡ್ನಿ ಬೀನ್ಸ್ ನ ಪದಾರ್ಥ, ಪಾಲಾಕ್ ಸೊಪ್ಪು, ಬಾದಾಮಿ ಇವುಗಳ ಸೇವನೆಯಿಂದ ಖಿನ್ನತೆಯನ್ನು ಕಡಿಮೆ ಮಾಡಬಹುದು.



Click it and Unblock the Notifications
