Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಲವ್ ಹಾರ್ಮೋನ್ ಹೆಚ್ಚಿಸುವ ಆಹಾರಗಳು
ದಾಂಪತ್ಯ ಜೀವನದಲ್ಲಿ ಲೈಂಗಿಕ ಚಟುವಟಿಕೆಗಳು ಜೀವನದ ಪ್ರಮುಖವಾದ ಅಂಗವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಸಂಬಂಧದಲ್ಲಿ ಕೊರತೆ ಕಂಡು ಬರದಿದ್ದರೆ ಬಾಂಧವ್ಯವೂ ಚೆನ್ನಾಗಿರುತ್ತದೆ. ಹೆಚ್ಚಿನವರು ಲೈಂಗಿಕ ತೊಂದರೆಗಳಿಂದ ಬಳಲುತ್ತಿರುತ್ತಾರೆ. ಲೈಂಗಿಕ ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು, ಲೈಂಗಿಕ ಸಾಮರ್ಥ್ಯ ಕಡಿಮೆಯಾಗಿರುವುದು ಈ ರೀತಿಯ ಸಮಸ್ಯೆಗಳಿದ್ದರೆ ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ.
ಹೆಚ್ಚಿನವರಲ್ಲಿ ಮಕ್ಕಳಿಲ್ಲದ ಸಮಸ್ಯೆ ಕಂಡುಬರುತ್ತದೆ. ಈ ರೀತಿಯ ಸಮಸ್ಯೆಗೆ ಲೈಂಗಿಕ ತೊಂದರೆ ಕೂಡ ಒಂದು ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಹಾರ್ಮೋನ್ ಗಳ ತೊಂದರೆಯಿದ್ದರೆ ಮಕ್ಕಳಾಗುವುದರಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು, ಲೈಂಗಿಕ ಅತೃಪ್ತಿ ತರಬಹುದು. ಈ ರೀತಿಯ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಕೆಲವೊಂದು ಆಹಾರಗಳಿವೆ.
ಲವ್ ಹಾರ್ಮೋನ್ ಹೆಚ್ಚಿಸುವ ಆಹಾರಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

1. ಮೊಳಕೆ ಕಾಳುಗಳು:
ಮೊಳಕೆ ಕಾಳುಗಳಲ್ಲಿ ವಿಟಮಿನ್ ಬಿ ಅಂಶವಿರುವುದರಿಂದ ಲೈಂಗಿಕ ಕ್ರಿಯೆಗೆ ಸಹಕಾರಿಯಾದ ಹಾರ್ಮೋನ್ ಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ, ಈ ಕಾಳುಗಳು ಮಹಿಳೆ ಹಾಗೂ ಪುರುಷ ಇಬ್ಬರಲ್ಲೂ ಲವ್ ಹಾರ್ಮೋನ್ ಉತ್ಪತ್ತಿಗೆ ಸಹಾಯಮಾಡುತ್ತದೆ.

2. ಪಾಲಾಕ್ ಸೊಪ್ಪು, ಬೆಣ್ಣೆಹಣ್ಣು:
ಇವುಗಳಲ್ಲಿ ವಿಟಮಿನ್ ಬಿ3 ಅಂಶವಿರುವುದರಿಂದ ಲವ್ ಹಾರ್ಮೋಮ್ ಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಇದರಿಂದ ರಕ್ತವು ದೇಹ ಎಲ್ಲಾ ಅಂಗಾಂಗಳಿಗೆ ಹರಿಯುವಂತೆ ಮಾಡಿ ದೇಹದಲ್ಲಿ ಜೀವ ಕಣಗಳು ಚಟುವಟಿಕೆಯಿಂದ ಇರುವಂತೆ ಮಾಡುವುದರಿಂದ ಲೈಂಗಿಕ ತೃಪ್ತಿ ದೊರೆಯುತ್ತದೆ.

3. ವಿಟಮಿನ್ ಇ:
ವಿಟಮಿನ್ ಇ ಅನ್ನು ಲವ್ ವಿಟಮಿನ್ ಎಂದು ಕರೆಯುತ್ತಾರೆ. ವಿಟಮಿನ್ ಇ ಆಹಾರಗಳಾದ ಸಿಹಿಗೆಣಸು, ರಾಸ್ ಬೆರಿ, ಕ್ಯಾರೆಟ್ ಇವುಗಳನ್ನುಲೈಂಗಿಕ ಚಟುವಟಿಕೆ ನಡೆಸುವ 3 ಗಂಟೆ ಮೊದಲು ತಿನ್ನಬೇಕು.

4. ಸಲಾಡ್:
ಪಾಲಾಕ್ ಸೊಪ್ಪು, ಬ್ರೊಕೋಲಿ, ವಾಲ್ ನೆಟ್, ಕುಂಬಳಕಾಯಿ ಬೀಜ , ನಿಂಬೆ ರಸ, ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟ್, ಕರಿಮೆಣಸಿನ ಪುಡಿ ಇವುಗಳನ್ನು ಹಾಕಿ ತಯಾರಿಸುವ ಸಲಾಡ್ ತಿನ್ನುವುದು ಒಳ್ಳೆಯದು.

5. ವಿಟಮಿನ ಡಿ ಆಹಾರ:
ವಿಟಮಿನ್ ಡಿ ಇರುವ ಅಣಬೆಯನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಅಣಬೆ ತಿಂದರೆ ವಿಟಮಿನ್ ಕೆ ಪೋಷಕಾಂಶದ ಕೊರತೆಯನ್ನು ಕೂಡ ನೀಗಿಸಬಹುದು.

6. ಅಂಡಾಣು ವೃದ್ಧಿಸುವ ಆಹಾರಗಳು:
ಮೊಳಕೆ ಬರಿಸಿದ ದವಸಧಾನ್ಯಗಳು, ಬ್ರೊಕೋಲಿ, ಬ್ಲ್ಯಾಕ್ ಬೆರಿ, ಅಂಜೂರ ಈ ಆಹಾರಗಳನ್ನು ಲೈಂಗಿಕ ಕ್ರಿಯೆ ನಡೆಸುವ 2-3 ಗಂಟೆಗಳು ಮುಂಚೆ ತಿಂದರೆ ಅಂಡಾಣುಗಳು ಹಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಲು ಸಹಾಯಮಾಡುತ್ತದೆ.

7. ಕಲ್ಲಂಗಡಿ ಹಣ್ಣು:
ಕಲ್ಲಂಗಡಿ ಹಣ್ಣಿನಲ್ಲಿರುವ ಪೋಷಕಾಂಶಗಳು ಲವ್ ಹಾರ್ಮೋನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಲೈಂಗಿಕ ನಿಶ್ಯಕ್ತಿ ಇರುವವರು ಪ್ರತಿದಿನ 1-2 ಲೋಟ ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆಯದು.



Click it and Unblock the Notifications
