Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಟ್ಟಿನ ರಕ್ತ ನಿಮ್ಮ ಜೀವವನ್ನು ಕಾಪಾಡಬಹುದು!
ವಿಜ್ಞಾನ ಬೆಳೆದಂತೆ ನಮ್ಮ ಆಲೋಚನೆಗಳು ಬದಲಾಗುತ್ತಿವೆ, ಒಬ್ಬರ ದೇಹದ ಭಾಗಗಳನ್ನು ಮತ್ತೊಬ್ಬರ ದೇಹಕ್ಕೆ ಜೋಡಿಸಿ ಅವರಿಗೊಂದು ಹೊಸ ಜೀವ ನೀಡುವಷ್ಟು ವಿಜ್ಞಾನ ಬೆಳೆದಿದೆ. ಋತುಸ್ರಾವದ ರಕ್ತದಿಂದ ಅನೇಕ ಮಾರಕ ರೋಗಗಳನ್ನು ಗುಣಪಡಿಸಬಹುದು ಅನ್ನುವುದು ಅದಕ್ಕೊಂದು ಉದಾಹರಣೆ.
ಸ್ಟೆಮ್ ಸೆಲ್ ಇತರ ಸೆಲ್ ಗಳಿಗಿಂತ ಭಿನ್ನವಾದದು. ದೇಹದಲ್ಲಿ ಅನೇಕ ರೀತಿಯ ಸೆಲ್ (ಕಣಗಳಿವೆ)ಗಳಿವೆ. ರಕ್ತ ಕಣ, ಮಿದುಳಿನ ಕಣ, ನರಗಳ ಕಣ ಹೀಗೆ ಅನೇಕ ಕಣಗಳಿವೆ. ಈ ಸ್ಟೆಮ್ ಸೆಲ್ ಗಳು ಈ ಎಲ್ಲಾ ಕಣಗಳಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಈ ರೀತಿಯ ಸ್ಟೆಮ್ ಸೆಲ್ ಗಳು ಮಕ್ಕಳ ಹೊಕ್ಕಳ ಬಳ್ಳಿಯಲ್ಲಿ ಕಂಡು ಬರುತ್ತದೆ, ಈಗ ಈ ಆ ರೀತಿಯ ಸ್ಟೆಮ್ ಸೆಲ್ ಗಳು ಮುಟ್ಟಿನ ರಕ್ತಸ್ರಾವದಲ್ಲಿ ಕಂಡು ಬರುತ್ತದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಸ್ಟೆಮ್ ಸೆಲ್ ಗಳು ಕ್ಯಾನ್ಸರ್ ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ಅದರಲ್ಲೂ ಮೂಳೆಯಲ್ಲಿ ಕಂಡು ಬರುವ ಕ್ಯಾನ್ಸರ್ ಅನ್ನು ಸ್ಟೆಮ್ ಸೆಲ್ ಬಳಸಿ ಸಂಪೂರ್ಣವಾಗಿ ಗುಣಪಡಿಸುತ್ತದೆ.
ಹೃದಯಾಘಾತ, ಪಾರ್ಶ್ವವಾಯು ಈ ರೀತಿಯ ಕಾಯಿಲೆಗಳು ಉಂಟಾದರೆ ಸ್ಟೆಮ್ ಸೆಲ್ ಬಳಸಿಗುಣಪಡಿಸಬಹುದು.
ಋತುಸ್ರಾವದಲ್ಲಿ ಸ್ಟೆಮ್ ಸೆಲ್ ಕಂಡು ಬರುವುದು ಹೇಗೆ?
ಮುಟ್ಟಿನಲ್ಲಿ ರಕ್ತವು ಯೂಟ್ರಸ್ ನ ಮೂಲಕ ಬರುವುದರಿಂದ ಈ ರಕ್ತದಲ್ಲಿ ಜೀವಣಣಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಇರುತ್ತದೆ. ಇದರಲ್ಲಿರುವ ಸ್ಟೆಮ್ ಸೆಲ್ ಯಾವುದೇ ಕಣಗಳಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಮುಟ್ಟಿನ ರಕ್ತವನ್ನು ಶೇಖರಿಸಿಟ್ಟರೆ ಈ ಮೇಲೆ ಹೇಳಿದ ಕಾಯಿಲೆಗಳು ಒಂದು ವೇಳೆ ಕಾಣಿಸಿಕೊಂಡರೆ ಗುಣಪಡಿಸುವುದು ಸುಲಭವಾಗುವುದು. ಈ ರೀತಿ ರಕ್ತವನ್ನು ಸಂಗ್ರಹಿಸಿಡಲು 30-50 ಸಾವಿರ ಖರ್ಚು ಬೀಳುತ್ತದೆ. ಆದರೆ ಆಪತ್ತು ಕಾಲದಲ್ಲಿ ಪ್ರಾಣವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಸೂಚನೆ: ಮುಟ್ಟಿನ ರಕ್ತವನ್ನು ಸಂಗ್ರಹಿಸಿಟ್ಟರೆ ಒಂದು ವೇಳೆ ಈ ಮೇಲಿನ ಕಾಯಿಲೆಗಳು ಕಾಣಿಸಿಕೊಂಡರೆ ಈ ಸ್ಟೆಮ್ ಸೆಲ್ ಬಳಸಿ ಸುಲಭದಲ್ಲಿ ಗುಣಪಡಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
