Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಇಲಿಯಿಂದ ಕಚ್ಚಿಸಿಕೊಂಡರೆ ಆರೋಗ್ಯಕ್ಕೆ ಅಪಾಯ!

ಏಕೆಂದರೆ ಆ ಇಲಿಗಳನ್ನು ಹಾಗೇ ಕೈಯಲ್ಲಿ ಹಿಡಿದರೆ ಕಚ್ಚಿ ಬಿಡುತ್ತವೆ. ಹೀಗೆ ಇಲಿ ಕಚ್ಚಿದರೆನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದರಿಂದ ಸೋಂಕು ಬಂದು ಜ್ವರ ಬರುವುದು. ಇಲಿಯಿಂದ ಉಂಟಾಗುವ ಆಪತ್ತು ತಪ್ಪಿಸಲು ಈ ಕೆಳಗಿನ ಸಲಹೆಯನ್ನು ಪಾಲಿಸುವುದು ಒಳ್ಳೆಯದು.
1. ಬೋನಿನಲ್ಲಿ ಸಿಕ್ಕಿದ ಇಲಿಗಳನ್ನು ಮುಟ್ಟಬೇಡಿ, ಕಚ್ಚಬಹುದು. ಒಂದು ವೇಳೆ ಇಲಿ ಕಚ್ಚಿ ಬಿಟ್ಟರೆ ರಕ್ತ ತುಂಬಾ ಹರಿಯದಂತೆ ನೋಡಿಕೊಳ್ಳಿ. ತುಂಬಾ ತಣ್ಣಗಿರುವ ನೀರನ್ನು ಗಾಯಕ್ಕೆ ಹಾಕಿದರೆ ರಕ್ತ ಹರಿಯುವುದು ನಿಲ್ಲುತ್ತದೆ.
2. ರಕ್ತ ಹರಿಯುವುದು ನಿಂತ ನಂತರ ಸೋಪ್ ಹಚ್ಚಿ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಸೋಪಿನ ಅಂಶವನ್ನು ಚೆನ್ನಾಗಿ ತೊಳೆಯಬೇಕು, ಇಲ್ಲದಿದ್ದರೆ ತುರಿಸಲು ಪ್ರಾರಂಭಿಸುತ್ತದೆ.
3. ನಂತರ ಗಾಯವನ್ನು ಒರೆಸಿ ಡ್ರೆಸ್ಸಿಂಗ್ ಮಾಡಬೇಕು, ಹೀಗೆ ಡ್ರೆಸ್ಸಿಂಗ್ ಮಾಡುವಾಗ antibiotic ಔಷಧಿ ಹಾಕಿ ಕಟ್ಟವುದು ಒಳ್ಳೆಯದು. ಏಕೆಂದರೆ ಇಲಿ ಕಚ್ಚಿದರೆ ಸೋಂಕು ಆಗುವುದು ಜಾಸ್ತಿ.
4. ಒಂದು ವೇಳೆ ಇಲಿ ಕೈಬೆರಳಿಗೆ ಕಚ್ಚಿದ್ದರೆ ಕೈಬೆರಳಿನಲ್ಲಿರುವ ಉಂಗುರಗಳನ್ನು ಬಿಚ್ಚಿಡಿ. ಇಲ್ಲದಿದ್ದರೆ ಕೈಬೆರಳುಗಳು ಊದಿಕೊಂಡು ಉಂಗುರ ಬಿಗಿಯಾಗಿ ಮತ್ತಷ್ಟು ನೋವಾಗುವುದು.
ಇಲಿ ಕಚ್ಚಿದ ನಂತರ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತದೆ.
ಬಾಯಾರಿಕೆಯಾಗುವುದು, ತುಟಿ ಒಣಗುವುದು, ಕಚ್ಚಿದ ಭಾಗದಲ್ಲಿ ಕೆಂಪಾಗುವುದು, ಮೈ ಬಿಸಿಯಾದ ಅನುಭವ ಮತ್ತು ತುರಿಕೆ ಕಂಡು ಬರುತ್ತದೆ.
5. ಇಲಿ ಕಚ್ಚಿದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಇಲಿ ಕಚ್ಚಿದ 10 ದಿನಗಳ ಬಳಿಕ ಜ್ವರ ಕಾಣಿಸಿಕೊಳ್ಳಬಹುದು, ಗಾಯ ಒಣಗಿದ್ದರೂ ಜ್ವರ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ವೈದ್ಯರನ್ನು ಕಾಣುವುದು ಒಳ್ಳೆಯದು.
ಇಲಿ ಕಚ್ಚಿ ಜ್ವರ ಬಂದರೆ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತದೆ:
ತುಂಬಾ ಜ್ವರ, ಕೈಕಾಲುಗಳಲ್ಲಿ ನೋವು, ವಾಂತಿ, ತಲೆನೋವು
ಜ್ವರ 2-3 ಇದ್ದರೆ ಕಾಲುಗಳು ಊದಿಕೊಂಡು ತುಂಬಾ ನೋವು ಉಂಟಾಗುವುದು. ಆದ್ದರಿಂದ ಇಲಿ ಕಚ್ಚಿದ ನಂತರ ವೈದ್ಯರನ್ನು ಕಂಡು ಜ್ವರ ಬರದಂತೆ ತಡೆಯಲು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಳ್ಳೆಯದು.
ಸಲಹೆ:ಇಲಿ ಕಚ್ಚಿದರೆ ಈ ಕೆಳಗಿನ ಮನೆ ಮದ್ದು ಮಾಡಬಹುದು
ಉತ್ತರಾಣಿ ಸೊಪ್ಪಿನ (Achyranthus aspera) ಐದು ಎಲೆಗಳನ್ನು ತಿನ್ನಬೇಕು
ಈಶ್ವರಿ ಬೇರನ್ನು (Aristolochia indiaca) ನಿಂಬೆರಸದಲ್ಲಿ ತೇದು ಕಚ್ಚಿದ ಜಾಗಕ್ಕೆ ಹಚ್ಚಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
