Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಫುಡ್ ಪಾಯಿಸನ್ ತಡೆಗಟ್ಟುವುದು ಹೇಗೆ?

ಇದು ಉಂಟಾದರೆ ವಾಂತಿ, ಬೇಧಿ ಉಂಟಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು. ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಫುಡ್ ಪಾಯಿಸನ್ ಆಗದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
1. ಅಡುಗೆಯನ್ನು ಮಾಡುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಅದರಲ್ಲೂ ಮಾಂಸದ ಅಡುಗೆ ಮಾಡುವಾಗ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು.
2. ತರಕಾರಿಗಳನ್ನು ತೊಳೆದು ತಿನ್ನಬೇಕು. ಅಡುಗೆಗೆ ಬಳಸುವಾಗ ಚೆನ್ನಾಗಿ ತೊಳೆದು ಸರಿಯಾದ ರೀತಿಯಲ್ಲಿ ಬೇಯಿಸಬೇಕು.
3. ಆಹಾರ ತಿಂದು ಮಿಕ್ಕಿದರೆ ಅದನ್ನು ಕೂಡಲೇ ಫ್ರಿಜ್ ನಲ್ಲಿಡಬೇಕು, ಇಲ್ಲದಿದ್ದರೆ ಚೆನ್ನಾಗಿ ಮುಚ್ಚಿಡಬೇಕು. ಆಹಾರ ಪ್ಯಾಕೆಟ್ ಕೊಳ್ಳುವಾಗ ಕಾಲಾವಧಿ ಮುಗಿದ ಆಹಾರವನ್ನು ತಿನ್ನಬಾರದು. ಹಣ್ಣು ಅಥವಾ ತರಕಾರಿ ಸ್ವಲ್ಪ ಹಾಳಾದರೂ ಕೂಡ ತಿನ್ನಲು ಹೋಗಬಾರದು.
4. ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಶುಚಿಯಾದ ಹೋಟೆಲ್ ನಿಂದ ಮಾತ್ರ ಆಹಾರ ತಿನ್ನಬೇಕು.
5. ಶೌಚಾಲಯಕ್ಕೆ ಹೋಗಿ ಬಂದ ತಕ್ಷಣ ಕೈಗಳನ್ನು ಸೋಪು ಹಾಕಿ ತೊಳೆಯಬೇಕು.
6. ಬೇಧಿ, ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ ಆಹಾರವನ್ನು ತಿನ್ನುವಾಗ ಸ್ಪೂನ್ ಬಳಸಿ ತಿನ್ನಬೇಕು.
7. ಆಹಾರವನ್ನು ಸಂಗ್ರಹಿಸಿಡುವ ಸ್ಥಳವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.
ಫುಡ್ ಪಾಯಿಸನ್ ಉಂಟಾದರೆ ಚಿಕಿತ್ಸೆ:
1. ಫುಡ್ ಪಾಯಿಸನ್ ಉಂಟಾದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಘನ ಆಹಾರ, ಕೊಬ್ಬಿನಂಶವಿರುವ ಆಹಾರ ಮತ್ತು ಮದ್ಯವನ್ನು ಮುಟ್ಟಬಾರದು.
2. ಮೊದಲು ತೆಳು ಆಹಾರ ಅಂದರೆ ಗಂಜಿ, ಜ್ಯೂಸ್ ತಿಂದು ಸ್ವಲ್ಪ ಹುಷರಾದ ಮೇಲೆ ಮಾಮೂಲಿ ರೀತಿ ಆಹಾರ ತಿನ್ನಬಹುದು.
3. ಬ್ಲ್ಯಾಕ್ ಟೀ ಮಾಡಿ ಕುಡಿಯಬಹುದು ಅಥವಾ ಒಂದು ಚಮಚ ಮೆಂತೆ ಪುಡಿಯನ್ನು ಒಂದು ಗ್ಲಾಸ್ ನೀರಿನಲ್ಲಿ ಅಥವಾ ಮೊಸರಿನಲ್ಲಿ ಹಾಕಿ ಕುಡಿದರೆ ಬೇಧಿ ಕಡಿಮೆಯಾಗುವುದು.
ಫುಡ್ ಪಾಯಿಸನ್ ಕಾಣಿಸಿಕೊಂಡರೆ ವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
