Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೈಕ್ರೋವೇವ್ ಆಹಾರ ಆರೋಗ್ಯಕರವೇ?

ಮೈಕ್ರೋವೇವ್ ಬಂದ ಮೇಲೆ ಕೆಲವರಂತೂ ಕೇಕ್, ಗ್ರಿಲ್ಡ್ ಪದಾರ್ಥಗಳನ್ನು ಹೊರಗಿನಿಂದ ಕೊಂಡು ತರುವುದಕ್ಕಿಂತ ಮನೆಯಲ್ಲಿಯೇ ತಯಾರಿಸುತ್ತಿದ್ದಾರೆ. ಆದರೆ ಈ ಮೈಕ್ರೋವೇವ್ ಅಡುಗೆ ಆರೋಗ್ಯಕ್ಕೆ ಒಳ್ಳೆಯದೇ ಎಂಬ ಗುಮಾನಿ ಹೆಚ್ಚಿನವರಲ್ಲಿದೆ. ಮೈಕ್ರೋವೇವ್ ಅಡುಗೆ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಬೇಗನೆ ಅಡುಗೆ ಮಾಡಬೇಕು ಆದರೆ ಆ ಅಡುಗೆ ಆರೋಗ್ಯಕರವಾಗಿರಬೇಕು ಎಂದು ಬಯಸುವವರು ಈ ಕೆಳಗಿನ ಆಹಾರ ಪದಾರ್ಥಮಾಡಬಹುದು.
ಕೆಂಪಕ್ಕಿ ಅನ್ನ: ಕೆಂಪಕ್ಕಿ ಅನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ತೂಕ ಕಡಿಮೆ ಮಾಡುತ್ತೆ. ಮೈಕ್ರೋವೇವ್ ನಲ್ಲಿ ಈ ಅನ್ನ ಬೇಯಿಸುವ ಮೊದಲು 3-4 ಬರಿ ತೊಳೆದು ನಂತರ ಬೇಯಿಸಬೇಕು. ಮೃಕ್ರೋವೇವ್ ನಲ್ಲಿ ಅಡುಗೆ ಮಾಡುವ ಮೊದಲು 20 ನಿಮಿಷ ತೊಳೆದು ನೀರಿನಲ್ಲಿ ನೆನೆಹಾಕಿ. ನಂತರ ಆ ನೀರಿನ್ನೇ ಅಡುಗೆಗೆ ಬಳಸಿ. ಇದರಿಂದ ಪೋಷಕಾಂಶಗಳು ಹಾಳಾಗುವುದಿಲ್ಲ. ಇದರ ಪ್ರಮುಖ ಪ್ರಯೋಜನವೆಂದರೆ ಇದನ್ನು ಒಲೆಯಲ್ಲಿ ಅಥವಾ ಗ್ಯಾಸ್ ನಲ್ಲಿ ಮಾಡುವುದಾದರೆ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಮೈಕ್ರೋವೇವ್ ನಲ್ಲಿ ಅತ್ಯಲ್ಪ ಸಮಯದಲ್ಲಿ ಕೆಂಪಕ್ಕಿ ಅನ್ನ ರೆಡಿಯಾಗುವುದು.
ಮೊಟ್ಟೆ: ಮೊಟ್ಟೆಯನ್ನು ಎಗ್ ಬುರ್ಜಿ ರೀತಿ ಮಾಡಿ ತಿಂದರೆ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಈ ರೀತಿ ಮೈಕ್ರೋವೇವ್ ನಲ್ಲಿ ಮಾಡಲು ತುಂಬಾ ಎಣ್ಣೆ ಕೂಡ ಬಳಸುವ ಅಗತ್ಯವಿಲ್ಲ. ಈ ರೀತಿ ಮಾಡುವಾಗ ಸ್ವಲ್ಪ ಖಾರ ಮತ್ತು ಉಪ್ಪು ಸೇರಿಸಿದರೆ ರುಚಿ ಮತ್ತಷ್ಟು ಹೆಚ್ಚಾಗುವುದು.
ಜೋಳ: ಜೋಳವನ್ನು ಮಕ್ರೋವೇವ್ ನಲ್ಲಿ ಬಳಸುವ ಬಟ್ಟಲಿಗೆ ಹಾಕಿ ಅದರಲ್ಲಿ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ನಂತರ ಒಂದು ಚಮಚ ಬೆಣ್ಣೆ ಮತ್ತು ಸ್ವಲ್ಪ ಖಾರ ಹಾಕಿ ಮಿಶ್ರ ಮಾಡಿದರೆ ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕರವಾಗಿ ಕೂಡ ಇರುತ್ತದೆ.
ಪಾಪ್ ಕೋರ್ನ್: ಆಲೂಗೆಡ್ಡೆ ಚಿಪ್ಸ್ ಮತ್ತು ಇತರ ಕುರುಕಲು ತಿಂಡಿ ತಿನ್ನುವ ಬದಲು ಪಾಪ್ ಕೋರ್ನ್ ಮಾಡಿ ತಿನ್ನಬಹುದು.
ಫ್ರೂಟ್ ಸಲಾಡ್: ಹಣ್ಣುಗಳನ್ನು ಹಾಗೇ ಕತ್ತರಿಸಿ ಮಿಶ್ರ ಮಾಡಿ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿದರೆ ಫ್ರೂಟ್ ಸಲಾಡ್ ತಿನ್ನಲು ರುಚಿಕರವಾಗಿರುತ್ತದೆ. ಆದರೆ ಇನ್ನೂ ಸ್ವಲ್ಪ ಭಿನ್ನ ರುಚಿ ಬೇಕೆಂದು ಬಯಸುವುದಾದರೆ ಹಣ್ಣುಗಳನ್ನು ಕತ್ತರಿಸಿ, ಮೈಕ್ರೋವೇವ್ ನಲ್ಲಿ ಬೇಯಿಸಿ, ಅದರ ಮೇಲೆ ಚಾಕಲೇಟ್ ಸಿರಪ್ ಹಾಕಿದರೆ ತಿನ್ನಲು ರುಚಿಕರವಾಗಿರುತ್ತದೆ.
ಬೀಟ್ ರೂಟ್: ಬೀಟ್ ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೀಟ್ ರೂಟ್ ಅನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಮೈಕ್ರೋವೇವ್ ನಲ್ಲಿ ಬೇಯಿಸಿಬಹುದಾದ ಬಟ್ಟಲಿನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು 8-10 ನಿಮಿಷ ಬೇಯಿಸಿ ನಂತರ ಕರಿಮೆಣಸಿನ ಪುಡಿ ಹಾಕಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಇದು ಹೊಟ್ಟೆಯನ್ನು ಶುದ್ಧೀಕರಿಸಲು ಸಹಕಾರಿಯಾಗಿದೆ.
ಚಿಕನ್: ಚಿಕನ್ ಗ್ರೇವಿ ಅಥವಾ ಕಬಾಬ್ ಮಾಡುವಾಗ ಎಣ್ಣೆ ಬಳಸಲಾಗುವುದು. ಇದರಿಂದ ಕೊಬ್ಬಿನಂಶ ಹೊಟ್ಟೆ ಸೇರುತ್ತದೆ. ಆದರೆ ಗ್ರಿಲ್ಡ್ ಚಿಕನ್ ತಿಂದರೆ ಬಾಯಿಗೆ ರುಚಿ ದೇಹದ ತೂಕ ಹೆಚ್ಚಾಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
