Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಡುಗೆಗೆ ಆರೋಗ್ಯಕರ ಎಣ್ಣೆ ಯಾವುದು?
ಅಡುಗೆಗೆ ನಾನಾ ಬಗೆಯ ಎಣ್ಣೆ ಬಳಸುತ್ತೇವೆ. ಆದರೆ ಅಡುಗೆಗೆ ಬಳಸುವ ಎಣ್ಣೆ ಆರೋಗ್ಯಕರವಾಗಿರಬೇಕು. ಕಲಬೆರಿಕೆಯಾದ ಎಣ್ಣೆ ಬಳಸಬಾರದು. ಎಣ್ಣೆ ಬಳಸಿದ ಕೂಡಲೇ ಕೊಲೆಸ್ಟ್ರಾಲ್ ಜಾಸ್ತಿ ಆಗುವುದಿಲ್ಲ. ಆದರೆ ತುಂಬಾ ಕರಿದ ಪದಾರ್ಥಗಳನ್ನು ತಿನ್ನುತ್ತಾ ಹೋದರೆ ಮಾತ್ರ ಕೊಲೆಸ್ಟ್ರಾಲ್ ಜಾಸ್ತಿಯಾಗುವುದು. ಎಲ್ಲಾ ಅಡುಗೆಗೆ ಒಂದೇ ಬಗೆಯ ಎಣ್ಣೆ ಬಳಸದೇ ಆರೋಗ್ಯಕರ ಎಣ್ಣೆಗಳಲ್ಲಿ 2-3 ಬಗ್ಗೆ ಎಣ್ಣೆ ತಂದು ಬಳಸಿದರೆ ಭಿನ್ನವಾದ ರುಚಿ ಸಿಗುತ್ತದೆ. ಅಡುಗೆಗೆ ಸೂಕ್ತವಾದ ಆರೋಗ್ಯಕರ ಎಣ್ಣೆಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ ನೋಡಿ.

ಸೂರ್ಯಕಾಂತಿ ಎಣ್ಣೆ: ಅಡುಗೆಗೆ ಅತ್ಯಧಿಕ ಬಳಸುವ ಎಣ್ಣೆ ಅಂದರೆ ಸೂರ್ಯಕಾಂತಿ ಎಣ್ಣೆ, ಇದರಲ್ಲಿ linoleic ಆಸಿಡ್ ಅಂಶ ಇದ್ದು ಕೆಟ್ಟ ಕೊಲೆಸ್ಟ್ರಾಲ್ ಅಂಶ ತುಂಬಾ ಕಡಿಮೆ ಇದೆ. ಈ ಎಣ್ಣೆಯನ್ನು ಬೇಕಾದರೆ ಪಾಮೋಯಿಲ್ ಎಣ್ಣೆ ಜೊತೆ ಮಿಶ್ರ ಮಾಡಿ ಅಡುಗೆಗೆ ಬಳಸಬಹುದು.
ತುಪ್ಪ: ಶುದ್ಧ ತುಪ್ಪದಲ್ಲಿ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲ್ ಅಂಶ ಅಧಿಕವಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಶುದ್ಧ ತುಪ್ಪ ಕೆಲ ಔಷಧೀಯ ಗುಣಗಳನ್ನು ಹೊಂದಿದೆ. ಈ ತುಪ್ಪನನ್ನು ಮಿತಿಮೀರಿ ಬಳಸದೆ ಕೆಲವೊಂದು ಆಹಾರಕ್ಕಷ್ಟೇ ಬಳಸಿ.
ತೆಂಗಿನೆಣ್ಣೆ: ಕೇರಳಕ್ಕೆ ಹೋದರೆ ಪ್ರತಿಯೊಂದು ತಿಂಡಿ ಮತ್ತು ಅಡುಗೆ ಪದಾರ್ಥಗಳನ್ನು ತೆಂಗಿನೆಣ್ಣೆಯಿಂದಲೇ ತಯಾರಿಸುತ್ತಾರೆ. ತೆಂಗಿನೆಣ್ಣೆ ಕೊಲೆಸ್ಟ್ರಾಲ್ ಅಂಶ ಹೊಂದಿರುವುದಿಲ್ಲ. ಆದರೇ ಇದರಲ್ಲಿ ಕೊಬ್ಬಿನಂಶ (saturated fats)
ಕಡಲೆ ಎಣ್ಣೆ: ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿ ಇದ್ದು, ಹೃದಯದ ಸ್ವಾಸ್ಥ್ಯ ಹೆಚ್ಚಿಸುಲ್ಲಿ ಈ ಎಣ್ಣೆ ತುಂಬಾ ಸಹಕಾರಿಯಾಗಿದೆ. ಆದರೆ ಕಡಲೆ ಎಣ್ಣೆ ಕೊಳ್ಳುವಾಗ ಉತ್ತಮ ಬ್ರ್ಯಾಂಡ್ ನ ಎಣ್ಣೆ ನೋಡಿ ಕೊಂಡುಕೊಳ್ಳುವುದು ಒಳ್ಳೆಯದು. ಫ್ರೈ, ಗ್ರಿಲ್ ಮಾಡುವಾಗ ಈ ಎಣ್ಣೆ ಬಳಸಿದರೆ ಒಳ್ಳೆಯದು.
ಸಾಸಿವೆ ಎಣ್ಣೆ: ಕೆಲವೊಂದು ಅಡುಗೆಗಳನ್ನು ತಯಾರಿಸುವಾಗ ಸಾಸಿವೆ ಎಣ್ಣೆ ಬಳಸಲಾಗುವುದು. ಆದರೆ ಈ ಎಣ್ಣೆಯನ್ನು ಮಿತಿಮೀರಿ ಬಳಸದಿರುವುದು ಒಳ್ಳೆಯದು.
ರೈಸ್ ಬ್ರಾನ್ ಎಣ್ಣೆ: ಈ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಇದ್ದು ವಿಟಮಿನ್ ಇ ಅಂಶ ಮತ್ತು antoxidant ಅಧಿಕವಾಗಿರುವುದರಿಂದ ತ್ವಚೆಗೆ ಒಳ್ಳೆಯದು. ಪದಾರ್ಥಗಳನ್ನು ಕರಿಯಲು ಈ ಎಣ್ಣೆ ಬಳಸುವುದು ಒಳ್ಳೆಯದು.
ಆಲೀವ್ ಎಣ್ಣೆ: ಈ ಎಣ್ಣೆ ಅಡುಗೆಗೆ ಬಳಸುವುದಾದರೆ ತುಂಬಾ ಬಿಸಿ ಮಾಡಬೇಡಿ, ಇದು ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೋಗಲಾಡಿಸಿ ದೇಹದ ಆರೋಗ್ಯ ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
