Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಸ್ ಕ್ರೀಮ್ ಆರೋಗ್ಯಕ್ಕೆ ಒಳ್ಳೆಯದಾ?

ಚಿಕ್ಕ ಮಕ್ಕಳಂತೂ ಐಸ್ ಕ್ರೀಮ್ ಅಂಗಡಿ ಅಥವಾ ಗಾಡಿ ಕಂಡರೆ ಸಾಕು ಪೋಷಕರೂ ಕೊಡಿಸ್ದಿದ್ದರೆ ಅತ್ತು ಕರೆದು ರಂಪ ಮಾಡಿ ಬಿಡುತ್ತಾರೆ. ಇತ್ತ ಪೋಷಕರಿಗೆ ಇದನ್ನು ತಿಂದರೆ ಎಲ್ಲಿ ಕಾಯಿಲೆ ಬೀಳುತ್ತಾರೋ ಎಂಬ ಭಯ. ಆದರೆ ಐಸ್ ಕ್ರೀಮ್ ಬಗ್ಗೆ ನಿಮ್ಮಲ್ಲಿರುವ ಅಭಿಪ್ರಾಯವನ್ನು ಬದಲಾಯಿಸುವಂತಹ ಸುದ್ದಿ ಏನಪ್ಪ ಅಂದರೆ ಐಸ್ ಕ್ರೀಮ್ ಆರೋಗ್ಯಕ್ಕೆ ಒಳ್ಳೆಯದು! ಅದು ಹೇಗೆ ಒಳ್ಳೆಯದು ಎಂದು ತಿಳಿಯಲು ಮುಂದೆ ಓದಿ.
ಐಸ್ ಕ್ರೀಮ್ ಆರೋಗ್ಯಕರ ಗುಣಗಳು:
1.ಕ್ಯಾಲ್ಸಿಯಂ ಅಧಿಕವಿರುತ್ತದೆ: ಐಸ್ ಕ್ರೀಮ್ ಗಳನ್ನು ಮುಖ್ಯವಾಗಿ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುವುದು. ಕ್ಯಾಲ್ಸಿಯಂ ದೇಹಕ್ಕೆ ಸೇರಿದರೆ ಮೂಳೆಗಳು ಬಲವಾಗುತ್ತದೆ ಮತ್ತು ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಐಸ್ ಕ್ರೀಮ್ ತಿನ್ನುವುದು ಒಳ್ಳೆಯದು.
* ಐಸ್ ಕ್ರೀಮ್ ತಿಂದರೆ ಹಲ್ಲುಗಳು ಹಾಳಾಗುತ್ತವೆ ಎಂಬುದು ನಮ್ಮಲ್ಲಿ ಅನೇಕರ ನಿಲುವು. ಆದರೆ ಐಸ್ ಕ್ರೀಮ್ ನಲ್ಲಿರುವ ಕ್ಯಾಲ್ಸಿಯಂ ಅಂಶ ಹಲ್ಲುಗಳನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ.
2. ಹಾಗಾದರೆ ಚಾಕಲೇಟ್ ಐಸ್ ಕ್ರೀಮ್ ಎಂಬ ಪ್ರಶ್ನೆ ಉದ್ಭವಿಸಬಹುದು? ಈ ಚಾಕಲೇಟ್ ಐಸ್ ಕ್ರೀಮ್ ಕೂಡ ಆರೋಗ್ಯಕರವಾಗಿದೆ. ಹೃದ್ರೋಗಿಗಳು ಚಾಕಲೇಟ್ ಐಸ್ ಕ್ರೀಮ್ ತಿನ್ನುವುದು ಒಳ್ಳೆಯದು. ಇದರಲ್ಲಿ ಬಳಸುವ ಡಾರ್ಕ್ ಚಾಕಲೇಟ್ ಸ್ವಾದ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಐಸ್ ಕ್ರೀಮ್ ತಿಂದರೆ ಬಾಯಿಗೆ ರುಚಿ ಮಾತ್ರವಲ್ಲ, ಅರೋಗ್ಯಕ್ಕೂ ಒಳ್ಳೆಯದು. ಇದು ತಿನ್ನುತ್ತಿದ್ದರೆ ಮನಸ್ಸಿಗೆ ಖುಷಿಯಗುತ್ತದೆ. ಮನಸ್ಸಿಗೆ ಖುಷಿಯಾದರೆ ಒತ್ತಡವನ್ನು ಕಡಿಮೆ ಮಾಡುತ್ತದೆ.
3. ವಿಟಮಿನ್: ಐಸ್ ಕ್ರೀಮ್ ಗಳಲ್ಲಿ ವಿಟಮಿನ್ ಎ, ಡಿ, ಕೆ ಮತ್ತು ಬಿ12 ಇದ್ದು ಕಣ್ಣಿನ ದೃಷ್ಟೊಗೆ ಒಳ್ಳೆಯದು. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಕೆ ದೇಹದಲ್ಲಿ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ. ವಿಟಮಿನ್ ಬಿ12 ಮೆದುಳಿನ ಸಾಮರ್ಥ್ಯ ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಕರಿಯಾಗಿದೆ.
4. ಪ್ರೊಟೀನ್ : ಐಸ್ ಕ್ರೀಮ್ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಗಳನ್ನು ನೀಡುತ್ತದೆ. ಹೆಚ್ಚಿನವರು ಐಸ್ ಕ್ರೀಮ್ ತಿಂದರೆ ದಪ್ಪಗಾಗುತ್ತರೆ ಎಂದು ನಂಬಿದ್ದಾರೆ. ಆದರೆ ಆರೋಗ್ಯಕರ ಆಹಾರಕ್ರಮ ಪಾಲಿಸಿ ಒಂದು ಐಸ್ ಕ್ರೀಮ್ ತಿಂದರೆ ದಪ್ಪಗಾಗುವುದಿಲ್ಲ. ಅದರ ಬದಲು ಆರೋಗ್ಯ ಹೆಚ್ಚಿಸುವಲ್ಲಿ ಮತ್ತಷ್ಟು ಸಹಕಾರಿಯಾಗುವುದು. ಏಕೆಂದರೆ ಐಸ್ ಕ್ರೀಮ್ ಅನ್ನು ಚೆನ್ನಾಗಿ ಕುದಿಸಿದ ಹಾಲಿನಿಂದ ತಯಾರಿಸಲಾಗುತ್ತದೆ ಇದು ಆರೋಗ್ಯಕ್ಕೆ ಒಳ್ಳೆಯದು.
ಐಸ್ ಕ್ರೀಮ್ ಒಳ್ಳೆಯದೆಂದು ಹೇಳಿದ್ದಾರೆ ಎಂದು ಮಿತಿ ಮೀರಿ ತಿನ್ನಬಾರದು. ಮಿತಿ ಮೀರಿ ತಿಂದರೆ ಎಷ್ಟೇ ಒಳ್ಳೆಯ ಆಹಾರವಾಗಿದ್ದರೂ ಅಡ್ಡಪರಿಣಾಮ ಉಂಟಾಗುವುದು. ಐಸ್ ಕ್ರೀಮ್ ತಿನ್ನುವಾಗ ನಿಧಾನಕ್ಕೆ ತಿನ್ನಿ. ತುಂಬಾ ತಣ್ಣಗಿನ ಪದಾರ್ಥ ತಿಂದರೆ ಕೆಲವರಿಗೆ ತಲೆನೋವು ಉಂಟಾಗುತ್ತದೆ.
ಇನ್ನು ಐಸ್ ಕ್ರೀಮ್ ತಿನ್ನಬೇಕೆ? ಬೇಡ್ವೇ ? ಎಂಬ ತೀರ್ಮಾನ ನಿಮಗೆ ಬಿಟ್ಟಿದ್ದು!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
