Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಬೀಟ್ ರೂಟ್ ನಲ್ಲಿದೆ ಔಷಧೀಯ ಗುಣ!
ನಮ್ಮಲ್ಲಿ ಕೆಲವರಿಗೆ ಕೆಲವೊಂದು ತರಕಾರಿಗಳು ಆಗಿ ಬರುವುದಿಲ್ಲ. ಕೆಲವರಿಗೆ ಹಾಗಲಕಾಯಿ ಕಂಡರೆ ಆಗದಿದ್ದರೆ ಮತ್ತೆ ಕೆಲವರಿಗೆ ಬದನೆಕಾಯಿ, ಬೀಟ್ ರೂಟ್ ಈ ರೀತಿಯ ತರಕಾರಿಗಳನ್ನು ತಿನ್ನಲು ಇಷ್ಟವಾಗುವುದಿಲ್ಲ. ನೀವೂ ಅಷ್ಟೆ ಇಷ್ಟವಿಲ್ಲದ ಆಹಾರವನ್ನು ಎಷ್ಟೇ ರುಚಿಕರವಾಗಿ ಮಾಡಿದರೂ ಮುಟ್ಟಿಯೂ ನೋಡುವುದಿಲ್ಲ ಅಲ್ಲವೇ?
ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಸಗಳು ದೊರೆಯಲು ಎಲ್ಲಾ ರೀತಿಯ ತರಕಾರಿಗಳನನ್ಉ ತಿನ್ನಬೇಕು. ಏಕೆಂದರೆ ಎಲ್ಲಾ ಬಗೆಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಒಂದೇ ಬಗೆಯ ಆಹಾರದಲ್ಲಿ ಇರುವುದಿಲ್ಲ. ಅದರಲ್ಲೂ ಕೆಲವು ತರಕಾರಿಗಳು ಔಷಧೀಯ ಗುಣವನ್ನು ಹೊಂದಿದೆ. ಉದಾಹರಣೆಗೆ ಬೀಟ್ ರೂಟ್. ಬೀಟ್ ರೂಟ್ ತಿಂದರೆ ಈ ಕೆಳಗಿನ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ದೇಹಕ್ಕೆ ಶಕ್ತಿ ನೀಡುತ್ತದೆ: ಬೀಟ್ ರೂಟ್ ನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುರುವುದರಿಂದ ಇದನ್ನು ತಿಂದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ಸುಸ್ತು, ತಲೆಸುತ್ತು ಈ ರೀತಿಯ ಸಮಸ್ಯೆ ಕಂಡು ಬಂದರೆ ಬೀಟ್ ರೂಟ್ ಜ್ಯೂಸ್ ಕುಡಿದರೆ ಸಾಕು ಕಡಿಮೆಯಾಗುವುದು.
ಅಧಿಕ ಫಾಲಿಕ್ ಆಸಿಡ್: ಫಾಲಿಕ್ ಆಸಿಡ್ ಆರೋಗ್ಯಕ್ಕೆ ತುಂಬಾ ಅಗತ್ಯ. ಇದು ಜೀವಕಣಗಳ ಉತ್ಪತ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಫಾಲಿಕ್ ಆಸಿಡ್ ಕೊರತೆ ಇರುವವರು ಮಾತ್ರೆ ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ಬೀಟ್ ರೂಟ್ ಅನ್ನು ಜ್ಯೂಸ್ ಮಾಡಿ ಕುಡಿದರೆ ಸಾಕು.
ಪೋಷಕಾಂಶಗಳು: ಬೀಟ್ ರೂಟ್ ನಲ್ಲಿ ವಿಟಮಿನ್ ಎ, ಸಿ, ಬೇಟೈನ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ರಂಜಕ, ನೈಸಿನ್ ಮತ್ತು ಕಬ್ಬಿಣದಂಶ ಅಧಿಕವಿರುತ್ತದೆ.
ಹೃದಯ ಸ್ವಾಸ್ಥ್ಯಒಳ್ಳೆಯದು: ಬೀಟ್ ರೂಟ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬೀಟ್ ರೂಟ್ ದೇಹದಲ್ಲಿ ರಕ್ತಸಂಚಾರ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಬೀಟ್ ರೂಟ್ ನಲ್ಲಿರುವ ಬೇಟೈನ್ ಅಂಶ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ.
ರಕ್ತ ಹೀನತೆ ನಿವಾರಿಸುತ್ತದೆ: ರಕ್ತ ಹೀನತೆ ಸಮಸ್ಯೆ ಇರವವರು ಪ್ರತಿನಿತ್ಯ ಬೀಟ್ ರೂಟ್ ಜ್ಯೂಸ್ ಕುಡಿಯುವುದು, ಬೀಟ್ ರೂಟ್ ನಿಂದ ಪದಾರ್ಥಗಳನ್ನು ತಯಾರಿಸಿ ತಿನ್ನಬೇಕು. ಈ ರೀತಿ ಮಾಡಿದರೆ ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು.
ಆದ್ದರಿಂದ ಬೀಟ್ ರೂಟ್ ತಿನ್ನಲು ಇಷ್ಟವಿರಲಿ ಅಥವಾ ಇಲ್ಲದಿರಲಿ, ಆದರೆ ಇದನ್ನು ಕಡ್ಡಾಯವಾಗಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications