Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಸ್ತನ ಗಾತ್ರ ಹೆಚ್ಚಿಸುವ ಆಹಾರಗಳು
ಹೆಣ್ಣು ಮಕ್ಕಳ ದೇಹ ಆಕರ್ಷಕವಾಗಿ ಕಾಣಲು ಸ್ತನದ ಗಾತ್ರ ಸರಿಯಾದ ರೀತಿಯಲ್ಲಿ ಇರಬೇಕು. ಕೆಲವರು ತನ್ನ ಸ್ತನದ ಗಾತ್ರ ತುಂಬಾ ಚಿಕ್ಕದಿದೆ ಆದ್ದರಿಂದ ಆಕರ್ಷಕವಾಗಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಬೇಜಾರು ಹಾಗೂ ಮುಜುಗರ ಪಟ್ಟುಕೊಳ್ಳುತ್ತಾರೆ, ಸ್ವಲ್ಪ ದುಡ್ಡು ಇರುವವರು ಸ್ತನದ ಶಸ್ತ್ರ ಕ್ರಿಯೆ ಮಾಡಿಸಿ ಗಾತ್ರವನ್ನು ದೊಡ್ಡದು ಮಾಡಿಕೊಳ್ಳುತ್ತಾರೆ. ಈ ರೀತಿ ಸ್ತನ ಶಸ್ತ್ರಕ್ರಿಯೆ ಮಾಡಿಸುವುದು ಇದೆಯೆಲ್ಲಾ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ!
ಹೆಣ್ಣು ಮಕ್ಕಳಲ್ಲಿ ಈಸ್ಟ್ರೋಜನ್ ನ ಕೊರತೆ ಇದ್ದರೆ ಸ್ತನ ಗಾತ್ರ ಚಕ್ಕದಾಗುವುದು. ಹೆಣ್ಣು ಮಕ್ಕಳಿಗೆ ವಯಸ್ಸು 12 ತುಂಬುವಾಗ ದೇಹದ ಆಕಾರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಋತುಮತಿಯಾಗಿ ಸ್ವಲ್ಪ ದಿನಗಳಲ್ಲಿಯೇ ಅವಳಿಗೆ ಹೆಣ್ಣಿನ ಕಳೆ ಬಂದು ಬಿಡುತ್ತದೆ. ಅದೇ ತುಂಬಾ ಚಿಕ್ಕ ವಯಸ್ಸಿನಲ್ಲಿ ಋತುಮತಿಯಾದರೆ ಸ್ತನ ಗಾತ್ರ ಸರಿಯಾಗಿ ಬೆಳೆಯುವುದಿಲ್ಲ. ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ಕಡಿಮೆಯಾದರೆ ಸ್ತನಗಾತ್ರವೂ ಕಡಿಮೆಯಾಗುವುದು.
ಆದ್ದರಿಂದ ಸ್ತನಗಾತ್ರ ಹೆಚ್ಚಿಸಲು ಬಯಸುವವರು ಈ ಕೆಳಗಿನ ಆಹಾರ ಸೇವನೆ ಮಾಡಿದರೆ ಸಾಕು. ಈ ಆಹಾರಗಳಲ್ಲಿ ಈಸ್ಟ್ರೋಜನ್ ಅಂಶವಿರುವುದರಿಂದ ಸ್ತನ ಗಾತ್ರ ಹೆಚ್ಚಾಗುವುದು, ದೇಹವು ಆಕರ್ಷಕವಾಗಿ ಕಾಣುವುದು:

1. ಅಕ್ಕಿ, ಕೆಂಪಕ್ಕಿ, ಬಾರ್ಲೆ:
ದೇಹದಲ್ಲಿ ಟೆಸ್ಟೊಸ್ಟೆರೋನ್ ಉತ್ಪತ್ತಿಯನ್ನು ನಿಯಂತ್ರಿಸಲು ಮಹಿಳೆಯರಲ್ಲಿನ ಲೈಂಗಿಕ ಹಾರ್ಮೋನಾದ ಈಸ್ಟ್ರೋಜನ್ ಅಂಶ ಹೆಚ್ಚಿರುವ ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವಿಸಬೇಕು. ಬಾರ್ಲೆ, ಕೆಂಪಕ್ಕಿ, ಓಟ್ಸ್ ಸೇವನೆ ಕೂಡ ಸ್ತನದ ಗಾತ್ರ ಹಿಗ್ಗುವಂತೆ ಮಾಡುತ್ತದೆ.

2. ಚಿಕನ್, ಮೊಟ್ಟೆ:
ಕೋಳಿ ಮಾಂಸದಲ್ಲಿ ಹೆಚ್ಚು ಈಸ್ಟ್ರೋಜನ್ ಇರುತ್ತದೆ. ಆದ್ದರಿಂದ ಚಿಕನ್ ನಿಮ್ಮ ಆಹಾರ ಕ್ರಮದಲ್ಲಿದ್ದರೆ ಉತ್ತಮ.

3. ಹಾಲು, ಹಾಲಿನ ಉತ್ಪನ್ನಗಳು:
ಹಾಲು, ಮೊಸರು, ಮಜ್ಜಿಗೆ, ಪನ್ನೀರ್ ಹಾಗೂ ಇತರ ಹಾಲಿನ ಉತ್ಪನ್ನಗಳಲ್ಲಿ ಈಸ್ಟ್ರೋಜೆನ್ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಸ್ತನದ ಗಾತ್ರ ಹೆಚ್ಚಬೇಕೆಂದರೆ ಈ ಉತ್ಪನ್ನಗಳ ಸೇವನೆ ತುಂಬಾ ಮುಖ್ಯ.

4. ಕಾಳುಗಳು:
ಕಡಲೆ ಕಾಳು, ಕಿಡ್ನಿ ಬೀನ್, ಕೆಂಪು ಬೀನ್, ಅಲಸಂಡೆ ಕಾಳು, ಕಡಲೆ ಬೇಳೆ, ಅವರೆಕಾಳು, ಬೇಳೆ, ಬಟಾಣಿ, ಕೊತ್ತಂಬರಿ ಇವುಗಳ ಸೇವನೆಯಿಂದ ಈಸ್ಟ್ರೋಜನ್ ಅಂಶ ಹೆಚ್ಚಿಸಬಹುದು.

5. ತರಕಾರಿಗಳು:
ಹಸಿರು ತರಕಾರಿಗಳು ಮತ್ತು ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಇರುವ ಆಹಾರಗಳ ಸೇವನೆಯಿಂದ ಸ್ತನದ ಜೀವಕೋಶಗಳನ್ನು ಹೆಚ್ಚಿಸಿಕೊಳ್ಳಬಹುದು. ಆಸ್ಪರಾಗಸ್, ಬೀಟ್ ರೂಟ್, ಎಲೆಕೋಸು, ಹೂಕೋಸು, ದವಸಧಾನ್ಯಗಳು, ಈರುಳ್ಳಿ, ಸೌತೆಕಾಯಿ, ಕುಂಬಳಕಾಯಿ ಇವುಗಳಿಂದಲೂ ನೈಸರ್ಗಿಕವಾಗಿ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಬಹುದು.

6.: ಬ್ರೊಮೈನ್ ಮತ್ತು ಮ್ಯಾಂಗನೀಸ್ ಆಹಾರ:
ಬ್ರೊಮೈನ್ ಮತ್ತು ಮ್ಯಾಂಗನೀಸ್ ಅಂಶ ಈಸ್ಟ್ರೋಜನ್ ಹಾರ್ಮೋನುಗಳನ್ನು ವೃದ್ಧಿಸುತ್ತದೆ. ಸೇಬು, ಬಾದಾಮಿ, ಜೋಳ, ಶುಂಠಿ, ಬೆಳ್ಳುಳ್ಳಿ, ಸೀಗಡಿ, ಸೋಯಾ, ಅಗಸದ ಬೀಜ (flax seeds)ಇವುಗಳಲ್ಲಿ ಬ್ರೊಮೈನ್ ಮತ್ತು ಮ್ಯಾಂಗನೀಸ್ ಹೆಚ್ಚಿರುವುದರಿಂದ ಇದು ಸ್ತನದ ಆಕಾರವನ್ನು ಹಿಗ್ಗಿಸಲು ಸಹಕರಿಸುತ್ತದೆ.

7. ಹಣ್ಣುಗಳು:
ಚೆರ್ರಿ, ಸ್ಟ್ರಾಬೆರಿ ಇವುಗಳಲ್ಲಿ ಈಸ್ಟ್ರೋಜೆನ್ ಹೆಚ್ಚಿರುತ್ತದೆ. ಆದ್ದರಿಂದ ಇವುಗಳನ್ನು ಸೇವಿಸಿದರೆ ಸ್ತನದ ಆಕಾರವನ್ನು ಬದಲಿಸಿಕೊಳ್ಳಬಹುದು.

8. ತಿನ್ನಬಾರದ ಆಹಾರಗಳು:
ಹೆಚ್ಚು ಎಳ್ಳು ತಿನ್ನುವುದರಿಂದ ಮತ್ತು ಕಾಫಿ ಸೇವನೆ, ಹೆಚ್ಚು ಉಪ್ಪು ಹೊಂದಿದ ಮತ್ತು ಜಂಕ್ ಫುಡ್ ಸೇವನೆಯನ್ನು ತ್ಯಜಿಸುವುದರಿಂದ ಸ್ತನದ ಗಾತ್ರದ ಹೆಚ್ಚಳ ಸಾಧ್ಯವಾಗುತ್ತೆ.



Click it and Unblock the Notifications
