Latest Updates
-
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ
ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ಸೇವಿಸಬೇಕಾದ ಆಹಾರ
ಅಧ್ಯಯನಗಳ ಪ್ರಕಾರ 10ರಲ್ಲಿ 4 ಜನರಿಗೆ ಪಿತ್ತಕೋಶದಲ್ಲಿ ಕಲ್ಲು ಬೆಳೆದಿರುತ್ತದೆ. ಆದ್ದರಿಂದ ಹೆಚ್ಚಿನ ಜನರಿಗೆ ತಮ್ಮ ಪಿತ್ಥಕೋಶದಲ್ಲಿ ಕಲ್ಲು ಬೆಳೆದಿದೆ ಎಂಬುದು ಗೊತ್ತೇ ಇರುವುದಿಲ್ಲ. ಇವುಗಳಿಂದ ನೋವಿರುವುದಿಲ್ಲ. ಆದರೆ ಹೀಗಿದ್ದಾಗ ಎಂದಿಗೂ ಆರೋಗ್ಯಯುತವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ.
ಯಾವುದೇ ಲಕ್ಷಣಗಳಿಲ್ಲದವರು ಡಯೆಟ್ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಅಗತ್ಯವಿಲ್ಲ. ಪಿತ್ಥಕೋಶದಲ್ಲಿ ಕಲ್ಲಿದ್ದರೆ, ಸಾಮಾನ್ಯವಾಗಿ ವೈದ್ಯರು ಪಿತ್ಥಕೋಶವನ್ನೇ ತೆಗೆದುಹಹಾಕುತ್ತಾರೆ. ಬಹಳಷ್ಟು ಜನರಿಗೆ ಪಿತ್ಥಕೋಶವನ್ನು ತೆಗೆದ ನಂತರದಲ್ಲಿ ತಮ್ಮ ಇಷ್ಟದ ಯಾವುದೇ ವಸ್ತುವನ್ನು ತಿನ್ನಬಹುದು.
ಪಿತ್ಥಕೋಶದ ಕಲ್ಲುಗಳು ಎಂದರೇನು ?
ಪಿತ್ಥಕೋಶದ ಕಲ್ಲುಗಳೆಂದರೆ, ಪಿತ್ಥಕೋಶದಲ್ಲಿ ಬೆಳೆಯುವ ಕಲ್ಲುಗಳು. ಈ ಕಲ್ಲುಗಳು ಸಾಮಾನ್ಯವಾಗಿ ಕೊಲೆಸ್ಟರಾಲ್‌ನಿಂದ ರೂಪುಗೊಳ್ಳುತ್ತವೆ. ಯಕೃತ್ತು ಪಿತ್ಥರಸವನ್ನು ಉತ್ಪಾದಿಸುತ್ತದೆ. ಈ ಪಿತ್ಥರಸವು ಪಿತ್ಥಕೋಶದಲ್ಲಿ ಸೇರಿಕೊಳ್ಳುತ್ತವೆ. ಆಹಾರವನ್ನು ಸೇವಿಸಿದಾಗ, ಅದರಲ್ಲೂ ವಿಶೇಷವಾಗಿ ಕೊಬ್ಬಿನಾಂಶದ ಆಹಾರವನ್ನು ತಿಂದಾಗ ಸಿಸ್ಟಿಕ್ ನಾಳದ ಮೂಲಕ ಪಿತ್ಥರಸವನ್ನು ಪಿತ್ಥಕೋಶಕ್ಕೆ ಪ್ರವೇಶಿಸಿ ಸಣ್ಣ ಕರುಳಿಗೆ ಹೋಗುತ್ತದೆ. ಕೆಲವು ಬಾರಿ ಕಲ್ಲುಗಳು ನಾಳದಲ್ಲೇ ಉಳಿದುಕೊಳ್ಳುತ್ತವೆ. ಇದರಿಂದಾಗಿ ಪಿತ್ಥಕೋಶದಲ್ಲಿ ನೋವು ಬರುತ್ತದೆ. ಆದ್ದರಿಂದ ನೀವು ಪಿತ್ಥಕೋಶದಲ್ಲಿ ಕಲ್ಲು ಬೆಳೆಯಬಲ್ಲಂಥ ಆಹಾರವನ್ನು ತಿನ್ನುವುದರಿಂದ ಪಿತ್ಥಕೋಶದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಯಾವ ಆಹಾರ ಈ ಸಮಸ್ಯೆಯನ್ನು ದೂರ ಮಾಡುತ್ತದೆ ಎಂಬುದನ್ನು ತಿಳಿಯಿರಿ.
ಪಿತ್ಥಕೋಶದ ಕಲ್ಲಿನ ಸಮಸ್ಯೆಗೆ ಒಳಗಾಗುವವರು ಯಾರು ?
ಸಾಮಾನ್ಯವಾಗಿ ನಾಲ್ಕು ರೀತಿಯ ಸಮಸ್ಯೆಯನ್ನು ಹೊಂದಿರುವವರು ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವ ಸಾಧ್ಯತೆಗಳು ಹೆಚ್ಚು. ಅವುಗಳೆಂದರೆ; ಫ್ಯಾಟ್, ಫೊರ್ಟಿ, ಫೀಮೇಲ್ ಮತ್ತು ಫರ್ಟೈಲ್. ಅಧ್ಯಯನದ ಪ್ರಕಾರ ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಪ್ರಮುಖ ಕಾರಣವೆಂದರೆ ಬೊಜ್ಜು. ಅದರಲ್ಲೂ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು. ಎತ್ತರ ಮತ್ತು ತೂಕದ ಲಯ ತಪ್ಪಿದಷ್ಟೂ ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಒಂದೇ ಸಮನೆ ತೂಕ ಕಳೆದುಕೊಳ್ಳುವಿಕೆಯೂ ಪಿತ್ಥಕೋಶದಲ್ಲಿ ಕಲ್ಲು ಬೆಳೆಯುತ್ತಿರುವುದರ ಸಂಕೇತವಾಗಿರಬಹುದು.
ಹಾಗೆಯೇ ದೇಹದ ತೂಕ ಹೆಚ್ಚು ಕಡಿಮೆಯಾಗುವುದು ಪಿತ್ಥಕೋಶದಲ್ಲಿ ಕಲ್ಲು ಬೆಲೆಯುತ್ತಿದೆ ಎಂಬುದರ ಸ್ಪಷ್ಟ ಸಂಕೇತ. 40 ವರ್ಷಕ್ಕಿಂತ ಹೆಚ್ಚಿನ ಮಹಿಳೆಯರಲ್ಲಿ ಪಿತ್ಥಕೋಶದ ಕಲ್ಲು ಬೆಳೆಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇನ್ನು ಗರ್ಭಿಣಿಯರಲ್ಲೂ ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕುಟುಂಬದಲ್ಲಿ ಯಾರಿಗಾದೂ ಪಿತ್ಥಕೋಶದಲ್ಲಿ ಕಲ್ಲು ಬೆಳೆದಿದ್ದರೆ, ಅವರ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೂ ಈ ಸಮಸ್ಯೆ ಎದುರಾಗಬಹುದು. ರುತುಸ್ರಾವ ನಿಯಂತ್ರಣಕ್ಕೆ ಮಹಿಳೆಯರು ಈಸ್ಟ್ರೋಜೆನ್‌ಗಳನ್ನು ಬಳಸುತ್ತಿದ್ದರೆ ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವ ಸಾಧ್ಯತೆಗಳಿವೆ.
ದೂರವಿಡಬೇಕಾದ ಆಹಾರಗಳು
ಪಿತ್ಥಕೋಶಕ್ಕೆ ಕಾರಣವಾಗಬಹುದಾದ ಆಹಾರವನ್ನು ಸಾಮಾನ್ಯವಾಗಿ ಎಲ್ಲರೂ ದೂರವಿಡುವಂಥದ್ದು: ಮೊಟ್ಟೆಗಳು (ಕೆಲವರಿಗೆ ಬೇಯಿಸಿದ ಮೊಟ್ಟೆ ಅಥವಾ ಮೃದುವಾದ ಮೊಟ್ಟೆ ನಿರುಪದ್ರವಿ), ಹಂದಿಮಾಂಸ, ಈರುಳ್ಳಿ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಕಾಫಿ, ದ್ರಾಕ್ಷಿಹಣ್ಣು, ಕಿತ್ತಳೆ ಹಣ್ಣು, ಬೀನ್ಸ್ (ಹಸಿರು ಬೀನ್ಸ್ ಹೊರತುಪಡಿಸಿ), ಬೇಳೆಕಾಳುಗಳು, ಜೋಳ, ಅಲ್ಕೋಹಾಲ್, ಕೊಬ್ಬಿನ ಅಂಶಗಳು, ಸಂಸ್ಕರಿಸಿದ ಎಣ್ಣೆ ಮತ್ತು ಟ್ರಾನ್ಸ್-ಫ್ಯಾಟ್‌ಗಳು
ಆಹಾರವನ್ನು ಹುರಿಯಬೇಡಿ
ಪಿತ್ಥಕೋಶದ ಸಮಸ್ಯೆಗೆ ಕಾರಣವಗಬಹುದಾದ ಇತರ ಪದಾರ್ಥಗಳು: ಬ್ಲ್ಯಾಕ್ ಟೀ, ಚಾಕೊಲೇಟ್, ಐಸ್‌ಕ್ರೀಮ್, ಹಣ್ಣಿನ ಜ್ಯೂಸ್, ಮಾರ್ಗರಿನ್, ಕಾರ್ಬೊನೇಟೆಡ್ ಬೆವರೇಜಸ್, ನಲ್ಲಿ ನೀರು, ಟರ್ನಿಪ್‌ಗಳು, ಕ್ಯಾಬೇಜ್, ಕಾಲಿಫ್ಲವರ‍್, ಓಟ್ಸ್, ಗೋಧಿ, ಬಾರ್ಲೆ, ರೈ, ಕೃತಕ ಸಿಹಿ, ಸಂರಕ್ಷಕಗಳು, ಬಿಳಿ ಹಿಟ್ಟಿನಿಂಥ ಸಂಸ್ಕರಿಸಿದ ಆಹಾರಗಳು. ಇದೆಲ್ಲದರ ಜೊತೆಗೆ ನೀವು ಧೂಮಪಾನವನ್ನು ದೂರವಿಡಬೇಕು. ಹೆಚ್ಚು ತಿನ್ನಬೇಡಿ ಮತ್ತು ಒತ್ತಡದಲ್ಲಿ ತಿನ್ನಬೇಡಿ.
ತಿನ್ನಬೇಕಾದ ಆಹಾರಪದಾರ್ಥಗಳು
ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ನೀವು ತಿನ್ನಬೇಕಾದ ಆಹಾರ ಸಂಪೂರ್ಣ ಆರೋಗ್ಯಯುತವಾದದ್ದು. ಇದರಲ್ಲಿ ಅನುಮಾನವೇ ಬೇಡ. ನಿಮ್ಮ ಆಹಾರವನ್ನು ನೀವೇ ತಯಾರಿಸಿಕೊಳ್ಳಿ. ಸಾಮಾನ್ಯವಾಗಿ ಸಮಸ್ಯೆಯನ್ನು ತಂದೊಡ್ಡದ ಆಹಾರಗಳೆಂದರೆ: ಬೀಟ್ಸ್, ಸವತೆಕಾಯಿ, ಹಸಿರು ಬೀನ್ಸ್, ಓಕ್ರಾ, ಸಿಹಿ ಬಟಾಟೆ, ವಿನೆಗರ‍್, ಬೆಳ್ಳುಳ್ಳಿ, ಟೊಮ್ಯಾಟೋಗಳು, ಶಾಲೋಟ್ಸ್, ಮೀನು, ನಿಂಬೆ, ದ್ರಾಕ್ಷಿ, ಸೇಬು, ಬೆರ್ರಿ, ಪಪ್ಪಾಯಿ, ಪೀಯರ‍್ಸ್, ಓಮೆಗಾ ೩
ಎಣ್ಣೆ ಮತ್ತು ಸಸ್ಯಾಹಾರಿ ಎಣ್ಣೆ
ಒಂದೊಮ್ಮೆ ನಿಮ್ಮ ಪಿತ್ಥಕೋಶದಲ್ಲಿ ಕಲ್ಲು ಬೆಳೆದಿದ್ದರೆ ಆಗ ಸೇವಿಸಲೇಬೇಕಾದ ಆಹಾರಪದಾರ್ಥಗಳಿವು. ಬ್ರೆಡ್, ಸೆರೆಲ್ಸ್, ಪಾಸ್ತಾ, ಅನ್ನ ಮತ್ತು ಆಲೂಗಡ್ಡೆಗಳು. ಈ ಎಲ್ಲಾ ಪದಾರ್ಥಗಳನ್ನು ಎಣ್ಣೆಯನ್ನು ಬಳಸದೇ ತಯಾರಿಸಿಕೊಳ್ಳುವುದು ಅತ್ಯುತ್ತಮ. ಸಾಮಾನ್ಯವಾಗಿ ಹಲವರು ಕಾಫಿ, ಟೀ, ಹಾಲು ಮತ್ತು ಹಣ್ಣಿನ ಜ್ಯೂಸನ್ನು ಬಿಡುತ್ತಾರೆ. ಬೆಳಗಿನ ತಿಂಡಿಯ ಜೊತೆ ಕುಡಿಯಲು ಅತ್ಯುತ್ತಮವಾದ ಪಾನೀಯವೆಂದರೆ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿ ಕುಡಿಯುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











