ಖಿನ್ನತೆಯನ್ನು ಗುಣಪಡಿಸದಿದ್ದರೆ ಜೀವಕ್ಕೆ ಅಪಾಯ!

Depression Disorder Symptoms
ತುಂಬಾ ಚಟುವಟಿಕೆಯಿಂದ ನಗುನಗುತ್ತಾ ಇದ್ದವರು ಇದ್ದಕ್ಕಿದ್ದ ಹಾಗೇ ತುಂಬಾ ಮೌನವಹಿಸಿದರೆ, ತುಂಬಾ ನಿರಾಸಕ್ತಿಯಿಂದ ಇದ್ದರೆ ಅವರ ಬಗ್ಗೆ ಮನೆಯವರು ಅಥವಾ ಜೊತೆಯಲ್ಲಿರುವವರು ಎಚ್ಚರಿಕೆ ವಹಿಸುವುದು ಒಳ್ಳೆಯದು.

ಕೆಲವರಿಗೆ ಮನಸ್ಸಿಗೆ ತುಂಬಾ ಬೇಜಾರು ಉಂಟಾದರೆ, ಒಂದು ವಾರದವರೆಗೆ ಬೇಜಾರಾಗಿದ್ದು ನಿಧಾನಕ್ಕೆ ಚೇತರಿಸಿಕೊಳ್ಳುತ್ತಾರೆ, ಅಂತಹವರಿಗೆ ಸಮಧಾನದ ಮಾತುಗಳನ್ನು ಹೇಳಿ ಅವರನ್ನು ಮೊದಲಿನಂತೆ ಮಾಡಬಹುದು. ಆದರೆ ಮತ್ತೆ ಕೆಲವರು ತುಂಬಾ ಖಿನ್ನತೆ ಅನುಭವಿಸುತ್ತಾರೆ, ಆದರೆ ಅದಕ್ಕೆ ಕಾರಣವೇನು ಎಂದು ಮನೆಯವರಿಗೆ ತಿಳಿಯದೇ ಕೂಡ ಇರಬಹುದು. ಖಿನ್ನತೆಯನ್ನು ಹಾಗೇ ಬಿಟ್ಟರೆ ಮಾನಸಿಕ ಸ್ವಾಸ್ಥ್ಯ ಕೂಡ ಕಳೆದುಕೊಳ್ಳಬಹುದು ಅಥವಾ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಈ ರೀತಿಯ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿ ಹದಿಹರೆಯದ ವಯಸ್ಸಿನಲ್ಲಿ, ವಯಸ್ಸಾದಾಗ, ಮಹಿಳೆಯರಲ್ಲಿ ಮೆನೋಪಸ್ ಸಮಯದಲ್ಲಿ, ದೀರ್ಘಕಾಲ ಗರ್ಭನಿರೋಧಕ ಮಾತ್ರೆ ಸೇವಿಸುತ್ತಿರುವವರಲ್ಲಿ, ನಿರೋದ್ಯೋಗಿಗಳಲ್ಲಿ, ಒಂಟಿ ಜೀವನ ಸಾಗಿಸುತ್ತಿರುವವರಲ್ಲಿ ಹೆಚ್ಚಾಗಿ ಖಿನ್ನತೆ ಕಂಡು ಬರುತ್ತದೆ. ಖಿನ್ನತೆ ಕಾಯಿಲೆಯಿಂದ ಬಳಲುವವರನ್ನು ಈ ಕೆಳಗಿನ ಲಕ್ಷಣಗಳಿಂದ ಗುರುತಿಸಬಹುದು:

ಲಕ್ಷಣಗಳು:

* ಬೇಸರ, ದುಃಖ, ಮಂಕುತನ, ಯಾವುದೇ ವಿಚಾರ, ಚಟುವಟಿಕೆ, ಕೆಲಸ, ಕರ್ತವ್ಯಗಳಲ್ಲಿ ಆಸಕ್ತಿ ತೋರಿಸದಿರುವುದು

* ತಾನು ನಿಷ್ಟ್ರಯೋಜಕ/ಇತರರಿಗೆ ಹೊರೆ ಎಂಬ ಭಾವನೆ, ಕೀಳರಿಮೆ, ನಿದ್ರಾಹೀನತೆ, ಹಸಿವಿಲ್ಲ, ತಿನ್ನುವ ಆಹಾರ ರುಚಿಸುವುದಿಲ್ಲ. ಲೈಂಗಿಕ ವಿಚಾರದಲ್ಲೂ ನಿರಾಸಕ್ತಿ, ಉದಾಸೀನ, ಮಲಬದ್ಧತೆ, ಶರೀರದಲ್ಲಿ ಯಾವುದೇ ಕಾಯಿಲೆ/ನ್ಯೂನತೆ ಇಲ್ಲದಿದ್ದರೂ, ತಲೆನೋವು, ಎದೆ ನೋವು, ಕತ್ತು/ಮೈ ನೋವು, ಕೈಕಾಲು ನೋವುಗಳು, ತಲೆಸುತ್ತು, ಸುಸ್ತು-ಆಯಾಸ, ಕೈಕಾಲು ಜೋಮು, ಕಿವಿಯಲ್ಲಿ ಗುಂಯ್ ಎನ್ನುವ ಶಬ್ಧ, ದೇಹದ ಯಾವುದೋ ಭಾಗದಲ್ಲಿ ಅಸ್ಪಷ್ಟವಾದ ಸಂಕಟದ ಅನುಭವ

* ಏಕಾಗ್ರತೆ ಇಲ್ಲದಿರುವುದು, ಮರೆವು, ಗೊಂದಲ, ಆತ್ಮಹತ್ಯೆಯ ಆಲೋಚನೆ-ಪ್ರಯತ್ನ ಇವು ಖಿನ್ನತೆ ರೋಗದ ಸಾಮಾನ್ಯ ಲಕ್ಷಣಗಳು.

ಕೆಲವರಿಗೆ ಈ ರೀತಿಯ ಖಿನ್ನತೆ ಕೆಲವೊಂದು ಅಹಿತರಕರ ಘಟನೆಯಿಂದ ಉಂಟಾದರೆ ಮತ್ತೆ ಕೆಲವರಿಗೆ ಯಾವುದೇ ಕಾರಣವಿಲ್ಲದೆ ಉಂಟಾಗುವುದು. ಯಾವುದೇ ಕಾರಣವಿಲ್ಲದೆ ಖಿನ್ನತೆಗೆ ಒಳಗಾದರೆ ರೋಗಿ ಒಂಟಿಯಾಗಿರಲು ಬಯಸುತ್ತಾರೆ. ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಮತ್ತೆ ಕೆಲವರಲ್ಲಿ Masked Deperssion (ಮುಖವಾಡ ಧರಿಸಿದ ಖಿನ್ನತೆ) ಖಿನ್ನತೆ ಕಾಣಿಸಿಕೊಳ್ಳುತ್ತದೆ. ಇವರಿಗೆ ದೇಹದಲ್ಲಿ ಯಾವುದೇ ಕಾಯಿಲೆಯಿಲ್ಲದಿದ್ದರೂ ನೋವು, ಸುಸ್ತು, ದುಃಖ, ನಿರಾಸಕ್ತಿಯಿಮದ ಇರುತ್ತಾರೆ. ಈ ರೀತಿ ಇದ್ದರೂ ಕೂಡ ನನಗೆ ಆ ರೀತಿ ಇದೆ ಎಂದು ಒಪ್ಪಿಕೊಳ್ಳುವುದಿಲ್ಲ.

ಚಿಕಿತ್ಸೆ: ಮನೆಯವರಲ್ಲಿ ಯಾರಿಗಾದರೂ ಈ ರೀತಿಯ ಖಿನ್ನತೆ ಕಾಣಿಸಿದರೆ ಕೂಡಲೇ ಮನಶಾಸ್ತ್ರಜ್ಞರ ಹತ್ತರ ಅವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು. ತುಂಬಾ ಜನ ಮನಶಾಸ್ತ್ರಜ್ಞರ ಬಳಿ ಹೋಗಲು ಇಷ್ಟಪಡುವುದಿಲ್ಲ, ಅವರನ್ನು ಮನವೊಲಿಸಿ ಕರೆದುಕೊಂಡು ಹೋಗಬೇಕು. ಅವರಿಗೆ ಮನರಂಜನೆ ಸಿಗುವ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿಸುವುದು, ಹೊರಗಡೆ ಸುಂದರ ತಾಣಗಳಿಗೆ ಕರೆದುಕೊಂಡು ಹೋಗುವುದು ಮಾಡಬೇಕು. ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಗರ್ಭಧಾರಣೆಯಾಗದಿರುವುದು ಒಳ್ಳೆಯದು. ಖಿನ್ನತೆಯಿಂದ ಬಳಲುವವರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮನೆಯವರು ಮಾಡಿದರೆ ಬೇಗನೆ ಮುಂಚಿನ ಸ್ಥಿತಿಗೆ ಮರಳುತ್ತಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Depression Disorder Symptoms | Tips For Health | ಖಿನ್ನತೆ ಕಾಯಿಲೆಯ ಲಕ್ಷಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Depression is a psychological problem. People will suffer from this disorder for so many reason. If any one suffering from this problem, should treat them, or else they will commit suicide or become mentally disorder person.
X
Desktop Bottom Promotion