Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನೀವು ಹಲ್ಲು ಕಚ್ಚಿದರೆ ಮತ್ತೊಬ್ಬರ ನಿದ್ದೆ ಹಾಳು!
ಕೆಲವರಿಗೆ ನಿದ್ರೆಯಲ್ಲಿ ಮಾತನಾಡುವುದು, ನಡೆಯುವುದು, ಗೊರಕೆ ಹೊಡೆಯು ಅಭ್ಯಾಸಯಿದ್ದರೆ ಮತ್ತೆ ಕೆಲವರಿಗೆ ನಿದ್ದೆಯಲ್ಲಿ ಹಲ್ಲು ಕಚ್ಚುವ ಅಭ್ಯಾಸವಿರುತ್ತದೆ. ಈ ರೀತಿಯ ಹಲ್ಲು ಕಚ್ಚುವ ಅಭ್ಯಾಸವಿದ್ದರೆ ಪಕ್ಕದಲ್ಲಿ ಮಲಗಿದವರ ನಿದ್ದೆಗೆ ಭಂಗ ಉಂಟಾಗುವುದು. ಈ ರೀತಿ ಹಲ್ಲು ಕಚ್ಚುವ ಅಭ್ಯಾಸವಿದ್ದರೆ ಸ್ವಲ್ಪ ಸಮಯದ ಬಳಿಕ ಅದು ತನ್ನಿಷ್ಟಕ್ಕೇ ನಿಂತು ಹೋಗುತ್ತದೆ ಎಂದು ಭಾವಿಸುವುದು ತಪ್ಪು. ಹಲ್ಲು ಕಚ್ಚುವ ಅಭ್ಯಾಸವಿರುವವರಿಗೆ ಹಲ್ಲುಗಳಲ್ಲಿ ತೊಂದರೆ ಇರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಈ ರೀತಿಯ ಹಲ್ಲು ಕಚ್ಚುವ ಅಭ್ಯಾಸವನ್ನು ಬ್ರೂಕ್ಸಿಸಂ (Bruxism )ಅಂತ ಕರೆಯುತ್ತಾರೆ.
ಮಕ್ಕಳಲ್ಲಿ ಬ್ರೂಕ್ಸಿಸಂ: ಮಗುವಾಗಿದ್ದಾಗ ಹಲ್ಲು ಬರುವ ಸಮಯದಲ್ಲಿ ಮತ್ತು ಮಕ್ಕಳಲ್ಲಿ ಹಾಲು ಹಲ್ಲು ಬಿದ್ದು ಹೋಗಿ ಹೊಸ ಹಲ್ಲುಗಳು ಬರುವ ಸಮಯದಲ್ಲಿ ಈ ರೀತಿ ಕಂಡುಬರುತ್ತದೆ. ಆದರೆ ಈ ರೀತಿ ಹಲ್ಲು ಸಂಪೂರ್ಣ ಬಂದ ನಂತರ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಈ ಅಭ್ಯಾಸವನ್ನು ಹಾಗೇ ಬಿಡದೆ ಮುಂದುವರೆಸಿಕೊಂಡು ಹೋದರೆ ಮಾತ್ರ ಮುಂದೆಕ್ಕೆ ಅದೊಂದು ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತದೆ. ದೊಡ್ಡವರಾದ ಮೇಲೆ ಈ ರೀತಿ ಹಲ್ಲು ಕಚ್ಚಲು ಕಾರಣವೇನು ಎನ್ನುವುದಕ್ಕೆ ಹಲ್ಲುಗಳ ರಚನೆ ಇರಬಹುದಾ ಅಥವಾ ಒತ್ತಡನಾ ಎಂದು ಸ್ಪಷ್ಟ ಉತ್ತರ ಸಿಗುವುದಿಲ್ಲ.
ಈ ರೀತಿ ಬ್ರೂಕ್ಸಿಸಂ ಅಭ್ಯಾಸವಿದ್ದರೆ ಬೆಳಗ್ಗೆ ಎದ್ದಾಗ ದವಡೆಯಲ್ಲಿ ನೋವು ಅಥವಾ ತಲೆ ನೋವು ಬರುವುದು ಗ್ಯಾರಂಟಿ. ಹಲ್ಲುಗಳು ಅಡ್ಡಾದಿಡ್ಡಿ ಬೆಳೆದಿದ್ದರೆ ಈ ರೀತಿ ಹಲ್ಲು ಕಚ್ಚುತ್ತಾರೆ ಎಂದು ಹೇಳಲಾಗುವುದು.
ಈ ರೀತಿಯ ಹಲ್ಲು ಕಚ್ಚುವ ಅಭ್ಯಾಸವಿದ್ದರೆ ಈ ರೀತಿ ಮಾಡಿ.
* ಈ ರೀತಿ ಹಲ್ಲು ಕಚ್ಚುವ ಅಭ್ಯಾಸವಿದ್ದು, ಅದನ್ನು ನಿಮ್ಮ ಮನೆಯವರು ಹೇಳಿದರೆ , ಮೊದಲು ಮಾಡಬೇಕಾದ ಕೆಲಸ ಅಂದರೆ ದಂತ ವೈದ್ಯರನ್ನು ಕಾಣಬೇಕು. ಇಲ್ಲದಿದ್ದರೆ ಈ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿಲ್ಲ.
* ಅಲ್ಲದೆ ಈ ರೀತಿ ಹಲ್ಲು ಕಚ್ಚುವುದಕ್ಕೆ ಒತ್ತಡ ಕೂಡ ಒಂದು ಕಾರಣವಾಗಿರುವುದರಿಂದ ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
