Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಮೆದುಳು ಕೆಡಿಸುವ ಹತ್ತು ಕೆಟ್ಟ ಚಟಗಳು

ಈ ಕೆಳಗಿನ ಕೆಟ್ಟ ಅಭ್ಯಾಸಗಳಿಂದ ಮೆದುಳು ತನ್ನ ಸ್ವಾಸ್ಥ್ಯವನ್ನು ಕಳೆದುಕೊಳ್ಳುವುದು.
1. ಬೆಳಗ್ಗೆ ಏನೂ ತಿನ್ನದಿರುವುದು: ಡಯಟ್ ಹೆಸರಿನಲ್ಲಿ ಹದಿಯರೆಯದವರು ಅದರಲ್ಲೂ ಹೆಣ್ಣು ಮಕ್ಕಳು ಉಪವಾಸವಿರುತ್ತಾರೆ. ಈ ರೀತಿ ಉಪವಾಸವಿರುವುದರಿಂದ ದೇಹದಲ್ಲಿ ಸಕ್ಕರೆ ಸಂಶದ ಪ್ರಮಾಣ ಕಡಿಮೆಯಾಗುತ್ತದೆ. ಮೆದುಳಿನ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳು ದೊರೆಯುವುದಿಲ್ಲ. ಇದರಿಂದ ಮೆದುಳಿಗೆ ಹಾನಿ ಉಂಟಾಗುವುದು.
2. ಮಿತಿ ಮೀರಿ ತಿನ್ನುವುದು: ತಿನ್ನದಿದ್ದರೆ ಕಷ್ಟ, ಅಧಿಕ ತಿಂದರೂ ಕೂಡ ಕಷ್ಟ! ಮಿತಿ ಮೀರಿ ತಿನ್ನುವುದರಿಂದ ರಕ್ತ ನಾಳಗಳ ಮೇಲೆ ಅಧಿಕ ಒತ್ತಡ ಬೀಳುತ್ತದೆ. ಇದರಿಂದ ಮೆದುಳಿನ ಸಾಮರ್ಥ್ಯ ಕುಂದುವುದು.
3. ಧೂಮಪಾನ: ಧೂಮಮಾನ ಸೇವನೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಧೂಮಪಾನ ಮಾಡುವುದರಿಂದ ಅಲ್ಜೈಮರ್ಸ್ ಕಾಯಿಲೆ ಉಂಟಾಗುವುದು.
4. ಅಧಿಕ ಸಕ್ಕರೆ ತಿನ್ನುವುದು: ಅಧಿಕ ಸಕ್ಕರೆಯಂಶ ತಿಂದರೆ ಅದು ದೇಹದಲ್ಲಿರುವ ಪೋಷಕಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾಗಿ ಮೆದುಳು ತನ್ನ ಕಾರ್ಯನಿರ್ವಹಿಸುವ ಸಾಮರ್ಥ್ಯ ಕಮ್ಮಿಯಾಗುವುದು.
5. ವಾಯು ಮಾಲಿನ್ಯ: ವಾಯು ಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಲಿನ್ಯವಿರುವ ಗಾಳಿಯನ್ನು ಉಸಿರಾಡುವುದರಿಂದ ದೇಹಕ್ಕೆ ಶುದ್ಧವಾದ ಆಮ್ಲಜನಕದ ಕೊರತೆ ಉಂಟಾಗಿ ಮೆದುಳಿನ ತೊಂದರೆ ಉಂಟಾಗುವುದು.
6. ನಿದ್ದೆ ಹೀನತೆ: ಮನುಷ್ಯ ಆರೋಗ್ಯವಾಗಿರಲು 6-8 ಗಂಟೆ ನಿದ್ದೆ ಅವಶ್ಯಕ. ತುಂಬಾ ದಿನಗಳವರೆಗೆ ಸರಿಯಾಗಿ ನಿದ್ದೆ ಮಾಡದಿದ್ದರೆ ಅದು ಮೆದುಳಿನ ನರಗಳಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು.
7. ಹೊದಿಕೆಯಿಂದ ತಲೆಮುಚ್ಚಿಕೊಂಡು ಮಲುಗುವುದು: ಈ ರೀತಿ ಮಾಡುವುದರಿಂದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ, ದೇಹಕ್ಕೆ ಆಮ್ಲಜನಕದ ಪ್ರಮಾಣ ಕಡಿಮೆ ಪೂರೈಕೆಯಾಗುವುದು.
8. ಹುಷಾರಿಲ್ಲದಿದ್ದಾಗ ತಲೆಗೆ ಕೆಲಸ ಮಾಡುವುದು: ಹುಷಾರಿಲ್ಲದಿದ್ದಾಗ ರೆಸ್ಟ್ ತಗೋಬೇಕು. ಆದರೆ ಈ ಸಮಯದಲ್ಲಿ ಕೆಲಸ ಮಾಡುವುದರಿಂದ ಅಥವಾ ಓದುವುದರಿಂದ ಮೆದುಳಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದು.
9. ಮೆದುಳಿಗೆ ಕೆಲಸ ಕೊಡದಿರುವುದು: ಮೆದುಳಿಗೆ ಕೆಲಸ ಕೊಡದಿದ್ದರೆ ಅದು ತನ್ನ ಸಾಮರ್ಥ್ಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮೆದುಳು ಚುರುಕಾಗುವ ಆಟ ಆಡುವುದು, ಯೋಚಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಮಾಡಬೇಕು.
10. ಮಾತನಾಡದೇ ಇರುವುದು: ಚೆನ್ನಾಗಿ ಆಲೋಚಿಸಿ ಮಾತನಾಡುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚಾಗುವುದು. ಆದರೆ ಏನೂ ಚಿಂತೆ ಮಾಡದೆ ಮೌನವಾಗಿದ್ದರೆ ಆಲೋಚನಾ ಸಾಮರ್ಥ್ಯ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
