Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ನೆನಪಿಡಿ, ನಿಮ್ಮ ಮರೆವಿಗೆ ಕಾರಣ ಅಲ್ಜೈಮರ್ಸ್!

1. ನೆನೆಪಿನ ಶಕ್ತಿ ಕುಂದುವುದು: ಕೆಲವೊಮ್ಮೆ ಕೆಲವೊಂದು ವಿಷಯಗಳನ್ನು ಮರೆತು ಹೋಗಿ ಮತ್ತೆ ಪೇಚಾಡುವುದು ಸಾಮಾನ್ಯ. ಆದರೆ ಅದೇ ಆವರ್ತಿಸಿದರೆ ಅದು ಅಲ್ಜೈಮರ್ಸ್ (Alzheimer's) ಕಾಯಿಲೆಯ ಲಕ್ಷಣವಾಗಿದೆ. ಈ ಕಾಯಿಲೆ ಕಾಣಿಸಿಕೊಂಡರೆ ಸಣ್ಣ ವಿಷಯವನ್ನೂ ಮರೆತು ಆಗಾಗ ಎಲೆಕ್ಟ್ರಾನಿಕ್ಸ್ ವಸ್ತುಗಳ ಸಹಾಯವನ್ನು ಪಡೆಯುತ್ತಾರೆ.
ಉದಾಹರಣೆಗೆ : ಯಾವುದೇ ಮೀಟಿಂಗ್ ಇರಲಿ ಅದನ್ನು ಜ್ಞಾಪಿಸುವುದಕ್ಕೂ ರಿಮೈಂಡರ್ ಸಹಾಯ ಬೇಕು.
2. ಸಂಖ್ಯೆಗಳೇ ಸಮಸ್ಯೆಯಾಗುವುದು: ಗಣಿತ ಅಂದರೆ ಅನೇಕರಿಗೆ ಕಬ್ಬಿಣದ ಕಡಲೆ. ಆದ್ರೆ ಸಣ್ಣ-ಪುಟ್ಟ ಲೆಕ್ಕವನ್ನೂ ಎಂಥ ದಡ್ಡರು ಮಾಡುತ್ತಾರೆ. ಈ ಕಾಯಿಲೆ ಕಾಣಿಸಿಕೊಂಡರೆ ದಿನವೂ ಅಡುಗೆ ಮಾಡುವವರಾದರೂ ಅಳತೆಯನ್ನು ಮರೆಯುವುದು, ಸಣ್ಣ -ಪುಟ್ಟ ವಸ್ತುಗಳನ್ನು ಕೊಂಡ ಬಿಲ್ಲನ್ನು ಒಮ್ಮೆ ಲೆಕ್ಕ ಮಾಡಿದ್ದರೂ ಮರೆತು ಮತ್ತೊಮ್ಮೆ ಲೆಕ್ಕ ಮಾಡುತ್ತಿರುವುದು ಇವೆಲ್ಲ ಮೆದುಳಿನ ಕಾಯಿಲೆಯ ಲಕ್ಷಣಗಳು.
3. ಗೊತ್ತಿರುವ ಕೆಲಸವನ್ನು ಮರೆಯುವುದು: ದಿನಾ ಓಡಾಡುವ ರೋಡ್ ನಲ್ಲಿ ಕೆಲವೊಮ್ಮೆ ದಾರಿ ಮರೆತು ಹೋಗುವುದು, ಡ್ರೈವಿಂಗ್ ಮಾಡುವಾಗ ಅದೇ ರಸ್ತೆಯಲ್ಲಿ ಅನೇಕ ಬಾರಿ ಹೋಗಿದ್ದರೂ ಕೂಡ ಆ ರಸ್ತೆಯಲ್ಲಿ ಚಾಲನೆ ಮಾಡುವಾಗ ಚಾಲನೆ ತಪ್ಪುವುದು, ದಿನಾ ಆಡುತ್ತಿರುವ ಆಟದ ನಿಯಮಗಳು ಮರೆತು ಹೋಗುವುದು.
4. ಉದ್ದೇಶ ಮರೆಯುವುದು: ಈ ಕಾಯಿಲೆ ಬಂದರೆ ಎಲ್ಲಿಗಾದರೂ ಹೋಗಿ ಏಕೆ ಇಲ್ಲಿಗೆ ಬಂದೆವು ಎಂಬ ಉದ್ದೇಶ ಮರೆತು ಹೋಗುವುದು, ಇನ್ನು ಕೆಲವೊಮ್ಮೆ ಆ ಜಾಗಕ್ಕೆ ಹೇಗೆ ಬಂದೆವು ಎಂದು ಮರೆತು ಹೋಗುತ್ತದೆ.
5. ದೃಷ್ಟಿ ಸಮಸ್ಯೆ: ಈ ಕಾಯಿಲೆಯಿಂದ ದೃಷ್ಟಿ ಸಮಸ್ಯೆ ಕೂಡ ಉಂಟಾಗುತ್ತದೆ. ಓದಲು ಅಥವಾ ದೂರದಲ್ಲಿರುವ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೂಮಿನಲ್ಲಿರುವ ಕನ್ನಡಿಯಲ್ಲಿ ಅವ್ರ ಪ್ರತಿಬಿಂಬನೋಡಿ ಬೇರೆ ಯಾರೊ ಇದ್ದಾರೆ ಎಂದು ಭಾವಿಸುವುದು ಇವೆಲ್ಲಾ ಈ ಕಾಯಿಲೆಯ ಲಕ್ಷಣವಾಗಿದೆ.
6. ಸಂವಹನದಲ್ಲಿ ತೊಂದರೆ: ಈ ರೀತಿ ಕಾಯಿಲೆ ಬಂದವರು ಮಾತನಾಡುತ್ತಿರುವಾಗಲೇ ತಕ್ಷಣ ಮಾತು ನಿಲ್ಲಿಸುತ್ತಾರೆ, ನಂತರ ಮಾತನ್ನು ಹೇಗೆ ಮುಂದುವರೆಸಬೇಕೆಂದು ಮರೆತು ಹೋಗಿ ತಲೆಯಲ್ಲಿ ಏನೂ ಹೊಳೆಯದೆ ಖಾಲಿ ಆದಂತೆ ಅನಿಸುತ್ತದೆ.
7. ವಸ್ತುಗಳ ಸ್ಥಾನ ಪಲ್ಲಟ: ವಸ್ತುಗಳನ್ನು ಸರಿಯಾದ ಜಾಗದಲ್ಲಿಡದೆ ಮರೆತು ಎಲ್ಲೆಲ್ಲೊ ಇಟ್ಟು ಬಂದು ನಂತರ ಅದನ್ನು ಎಲ್ಲಿ ಇಟ್ಟಿದ್ದಾರೆ ಎಂದಿ ಜ್ಞಾಪಿಸಿಕೊಳ್ಳಲು ಅಸಾಧ್ಯವಾಗುವುದು. ಎಲ್ಲದಿದ್ದರೆ ವಸ್ತುಗಳನ್ನು ಎಲ್ಲಾದರೂ ಇಟ್ಟು ಯಾರೊ ಕದ್ದುಕೊಂಡು ಹೋಗಿದ್ದಾರೆ ಎಂದು ಗೋಳಾಡುವುದು ಈ ರೀತಿ ಪದೇ-ಪದೇ ಆಗುತ್ತಿದ್ದರೆ ಅದು ಅಲ್ಜೈಮರ್ಸ್ ಕಾಯಿಲೆಯ ಲಕ್ಷಣವಾಗಿದೆ.
8. ನಿರ್ಧರಿಸುವ ಸಾಮರ್ಥ್ಯ ಕುಂದುವುದು: ಈ ರೀತಿ ಕಾಯಿಲೆ ಬಂದವರಿಗೆ ಯಾವುದೇ ವಿಷಯದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಏಕೆಂದರೆ ಆಲೋಚನೆ ಶಕ್ತಿ ಕಡಿಮೆಯಾಗಿ ಮರೆವು ಜಾಸ್ತಿ ಆಗುತ್ತದೆ.
9. ಚಟುವಟಿಕೆಯಿಂದ ದೂರ ಸರಿಯುವುದು: ಈ ರೀತಿ ಕಾಯಿಲೆ ಬಂದವರು ನಿಧಾನಕ್ಕೆ ತಮ್ಮ ಹವ್ಯಾಸ, ಸಾಮಾಜಿಕ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಏಕೆಂದರೆ ಅವರಿಗೆ ಅವರ ನೆಚ್ಚಿನ ಆಟದ ನಿಯಮವನ್ನೇ ಮರೆತು ಇರುತ್ತಾರೆ.
10. ಖಿನ್ನತೆ: ಈ ಕಾಯಿಲೆ ಬಂದರೆ ಯವುದೇ ವಿಷಯದಲ್ಲಿ ಗೊಂದಲ, ಸಂಶಯ, ಖಿನ್ನತೆ ಕಾಣಿಸಿಕೊಳ್ಳುತ್ತದೆ. ಮನೆಯವರ ಜೊತೆಗೆ, ಕೆಲಸದ ಜಾಗದಲ್ಲಿ, ಸ್ನೇಹಿತರ ಜೊತೆ ಬೆರೆಯಲು ಇಷ್ಟಪಡುವುದಿಲ್ಲ. ಅವರಿಗೆ ಅಭದ್ರತೆ ಭಾವನೆ ಉಂಟಾಗುತ್ತದೆ.
ಈ ರೀತಿಯ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
