Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತೀಯರು ಮಾತ್ರ ತಿನ್ನುವ 8 ಆಹಾರ
ಭಾರತೀಯರ ಆಹಾರ ಶೈಲಿಯೇ ಭಿನ್ನ . ಭಾರತೀಯರು ತಿನ್ನುವ ಅನೇಕ ಆಹಾರವನ್ನು ವಿದೇಶಿಯರು ತಿನ್ನುವುದಿಲ್ಲ. ಭಾರತೀಯರ ಆಹಾರ ಪದ್ಧತಿ ತುಂಬಾ ಆರೋಗ್ಯಕರವಾಗಿದೆ ಎಂದು ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ಕೂಡ ದೃಢ ಪಟ್ಟಿದೆ.
ಅದರಲ್ಲೂ ಭಾರತೀಯರು ನಾನ್ ವೆಜ್ ಗಿಂತ ವೆಜ್ ಅಡುಗೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಈ ವೆಜ್ ಅಡುಗೆಗಳು ಅತ್ಯಂತ ಪೌಷ್ಠಿಕ ಆಹಾರಗಳಾಗಿವೆ. ಬಾಳೆ ದಿಂಡಿನ ಪಲ್ಯ, ಬಾಳೆ ಹೂವಿನ ಪಲ್ಯ ಇಂತಹ ಖಾದ್ಯಗಳನ್ನು ಭಾರತದಲ್ಲಿ ಮಾತ್ರ ತಯಾರಿಸಲಾಗುತ್ತದೆ.
ಹಸಿರು ಸೊಪ್ಪುಗಳಿಂದ ಪಲ್ಯ, ಸಾರುಗಳನ್ನು ಭಾರತೀಯರು ಮಾತ್ರ ತಯಾರಿಸುತ್ತಾರೆ. ಹಾಗಲ ಕಾಯಿ, ಸೋರೆಕಾಯಿಗಳನ್ನು ಇವುಗಳ ಬಗ್ಗೆ ವಿದೇಶಿಯರಿಗೆ ಕೇಳಿದರೆ ಏನು ಗೊತ್ತಿರುವುದಿಲ್ಲ. ಭಾರತೀಯರು ಮಾತ್ರ ತಿನ್ನುವ ಆ ಸೂಪರ್ ವೆಜೆಟೇಬಲ್ ಗಳು ಯಾವುದೆಂದು ನೋಡೋಣ ಬನ್ನಿ:

1. ತೊಂಡೆಕಾಯಿ
ತೊಂಡೆಕಾಯಿಯನ್ನು ವಿದೇಶದಲ್ಲಿ ತಿನ್ನುವುದಿಲ್ಲ. ಆದ್ದರಿಂದ ಇದಕ್ಕೆ ಯಾವುದೇ ಇಂಗ್ಲೀಷ್ ಹೆಸರು ಕೂಡ ಇಲ್ಲ. ಇದರಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

2. ನುಗ್ಗೆಕಾಯಿ
ನುಗ್ಗೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮೂಳೆಗಳನ್ನು ಬಲ ಪಡಿಸುತ್ತದೆ. ಉಸಿರಾಟದ ತೊಂದರೆಯ ವಿರುದ್ಧ ಹೋರಾಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು.

3. ಮೆಂತೆ ಸೊಪ್ಪು
ಮೆಂತೆ ಸೊಪ್ಪಿನಿಂದ ಭಾರತೀಯರು ಮಾತ್ರ ಅಡುಗೆಗಳನ್ನು ತಯಾರಿಸುತ್ತಾರೆ. ಇದು ಕಿಡ್ನಿಯ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ಡಯಾಬಿಟಿಸ್ (ಮಧುಮೇಹ) ರೋಗ ಇರುವವರು ತಿಂದರೆ ಇನ್ಸುಲಿನ್ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಇಡುವಲ್ಲಿ ಸಹಕಾರಿಯಾಗಿದೆ.

4. ಹಾಗಲಕಾಯಿ
ಹಾಗಲಕಾಯಿಯಲ್ಲಿ anti-oxidants ಪ್ರಮಾಣ ಅಧಿಕವಿರುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುತ್ತದೆ.

5. ಸಾಸಿವೆ ಎಲೆ
ಸಾಸಿವೆ ಎಲೆ ಪಾಲಕ್ ಸೊಪ್ಪುಗಿಂತ ಹೆಚ್ಚು ಆರೋಗ್ಯಕರವಾಗಿದೆ. ಇದನ್ನು ಚಟ್ನಿ ಮಾಡಿ ತಿನ್ನಬಹುದು.

6. ಹಲಸಿನ ಕಾಯಿ
ಹಲಸಿನಕಾಯಿಯಿಂದ ಖಾದ್ಯಗಳನ್ನು ತಯಾರಿಸುತ್ತಾರೆ. ಇದರಲ್ಲಿ ಪೊಟಾಷ್ಯಿಯಂ ಅಧಿಕವಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

7. ಬಾಳೆ ದಿಂಡು ಹಾಗೂ ಬಾಳೆ ಹೂ
ಇದರಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಇದರಲ್ಲಿ ಕಬ್ಬಿಣದಂಶ, ನಾರಿನಂಶ ಅಧಿಕವಿದ್ದು ಕ್ಯಾಲೋರಿ ಅಂಶ ಕಡಿಮೆ ಇರುತ್ತದೆ. ಬಾಳೆದಿಂಡು ಹಾಗೂ ಬಾಳೆಹೂವಿನಿಂದ ಮಾಡಿದ ಖಾದ್ಯಗಳನ್ನು ತಿಂದರೆ ಕಿಡ್ನಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.



Click it and Unblock the Notifications
