Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹಲ್ಲುಗಳನ್ನು ಗಟ್ಟಿಯಾಗಿಸುವ 8 ಆಹಾರಗಳು
ಸೂಕ್ಷ್ಮ ಹಲ್ಲಿನ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಈ ರೀತಿಯ ಹಲ್ಲಿನ ಸಮಸ್ಯೆ ಇರುವವರಿಗೆ ಅತೀ ಸಿಹಿಯಾದ ತಿಂಡಿ ತಿನ್ನಲು ಸಾಧ್ಯವಿಲ್ಲ, ಕೃತಕ ಸಿಹಿ ಇರಲಿ, ಸಿಹಿ ಹಣ್ಣುಗಳನ್ನು ತಿಂದರೂ ಹಲ್ಲು ನೋವು ಕಂಡು ಬರುತ್ತದೆ. ತಣ್ಣನೆ ಹಾಗೂ ಬಿಸಿಯಾದ ಆಹಾರಗಳನ್ನು ತಿಂದರೆ ಹಲ್ಲುನೋವು ಪ್ರಾರಂಭವಾಗುತ್ತದೆ.
ಈ ರೀತಿಯ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕೂಡ ಕಂಡುಬರುತ್ತದೆ. ಹಲ್ಲು ಸೂಕ್ಷ್ಮವಾದಾಗ ಪೇಸ್ಟ್, ಬ್ರೆಷ್ ಅಂತ ಬದಲಾಯಿಸುತ್ತೇವೆ, ಆದರೆ ಆಹಾರಕ್ರಮದ ಬಗ್ಗೆ ಗಮನ ಕೊಡುವುದೇ ಇಲ್ಲ. ಕೆಲವೊಂದು ಆಹಾರಗಳಿವೆ. ಈ ಆಹಾರಗಳನ್ನು ತಿಂದರೆ ಅವುಗಳು ಹಲ್ಲುಗಳು ಸೂಕ್ಷ್ಮವಾಗುವುದನ್ನು ತಡೆಗಟ್ಟುತ್ತದೆ. ಬನ್ನಿ, ಆ ಸೂಪರ್ ಆಹಾರಗಳಾವುವು ಎಂದು ನೋಡೋಣ ಬನ್ನಿ:

ಸಿಹಿಯಿಲ್ಲದ ಹಣ್ಣುಗಳು
ಸೌತೆಕಾಯಿಯಂತಹ ಕಡಿಮೆ ಸಕ್ಕರೆಯಶವಿರುವ ಹಣ್ಣುಗಳನ್ನು ತಿಂದರೆ ಹಲ್ಲುಗಳಲ್ಲಿ ನೋವು ಕಂಡುಬರುವುದಿಲ್ಲ ಹಾಗೂ ಇವುಗಳು ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಸಿಹಿ ಹಣ್ಣುಗಳನ್ನು ಹಲ್ಲುಗಳು ಮತ್ತಷ್ಟು ಸೂಕ್ಷ್ಮವಾಗುವುದು.

ನಾರಿನಂಶವಿರುವ ತರಕಾರಿ
ನಾರಿನಂಶ ಅಧಿಕವಿರುವ ತರಕಾರಿಗಳನ್ನು ತಿಂದರೆ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೆಟ್, ಸೊಪ್ಪು ಈ ರೀತಿಯ ನಾರಿನಂಶವಿರುವ ತರಕಾರಿಗಳು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು.

ದವಸ ಧಾನ್ಯಗಳು
ಕೆಂಪಕ್ಕಿ, ಜೋಳ, ಗೋಧಿ ಈ ರೀತಿಯ ದವಸ ಧಾನ್ಯಗಳು ಹಲ್ಲುಗಳನ್ನು ಬಲಪಡಿಸುತ್ತದೆ. ಮೊಳಕೆ ಬರಿಸಿದ ಕಾಳು ಕೂಡ ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು.

4. ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿ ಫ್ಲೇವೈನೋಯ್ಡ್ಸ್ (flavinoids) ಮತ್ತು ಫೋಟೊಫೀನೋಲ್ಸ್(photophenols ) ಅಂಶವಿದ್ದು ಹಲ್ಲಿನಲ್ಲಿರುವ ಕೀಟಾಣುಗಳೊಡನೆ ಹೋರಾಡಿ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ.

5. ಸಮುದ್ರಾಹಾರ
ಸಮುದ್ರಾಹಾರಗಳಾದ ಮೀನು, ಸೀಗಡಿ ಮೀನು, ಮೃದ್ವಂಗಿ ಇವುಗಳಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಿರುವುದರಿಂದ ಈ ಆಹಾರಗಗಳು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ.

6. ಚ್ಯೂಯಿಂಗ್ ಗಮ್
ಸಕ್ಕರೆಯಂಶವಿಲ್ಲದ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಬಾಯಿ ದುರ್ನಾತ ಬೀರುವುದಿಲ್ಲ ಹಾಗೂ ಹಲ್ಲುಗಳು ಗಟ್ಟಿಮುಟ್ಟಾಗುತ್ತವೆ.

7. ಪುದೀನಾ ಎಲೆ
ಹಲ್ಲು ನೋವು ಇರುವವರು ಒಂದು ವೇಳೆ ಸಿಹಿ ತಿಂದರೆ ತಕ್ಷಣವೇ ಎರಡು ಪುದೀನಾ ಎಲೆ ಜಗಿದರೆ ಸಾಕು ಹಲ್ಲು ನೋವು ಕಂಡು ಬರುವುದಿಲ್ಲ. ಈ ರೀತಿ ಪ್ರತಿದಿನ ಮಾಡಿದರೆ ಹಲ್ಲುಗಳು ಗಟ್ಟಿ ಮುಟ್ಟಾಗುತ್ತವೆ.



Click it and Unblock the Notifications
