Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಿಶ್ವ ಪಾರ್ಶ್ವವಾಯು ದಿನಕ್ಕೆ ವಿಶೇಷ ಲೇಖನ
ಇಂದು ವಿಶ್ವ ಪಾರ್ಶ್ವವಾಯು ದಿನ. ಸ್ಟ್ರೋಕ್ ಅಥವಾ ಪಾರ್ಶ್ವವಾಯು ಬರಲು ಶರೀರದಲ್ಲಿ ನಿಶ್ಯಕ್ತಿ ಕೂಡ ಕಾರಣವಾಗಿದೆ. ವಿಶ್ವದಲ್ಲಿ ಪ್ರತಿ ಆರು ಸೆಕೆಂಡ್ ಗೆ ಒಬ್ಬರು ಪಾರ್ಶ್ವವಾಯು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆ ಬಂದರೆ ಚೇತರಿಸಿಕೊಳ್ಳುವವರು ಶೇ. 10 ರಷ್ಟು ಮಾತ್ರ. ಕೆಲವರು ಮರಣವಪ್ಪಿದರೆ ಮತ್ತೆ ಕೆಲವರು ಜೀವಿತಾವಧಿ ಪೂರ್ತಿ ಕೈ, ಕಾಲು ಬರದೆ ನರಳುತ್ತಾರೆ.
ಮಿದುಳಿನ ಭಾಗಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಸಂಚಾರ ಆಗದೆ, ಆಮ್ಲಜನಕದ ಕೊರತೆಯಿಂದ ಈ ರೀತಿ ಉಂಟಾಗುತ್ತದೆ. ಪಾರ್ಶ್ವವಾಯು ಬಂದರೆ ದೇಹ ಸಂಪೂರ್ಣವಾಗಿ ನಿಯಂತ್ರಣ ತಪ್ಪುತ್ತದೆ, ಕೈ, ಕಾಲುಗಳು ಮರಗಟ್ಟಿದಂತಾಗುವುದು, ಮಾತು ಬಾರದೇ ಹೋಗಬಹುದು, ಇಲ್ಲದಿದ್ದರೆ ಮಾತನಾಡಿದರೂ ಇತರರಿಗೆ ಸುಲಭವಾಗಿ ಅರ್ಥವಾಗದೇ ಹೋಗುವುದು ಹಾಗೂ ಅರೆ ಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿರುತ್ತಾರೆ.
ಪಾರ್ಶ್ವವಾಯು ಅಧಿಕ ರಕ್ತದೊತ್ತಡ ಇರುವವರಲ್ಲಿ, ಒಬೆಸಿಟಿ ಅಥವಾ ಬೊಜ್ಜು ಇರುವವರಿಗೆ, ಹೃದಯದ ಕಾಯಿಲೆ ಇರುವವರಿಗೆ, ಮದ್ಯ ಹಾಗೂ ಧೂಮಪಾನ ಮಾಡುವವರಿಗೆ ಬರುತ್ತದೆ. ಆದ್ದರಿಂದ ದೇಹ ತೂಕವನ್ನು ಸಮತೋಲನದಲ್ಲಿಡಬೇಕು, ಕೆಟ್ಟ ಚಟಗಳಿಂದ ದೂರವಿರಬೇಕು ಹಾಗೂ ಒಳ್ಳೆಯ ಆಹಾರಕ್ರಮ ಪಾಲಿಸಬೇಕು.
ಈ ಕೆಳಗಿನ ಆಹಾರಗಳು ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯುವಂತೆ ಮಾಡಿ, ಪಾರ್ಶ್ವವಾಯು ಬರದಂತೆ ತಡೆಯುವಲ್ಲಿ ಸಹಕಾರಿಯಾಗಿವೆ:

1. ಬೀನ್ಸ್ ಹಾಗೂ ಫೋಲೆಟ್ ಇರುವ ಆಹಾರ:
ಬೀನ್ಸ್ ಹೃದಯದ ಸ್ವಾಸ್ಥ್ಯಕ್ಕೆ ಮಾತ್ರವಲ್ಲ, ಮೆದುಳಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೆಂಡೆಕಾಯಿ, ಕಡು ಹಸಿರು ಬಣ್ಣದ ಸೊಪ್ಪು, ಸಿಟ್ರಸ್ ಇರುವ ಆಹಾರ, ಪ್ರಾಣಿಗಳ ಲಿವರ್ ಇವುಗಳಲ್ಲಿ ಫಾಲಿಕ್ ಆಸಿಡ್ ಅಂಶ ಅಧಿಕವಾಗಿರುತ್ತದೆ.

2. ಓಟ್ಸ್, ಬಾದಾಮಿ ಮತ್ತು ಸೋಯಾ:
ಈ ಆಹಾರಗಳು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾದರೆ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯುವುದು, ಪಾರ್ಶ್ವವಾಯು ಬರುವ ಸಾಧ್ಯತೆ ಕಡಿಮೆಯಾಗುವುದು.

3. antioxiadnts ಇರುವ ಆಹಾರಗಳು:
ಬೆರಿ ಹಣ್ಣುಗಳು, ಬೆಳ್ಳುಳ್ಳಿ, ಶುಂಠಿ, ಬೀನ್ಸ್ ಇವುಗಳಲ್ಲಿ antioxidants ಅಧಿಕವಿರುತ್ತದೆ.ಈ ಅಂಶವಿರುವ ಆಹಾರಗಳು ದೇಹಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು.

4. ಬಾಳೆಹಣ್ಣು:
ಬಾಳೆ ಹಣ್ಣಿನಲ್ಲಿ ಪೊಟಾಷ್ಯಿಯಂ ಅಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಲೂಗೆಡ್ಡೆ, ಒಣದ್ರಾಕ್ಷಿ ಇವುಗಳಲ್ಲಿಯೂ ಪೊಟಾಷ್ಯಿಯಂ ಅಧಿಕವಿರುತ್ತದೆ.

5. ಕೊಬ್ಬಿನಂಶ ಕಡಿಮೆ ಇರುವ ಹಾಲು:
ಪಾರ್ಶ್ವವಾಯು ತಡೆಯುವಲ್ಲಿ ಹಾಲೂ ತುಂಬಾ ಪ್ರಯೋಜನಕಾರಿ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

6.ಮ್ಯಾಗ್ನಿಷಿಯಂ ಅಧಿಕವಿರುವ ಆಹಾರ:
ಬಾರ್ಲಿ, ಜೋಳದ ಪದಾರ್ಥಗಳಲ್ಲಿ ಮ್ಯಾಗ್ನಿಷಿಯಂ ಅಂಶ ಅಧಿಕವಿರುತ್ತದೆ. ಬ್ಲ್ಯಾಕ್ ಬೀನ್ಸ್, ನಟ್ಸ್ , ಬ್ರೊಕೋಲಿ, ಮೃದ್ವಂಗಿಗಳು, ಸೋಯಾ ಹಾಲು , ಪಾಲಾಕ್ ಈ ರೀತಿಯ ಆಹಾರಗಳಲ್ಲಿ ಮ್ಯಾಗ್ನಿಷಿಯಂ ಅಧಿಕವಿರುತ್ತದೆ.

7. ದೊಡ್ಡ ಮೀನುಗಳು:
ಮೀನುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ದೊಡ್ಡ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿದ್ದು ಪಾರ್ಶ್ವವಾಯು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.



Click it and Unblock the Notifications
