Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಕೊಲೆಸ್ಟ್ರಾಲ್ ಕಡಿಮೆ ಮಾಡಲು 7 ವಿಧಾನ
ಕೊಲೆಸ್ಟ್ರಾಲ್ ದೇಹದಲ್ಲಿರುವ ಕೊಬ್ಬಿನಂಶವಾಗಿದೆ. ಇದು ನಾವು ತಿನ್ನುವ ಆಹಾರಗಳಿಂದ ಉತ್ಪತ್ತಿಯಾಗುತ್ತದೆ. ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಅಗತ್ಯ. ಕೊಲೆಸ್ಟ್ರಾಲ್ ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆದರೆ ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ. ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್. ದೇಹದಲ್ಲಿ ಈ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾದರೆ ಮಾತ್ರ ಕಷ್ಟ. ಆದ್ದರಿಂದ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇರುವ ಆಹಾರಗಳು ನಮ್ಮ ನಾವು ತಿನ್ನುವ ಆಹಾರದಲ್ಲಿದ್ದರೆ ಒಳ್ಳೆಯದು.
ಕೊಲೆಸ್ಟ್ರಾಲ್ ಮಧ್ಯ ವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಯೌವನಪ್ರಾಯದಲ್ಲಿ ಸರಿಯಾದ ಜೀವನ ಶೈಲಿ ನಡೆಸಿದರೆ ಈ ಕೊಲೆಸ್ಟ್ರಾಲ್ ಸಮಸ್ಯೆ ಕಂಡು ಬರುವುದು ತುಂಬಾ ಕಡಿಮೆ. ಆದ್ದರಿಂದ ಕೊಲೆಸ್ಟ್ರಾಲ್ ಬಂದು ಕಷ್ಟ ಪಡುವ ಬದಲು ಕೊಲೆಸ್ಟ್ರಾಲ್ ಬರುವುದನ್ನು ತಡೆಗಟ್ಟಲು ಈ ಕೆಳಗಿನ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

1. ತಂಬಾಕು
ತಂಬಾಕು ಸೇವನೆ ಹಾಗೂ ಧೂಮಪಾನ ಅಭ್ಯಾಸವು ಬಾಯಿ ಹಾಗೂ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ತಂಬಾಕಿನಲ್ಲಿರುವ ಕಾರ್ಬನ್ ಮಾನೋಕ್ಷೈಡ್ ಅಂಶವು ದೇಹದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚು ಮಾಡುತ್ತದೆ.

2. ವ್ಯಾಯಾಮ
ಕೆಲವರು ನಾನೇನು ದಪ್ಪವಿಲ್ಲ, ನಾನೇಕೆ ವ್ಯಾಯಾಮ ಮಾಡಬೇಕು ಅನ್ನುವುದನ್ನು ನೀವು ಕೇಳಿರಬಹುದು. ದಪ್ಪವಿರಲಿ ಸಣ್ಣಗಿರಲಿ ವ್ಯಾಯಾಮ ಮಾಡಿದರೆ ದೇಹವು ಗಟ್ಟಿಮುಟ್ಟಾಗುತ್ತದೆ ಹಾಗೂ ದೇಹದಲ್ಲಿ ಅಧಿಕ ಕೊಬ್ಬಿನಂಶ ನಿಲ್ಲದಂತೆ ನೋಡಿಕೊಳ್ಳುತ್ತದೆ. ಪ್ರತಿದಿನ 30 ನಿಮಿಷ ಕಾಲ ವ್ಯಾಯಾಮ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ.

3. ಎಣ್ಣೆಯಲ್ಲಿ ಕರಿದ ತಿಂಡಿಗಳು
ಎಣ್ಣೆಯಲ್ಲಿ ಕರಿದ ತಿಂಡಿಗಳು ತಿನ್ನಲು ರುಚಿಕರವಾಗಿರುತ್ತದೆ. ಆದರೆ ಎಣ್ಣೆಯಲ್ಲಿ ಕರಿದಂತಹ ತಿಂಡಿಗಳನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಆರೋಗ್ಯದ ದೃಷ್ಟಿಯಿಂದ ಬಾಯಿ ರುಚಿಗೆ ಸ್ವಲ್ಪ ಕಡಿವಾಣ ಹಾಕಬೇಕಾಗುತ್ತದೆ.

4. ಮದ್ಯ
ಹಾಟ್ ಬದಲು ವೈನ್, ಬೀರ್ ಇವುಗಳನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಮದ್ಯ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುತ್ತಾ ಹೋಗುತ್ತದೆ.

5. ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು
ಅಧಿಕ ತೂಕವಿರುವವರು, ಒಬೆಸಿಟಿ ಸಮಸ್ಯೆ ಇರುವವರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಕೊಲೆಸ್ಟ್ರಾಲ್ ಮಾತ್ರವಲ್ಲ ಇತರ ಸಮಸ್ಯೆ ಕೂಡ ಕಂಡು ಬರಬಹುದು. ಆದ್ದರಿಂದ ನಿಮ್ಮ ದೇಹದ ತೂಕ ಸರಿಯಾಗಿರುವಂತೆ ನೋಡಿಕೊಳ್ಳಿ.

6. ಪಾಲಾಕ್ ಸೊಪ್ಪು
ವಾರದಲ್ಲಿ ಎರಡು ಬಾರಿಯಾದರೂ ಪಾಲಕ್ ಸೊಪ್ಪು ತಿನ್ನುವುದು ಒಳ್ಳೆಯದು. ಇದು ಕೊಲೆಸ್ಟ್ರಾಲ್ ಬರದಂತೆ ತಡೆಗಟ್ಟುತ್ತದೆ ಹಾಗೂ ಕೊಲೆಸ್ಟ್ರಾಲ್ ಇರುವವರು ತಿಂದರೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.

7. ಮೀನು
ನಾನ್ ವೆಜ್ ತಿನ್ನುವವರಾದರೆ ಮೀನನ್ನು ತಿನ್ನುವುದು ಒಳ್ಳೆಯದು. ಅದರಲ್ಲೂ ಮೀನನ್ನು ಫ್ರೈ ಮಾಡಿ ತಿನ್ನುವ ಬದಲು ಸಾರು ಮಾಡಿ ತಿನ್ನಿ.



Click it and Unblock the Notifications
