Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಒತ್ತಡ ಕಡಿಮೆ ಮಾಡಲು ಮೂರೇ ವಿಧಾನ ಸಾಕು!

ಒತ್ತಡವಿಲ್ಲದೆ ಬದುಕು ಇರುವುದಿಲ್ಲ. ಆದರೆ ಸ್ವಲ್ಪ ಮನಸ್ಸು ಮಾಡಿದರೆ ಹೀಗೆ ಒತ್ತಡ ಮಾಡಿಕೊಳ್ಳುವ ಪ್ರಮಾಣವನ್ನು ಸ್ವಲ್ಪ ತಗ್ಗಿಸಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ:
1. ಸಮಯ ಪಾಲನೆ :
ಜೀವನದಲ್ಲಿ ಸಮಯ ಪಾಲನೆ ಮುಖ್ಯ. 10 ಗಂಟೆಗೆ ಆಫೀಸ್ ಇದ್ದರೆ 9 ಗಂಟೆಗೆ ಎದ್ದು ಕಷ್ಟ ಪಡುವ ಬದಲು ಸ್ವಲ್ಪ ಬೇಗನೆ ಏಳಬೇಕು. ಬೇಗ ಎದ್ದರೆ ಆರಾಮವಾಗಿ ರೆಡಿಯಾಗಿ ಆಫೀಸ್ ಗೆ ಹೋಗಬಹುದು. ಸ್ವಲ್ಪ ಗಮನಿಸಿ ನೋಡಿ ನಿಮ್ಮ ದಿನನಿತ್ಯದ ಒತ್ತಡಕ್ಕೆ ಸಮಯ ಪ್ರಜ್ಞೆ ಇಲ್ಲದಿರುವುದು ಕೂಡ ಒಂದು ಕಾರಣವಾಗಿರುತ್ತದೆ. ಯಾವ ಸಮಯದಲ್ಲಿ ಏನು ಮಾಡಬೇಕು ಎಂಬ ಐಡಿಯಾ ಇದ್ದರೆ ಅರ್ಧ ಟೆನ್ಷನ್ ಕಡಿಮೆಯಾಗುತ್ತದೆ.
2. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮತ್ತು ನಿದ್ದೆ ಸರಿಯಾಗಿ ಇಲ್ಲದಿದ್ದರೆ:
ಮನುಷ್ಯನಿಗೆ ನಿದ್ದೆ ಅವಶ್ಯಕ. ಅತೀ ನಿದ್ದೆಯೂ ಒಳ್ಳೆಯದಲ್ಲ, ಅತೀ ಕಡಿಮೆ ನಿದ್ದೆಯೂ ಒಳ್ಳೆಯದಲ್ಲ. ದಿನದಲ್ಲಿ 7-8 ಗಂಟೆ ನೆಮ್ಮದಿಯಿಂದ ನಿದ್ದೆ ಮಾಡಬೇಕು. ಸಾಕಷ್ಟು ನೀರು ಕುಡಿಯಬೇಕು. ನಿದ್ದೆ, ದೇಹದಲ್ಲಿ ನೀರಿನಂಶ ಮತ್ತು ಆಹಾರ ಸರಿಯಾಗಿ ಇದ್ದರೆ ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ.
3. ಕೆಲಸ ಮತ್ತು ವಿಶ್ರಾಂತಿ:
ತುಂಬಾ ಕೆಲಸ-ಕೆಲಸ ಅಂತ ಒದ್ದಾಡುವ ಬದಲು ಕೆಲಸದ ಮಧ್ಯ 10 ನಿಮಿಷ ಬಿಡುವು ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಂಡು ನಂತರ ಕೆಲಸ ಮುಂದುವರೆಸಿ. ಒತ್ತಡದಲ್ಲಿ ಕೆಲಸ ಮಾಡಿದರೆ ಏನೂ ನಡೆಯುವವುದಿಲ್ಲ. ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮಾಡಿದರೆ ಮನಸ್ಸನ್ನು ಹೆಚ್ಚು ಕೇಂದ್ರೀಕರಿಸಬಹುದು. ಇದರಿಂದಾಗಿ ಕೆಲಸವೂ ಬೇಗನೆ ಮುಗಿಸಬಹುದು. ದಿನಾ ಸ್ವಲ್ಪ ಹೊತ್ತು ಪ್ರಾಣಾಯಾಮ ಮಾಡುವುದು ಒಳ್ಳೆಯದು.
ಈ ಮೂರು ಅಂಶಗಳನ್ನು ಪಾಲಿಸಿ ನೋಡಿ ವಿಶ್ರಾಂತಿ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications