Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆಗೆ ಮುಂಚೆ ತಿನ್ನಬಾರದ 10 ಆಹಾರಗಳು
ಮದುವೆ ಫಿಕ್ಸ್ ಆದರೆ ಹೆಣ್ಣು ಹಾಗೂ ಗಂಡು ಇಬ್ಬರು ತಮ್ಮ ರೂಪ ಲಾವಣ್ಯದ ಬಗ್ಗೆ ಹೆಚ್ಚು ಗಮನ ಕೊಡಲಾರಂಭಿಸುತ್ತಾರೆ. ಮದುವೆ ದಿನ ಸಾವಿರಾರು ಜನರು ಬರುತ್ತಾರೆ. ಆ ವಿಶೇಷ ದಿನ ನಾನು ತುಂಬಾ ಆಕರ್ಷಕವಾಗಿ ಕಾಣಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.
ಸುಂದರವಾಗಿ ಕಾಣಿಸಲು ಫೇಶಿಯಲ್, ಮಾಯಿಶ್ಚರೈಸರ್ ಅಂತ ಹೆಚ್ಚಿನ ಗಮನ ಕೊಡುತ್ತಾರೆ. ಆದರೆ ಯಾವ ಆಹಾರಗಳನ್ನು ಮದುವೆಗೆ ಸ್ವಲ್ಪ ಸಮಯವಿರುವಾಗ ತಿನ್ನಬಾರದೆಂದು ಗೊತ್ತಿರುವುದಿಲ್ಲ. ಮದು ಮಗ ಹಾಗೂ ಮದು ಮಗಳು ಇಬ್ಬರಿಗೋಸ್ಕರ ಡಯಟ್ ಕ್ರಮವಿದೆ. ಅವುಗಳನ್ನು ಪಾಲಿಸಿದರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುವುದು.
ಮದುವೆಯಲ್ಲಿ ತೆಳ್ಳಗೆ ಕಾಣಿಸಬೇಕೆಂದು ಮದುವೆಗೆ ಎರಡು ತಿಂಗಳ ಮುಂಚೆ ವರ್ಕ್ ಔಟ್ ಮಾಡಿ ತಿನ್ನಬಾರದ ಆಹಾರಗಳನ್ನು ತಿಂದರೆ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮದುವೆಗೆ ರೆಡಿಯಾಗುವಾಗ ಸಾಕಷ್ಟು ಸೊಪ್ಪು ತರಕಾರಿ ಹಾಗೂ ಹಣ್ಣು ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಿ. ಈ ಕೆಳಗಿನ ಆಹಾರಗಳನ್ನು ತಿನ್ನಲು ಹೋಗಬೇಡಿ. ಈ ರೀತಿ ಮಾಡಿದರೆ ನಿಮ್ಮ ತ್ವಚೆ ಮ್ತತಷ್ಟು ಆರೋಗ್ಯಕರವಾಗಿ ಕಾಣುವುದು. ಅದರಲ್ಲೂ ಮದುವೆಗೆ ಮೇಕಪ್ ಕೂಡ ಮಾಡಿದಾಗ ತುಂಬಾ ಆಕರ್ಷಕವಾಗಿ ಕಾಣುವಿರಿ.

1. ಜಂಕ್ ಫುಡ್ಸ್:
ಕುರಕಲು ತಿಂಡಿ (ಜಂಕ್ ಫುಡ್ಸ್) ಇವುಗಳನ್ನು ತಿಂದರೆ ದೇಹದ ತೂಕ ಹೆಚ್ಚಾಗುವುದು. ಆದ್ದರಿಂದ ಈ ರೀತಿಯ ಆಹಾರಗಳನ್ನು ಮದುವೆಗೆ 2-3 ತಿಂಗಳು ಇರುವಾಗಲೇ ಬಿಡಬೇಕು.

2. ಸೋಡಾ
ಮದುವೆಗೆ ಸ್ವಲ್ಪ ದಿನಗಳ ಮುಂಚೆ ಸೋಡಾ ಹಾಕಿರುವ ತಂಪು ಪಾನೀಯಾಗಳನ್ನು ಕುಡಿಯಬೇಡಿ. ಅದರ ಬದಲು ಮಿಲ್ಕ್ ಶೇಕ್, ಜ್ಯೂಸ್ ಈ ರೀತಿಯ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು. ಏಕೆಂದರೆ ಸೋಡಾ ಹೊಟ್ಟೆಯ ಆರೋಗ್ಯ ಕೆಡಿಸುತ್ತದೆ.

3. ಹಾಲಿನ ಉತ್ಪನ್ನ
ಮದುವೆ ಒಂದು ವಾರಕ್ಕಿಂತ ಮುಂಚೆ ಹೆಚ್ಚು ಹಾಲಿನ ಉತ್ಪನ್ನಗಳನ್ನು ತಿನ್ನಲು ಹೋಗಬಾರದು. ತೆಳು ಹಾಲನ್ನು ಕುಡಿಯಬಹುದು. ಕೆಲವೊಮ್ಮೆ ಹಾಲಿನ ಉತ್ಪನ್ನಗಳಿಂದ ಅಜೀರ್ಣ ಉಂಟಾಗುತ್ತದೆ. ಒಂದು ವೇಳೆ ಅಜೀರ್ಣವಾಗಿ ತೊಂದರೆ ಅನುಭವಿಸುವುದಕ್ಕಿಂತ ಅವುಗಳನ್ನು ತಿನ್ನದಿರುವುದು ಒಳ್ಳೆಯದು.

4 ಕೃತಕ ಸಿಹಿ
ಕೃತಕ ಸಿಹಿ ಬಾಯಿ ದುರ್ವಾಸನೆ ಬೀರುತ್ತದೆ. ಆದ್ದರಿಂದ ಮದುವೆಗೆ ಒಂದು ದಿನ ಮುನ್ನ ಅಥವಾ ಮದುವೆ ದಿನ ಕೃತಕ ಸಿಹಿ ಇರುವ ಆಹಾರ ವಸ್ತುಗಳನ್ನು ತಿನ್ನಬಾರದು.

5.ಕಾಫಿ
ಕಾಫಿ ಕೂಡ ದೇಹದಲ್ಲಿ ನೀರಿನಂಶವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮದುವೆ ದಿನ ಆಕರ್ಷಕವಾಗಿ ಕಾಣಬೇಕೆಂದು ಬಯಸುವವರು ನೀರು ಹಾಗೂ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆಯದು.

6. ಉಪ್ಪು
ಅಧಿಕ ಉಪ್ಪನ್ನು ತಿನ್ನಬಾರದು. ಅಧಿಕ ಉಪ್ಪು ತಿಂದರೆ ರಕ್ತದೊತ್ತಡ ಹೆಚ್ಚಾಗುವುದು ಹಾಗೂ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಈ ರೀತಿಯಾದರೆ ಮುಖ ಕಳೆರಹಿತವಾಗಿ ಕಾಣುತ್ತದೆ.

7. ಶಾಂಪೇನ್
ಇದನ್ನು ಕುಡಿದರೆ ಜೀರ್ಣಕ್ರಿಯೆಗೆ ಕಷ್ಟವಾಗುವುದು ಹಾಗೂ ಹೊಟ್ಟೆಯಲ್ಲಿ ಗ್ಯಾಸ್ ಪ್ರಾಬ್ಲಮ್ ಉಂಟಾಗುವುದು. ಆದ್ದರಿಂದ ಮದುವೆಯ ಸ್ವಲ್ಪ ದಿನಗಳ ಮುಂದೆ ಇದನ್ನು ಕುಡಿಯುವುದನ್ನು ನಿಲ್ಲಿಸಬೇಕು.

8. ಬೀನ್ಸ್
ಬೀನ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಮದುವೆಗೆ ಒಂದು ದಿನದ ಮುಂಚೆ ತಿನ್ನಲು ಹೋಗಬಾರದು. ಇವುಗಳಲ್ಲಿ ಒಂದು ಬಗೆಯ ಸಕ್ಕರೆಯಂಶವಿರುತ್ತವೆ, ಅವುಗಳು ಬೇಗನೆ ಜೀರ್ಣವಾಗುವುದಿಲ್ಲ.

9. ಪಾಸ್ತಾ
ಪಾಸ್ತಾ ತಿನ್ನಲು ರುಚಿಕಕರವಾಗಿದ್ದರೂ ಹೊಟ್ಟೆ ದಪ್ಪಗಾಗುತ್ತದೆ ಹಾಗೂ ಗ್ಯಾಸ್ ಪ್ರಾಬ್ಲಮ್ ಕಂಡು ಬರುತ್ತದೆ. ಆದ್ದರಿಂದ ಅನ್ನ,ಪಾಸ್ತಾ, ಆಲೂಗೆಡ್ಡೆ ಈ ರೀತಿಯ ಆಹಾರಗಳಿಂದ ದೂರವಿರುವುದು ಒಳ್ಳೆಯದು.

10. ಸಿಹಿ ತಿಂಡಿ
ಸಿಹಿತಿಂಡಿ, ಐಸ್ ಕ್ರೀಮ್ ಇವುಗಳನ್ನು ನೋಡುವಾಗ ತಿನ್ನಬೇಕೆಂದು ಅನಿಸುತ್ತದೆ. ಆದರೆ ಇವುಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುವುದು.



Click it and Unblock the Notifications
