Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಹಣ್ಣುಗಳನ್ನು ಹೇಗೆ ತಿಂದರೆ ತುಂಬಾ ಒಳ್ಳೆಯದು?
ಆಹಾರಕ್ರಮದಲ್ಲಿ ಹಣ್ಣುಗಳನ್ನು ಸೇರಿಸಿದಷ್ಟು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಊಟದ ನಂತರ ಹಣ್ಣುಗಳನ್ನು ತಿನ್ನುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಮತ್ತೆ ಕೆಲವರು ತಮಗೆ ತಿನ್ನಬೇಕೆನಿಸಿದಾಗ ಹಣ್ಣುಗಳನ್ನು ತಿನ್ನುತ್ತಾರೆ. ಅದರೆ ಈ ಹಣ್ಣುಗಳನ್ನು ತಿನ್ನಲು ಕೆಲವೊಂದು ವಿಧಾನವಿದೆ! ಅದರಂತೆ ತಿಂದರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಾಗುವುದು.

ಯಾವ ಸಮಯದಲ್ಲಿ ಹಣ್ಣು ತಿನ್ನುವುದು ತುಂಬಾ ಒಳ್ಳೆಯದು?
ಹಣ್ಣುಗಳನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದು. ಬೆಳಗ್ಗೆ ಒಂದು ಲೋಟ ನೀರು ಕುಡಿದು ಹಣ್ಣುಗಳನ್ನು ತಿಂದರೆ ಅದು ಸರಿಯಾಗಿ ಜೀರ್ಣವಾಗಿ ದೇಹಕ್ಕೆ ಅದರಲ್ಲಿರುವ ಎಲ್ಲಾ ಪೋಷಕಂಶಗಳು ದೊರೆಯುತ್ತದೆ. ಊಟದ ನಂತರ ತಿನ್ನುವುದು ಅಷ್ಟು ಒಳ್ಳೆಯ ಅಭ್ಯಾಸವಲ್ಲ.
ಹಣ್ಣು ತಿಂದ ನಂತರ ಊಟ ಅಥವಾ ತಿಂಡಿ ತಿನ್ನಲು ಕನಿಷ್ಠ ಗಂಟೆ ಅಂತರವಿರಬೇಕು. ಊಟದ ನಂತರ ತಿನ್ನುವುದಾದರೆ 2 ಗಂಟೆಗಳ ಬಳಿಕ ತಿನ್ನುವುದು ಒಳ್ಳೆಯದು. ಹಣ್ಣು ಮತ್ತು ಊಟ ಜೊತೆಯಲ್ಲಿಯೆ ಮಾಡಿದರೆ ಸರಿಯಾಗಿ ಆಗುವುದಿಲ್ಲ. ಇದರಿಂದ ಕೆಲವೊಮ್ಮೆ ಅಜೀರ್ಣದಂತಹ ಸಮಸ್ಯೆ ಕಾಣಿಸುವುದು.
ಬೇರೆ ಆಹಾರ ಜೊತೆ ಹಣ್ಣು ಮಿಶ್ರ ಮಾಡಿ ತಿನ್ನಬಹುದೇ?
ಹಣ್ಣುಗಳನ್ನು ಮೊಸರು ಅಥವಾ ಉಪ್ಪಿನ ಜೊತೆ ಮಿಶ್ರ ಮಾಡಿ ತಿಂದರೆ ಯವುದೇ ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ. ಹಣ್ಣುಗಳಾದ ಪೈನಾಪಲ್( ಅನನಾಸ್), ಕಿತ್ತಳೆ, ಕಲ್ಲಂಗಡಿ, ದಾಳಿಂಬೆಯನ್ನು ಸಲಾಡ್ ಜೊತೆ ಸೇರಿಸಿ ತಿನ್ನುವುದು ಒಳ್ಳೆಯದು.
ಹಣ್ಣುಗಳನ್ನು ಬೇರೆ ಆಹಾರ ಜೊತೆ ಮಿಶ್ರ ಮಾಡಿ ತಿಂದರೆ ತೊಂದರೆ ಏನೂ ಅಗುವುದಿಲ್ಲ. ಆದರೆ ಅದರಲ್ಲಿರುವ ಸತ್ವಗಳು ದೇಹಕ್ಕೆ ಸಂಪೂರ್ಣವಾಗಿ ದೊರಕಲು ಮೇಲೆ ಹೇಳಿದ ವಿಧಾನವನ್ನು ಅನುಸರಿಸಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
