Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲೆನ್ಸ್ ಬಳಸುವವರು ತಿಳಿದಿರಲೇಬೇಕಾದ 8 ಅಂಶಗಳು

ಕಣ್ಣಿನ ಆರೋಗ್ಯಕ್ಕಾಗಿ ಕೆಲ ಸಲಹೆಗಳು:
1. ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಮೊದಲು ಕೈಗಳನ್ನು ಶುಚಿಯಾಗಿ ತೊಳೆದು ಟವಲ್‌ನಿಂದ ಚೆನ್ನಾಗಿ ಒರೆಸಬೇಕು.
2. ಲೆನ್ಸ್ ಧರಿಸುವ ಮೊದಲು ಅದರ ಕವರ್‌ನಲ್ಲಿ ನೀಡಿರುವ ಸೂಚನೆಗಳನ್ನು ಓದಿ ಅದರಂತೆ ಪಾಲಿಸಬೇಕು. ಈ ರೀತಿ ಮಾಡುವುದರಿಂದ ಲೆನ್ಸ್ ಬೇಗನೆ ಹಾಳಾಗದಂತೆ ಸಂರಕ್ಷಿಸಬಹುದು.
3. ಲೆನ್ಸ್ ಧರಿಸುವ ಮೊದಲು ಮತ್ತು ಧರಿಸಿದ ನಂತರ ಅದನ್ನು ಸಲ್ಯೂಷನ್ (ದ್ರಾವಣ)ದಲ್ಲಿ ಶುಚಿಗೊಳಿಸಬೇಕು.
4. ಲೆನ್ಸ್ ಕವರ್ ಅಥವಾ ಸ್ಟೋರ್ ಬಾಕ್ಸ್ ಅನ್ನು 3 ತಿಂಗಳಿಗೊಮ್ಮೆ ಬದಲಾಯಿಸಬೇಕು. ಪ್ರತಿ ಬಾರಿ ಉಪಯೋಗಿಸಿದ ನಂತರ ಲೆನ್ಸ್ ಬಾಕ್ಸ್ ಅನ್ನು ಶುಚಿಗೊಳಿಸಬೇಕು. ಲೆನ್ಸ್ ಬಾಕ್ಸ್ ಶುಚಿಗೊಳಿಸಿ ಅದನ್ನು ಒಣಗಿಸಿಡಬೇಕು.
5. ಕಾಲಾವಧಿ ಮುಗಿದ ಲೆನ್ಸ್ ಸಲ್ಯೂಷನ್ ಬಳಸಬಾರದು. ಇಂತಹ ಸಲ್ಯೂಷನ್ ಬಳಸಿದರೆ ಲೆನ್ಸ್ ಹಾಳಾಗುವುದು ಮಾತ್ರವಲ್ಲಿ ಕಣ್ಣಿಗೆ ಹಾನಿಯಾಗುತ್ತದೆ. ಕಣ್ಣು ಸೂಕ್ಷ್ಮವಾದ ಅಂಗವಾಗಿರುವುದರಿಂದ ಬಹಳ ಎಚ್ಚರಿಕೆವಹಿಸಬೇಕು.
6. ನೀರಿನಲ್ಲಿ ಆಡುವಾಗ, ಹೆಚ್ಚು ದೂಳಿರುವ ಕಡೆ ಕಣ್ಣಿನ ಲೆನ್ಸ್ ಧರಿಸದಿರುವುದು ಒಳ್ಳೆಯದು. ಅದರಲ್ಲೂ ಗಾಡಿಯಲ್ಲಿ ಹೋಗುವಾಗ ಕಣ್ಣಿನ ಲೆನ್ಸ್ ಹಾಕುವ ಬದಲು ಕನ್ನಡಕ ಧರಿಸುವುದು ಉತ್ತಮ.
7. ಕಣ್ಣಿನ ಮೇಕಪ್ ಮಾಡುವುದಾದರೆ ಮೊದಲು ಮೇಕಪ್ ಮಾಡಿ ನಂತರ ಲೆನ್ಸ್ ಹಾಕಬೇಕು.
8. ಬಿಸಿಲಿನಲ್ಲಿ ಹೋಗುವಾಗ ಕಾಂಟ್ಯಾಕ್ಟ್ ಲೆನ್ಸ್ ಹಾಕಿದರೆ ಸನ್ ಗ್ಲಾಸ್ ಧರಿಸಬೇಕು. ಅಥವಾ ಬಿಸಿಲನ್ನು ತಡೆಯಲು ಟೋಪಿ ಧರಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
