Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಣ್ಣೀರಲ್ಲಿ ಮೀಯೋಣ ಬನ್ನಿ, ಏಳು ಲಾಭವಿದೆ!
ಸುಡುವ ಬೇಸಿಗೆಯಲ್ಲೂ ತಣ್ಣೀರು ಸ್ನಾನಕ್ಕೆ ಅಂಜುವವವರು ನಮ್ಮಲ್ಲಿ ಅನೇಕರು ಇದ್ದಾರೆ. ಬಿಸಿ ನೀರಿಗಿಂತ ತಣ್ಣೀರು ಸ್ನಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದನ್ನು ಕೇಳುತ್ತೇವೆ. ಆದರೆ ಅದು ಏಕೆ ಮತ್ತು ಹೇಗೆ ಒಳ್ಳೆಯದು ಎಂದು ಗೊತ್ತೆ? ತಣ್ಣೀರು ಸ್ನಾನದಿಂದ ದೊರೆಯುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಲು ಮುಂದೆ ಓದಿ.
1. ರಕ್ತ ಸಂಚಲನ:
ನಮ್ಮ ದೇಹದಲ್ಲಿ ತ್ವಚೆ ಕೆಳಗಡೆ ರಕಕ್ತನಾಳಗಳಿರುತ್ತವೆ. ತಣ್ಣೀರು ಮೈ ಮೇಲೆ ಬಿದ್ದಾಗ ರಕ್ತ ಸಂಚಾರ ಕ್ಷಣ ಕಾಲ ಕಮ್ಮಿಯಾಗಿ ಪುನಃ ದೇಹದ ಉಷ್ಣತೆಗೆ ಅನುಗುಣವಾಗಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಆದರೆ ಈ ರೀತಿ ರಕ್ತ ಸಂಚಲನ ಉಂಟಾದಾಗ ಹೃದಯದ ಮೇಲೆ ಯಾವುದೇ ಅಧಿಕ ಒತ್ತಡ ಬೀಳುವುದಿಲ್ಲ. ತಣ್ಣೀರು ಸ್ನಾನ ಮಾಡಿದಾಗ ದೇಹದ ಎಲ್ಲಾ ಭಾಗಕ್ಕೆ ರಕ್ತ ಸಂಚಲನ ಸರಾಗವಾಗಿ ಆಗುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.

2. ಕ್ಯಾಲೋರಿ:
ತಣ್ಣೀರು ಸ್ನಾನ ಮಾಡಿದಾಗ ಸ್ವಲ್ಪ ಸಮಯಕ್ಕೆ ದೇಹದ ಉಷ್ಣತೆ ಕಡಿಮೆಯಾಗುವುದು, ಸ್ವಲ್ಪ ಹೊತ್ತಿನಲ್ಲಿಯೆ ದೇಹ ಸಾಮಾನ್ಯ ಉಷ್ಣತೆಯನ್ನು ಪಡೆಯುತ್ತದೆ. ಈ ಕ್ರಿಯೆಗೆ ತೆಗೆದು ಕೊಳ್ಳುವುದು ನಿಮಿಷಗಳಾದರೂ ಇದು ದೇಹದಲ್ಲಿ ಸಂಗ್ರಹವಾಗಿರುವ ಅಧಿಕ ಕ್ಯಾಲೋರಿಯನ್ನು ಸ್ವಲ್ಪ ಮಟ್ಟಿಗೆ ಕರಗಿಸುತ್ತದೆ.
3. ಉಸಿರಾಟದ ಕ್ರಿಯೆ:
ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಕಡಿಮೆ ಮಾಡಿ, ಆಮ್ಲಜನಕದ ಪ್ರಮಾಣವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ತಣ್ಣೀರು ಸ್ನಾನ ಮಾಡಿದಾಗ ಮೈಯಲ್ಲಿ ಹುರುಪು ಹೆಚ್ಚಾಗುವುದು.
4. ವಿಶ್ರಾಂತಿ:
ಬೇಸಿಗೆ ಕಾಲದಲ್ಲಿ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಆರಾಮ ಅನಿಸುವುದು. ತುಂಬಾ ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತದೆ.
5. ತ್ವಚೆ:
ವಿಪರೀತ ಬೆವರುತ್ತಿದ್ದರೆ ಬೆವರನ್ನು ತಡೆಗಟ್ಟಲು ಕ್ರೀಮ್ ಹಚ್ಚುವ ಬದಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.
6. ಮೈಕೈ ನೋವು ಕಡಿಮೆ ಮಾಡುತ್ತೆ:
ತುಂಬಾ ಹೊತ್ತು ವ್ಯಾಯಾಮ ಮಾಡಿದಾಗ ದೇಹದ ಸ್ನಾಯುಗಳು ಬಿಗಿಯಾಗಿರುತ್ತದೆ. ಅಲ್ಲದೆ ಆರ್ಮಿ, ಸ್ಪೋರ್ಟ್ಸ್ ಇವುಗಳ ಟ್ರೈನಿಂಗ್ ತುಂಬಾ ಕಷ್ಟವಾಗಿರುತ್ತದೆ. ದೇಹದ ಮೇಲೆ ಹೆಚ್ಚಿನ ಶ್ರಮ ಬಿದ್ದಿರುತ್ತದೆ. ಸ್ನಾಯುಗಳು ಬಿಗಿಯಾಗಿರುತ್ತವೆ, ಕೈಕಾಲುಗಳಲ್ಲಿ ನೋವು ಬಂದಿರುತ್ತದೆ. ಈ ರೀತಿ ಮೈಕೈ ನೋವು ಉಂಟಾದಾಗ ನೋವು ಕಡಿಮೆಯಾಗಲು ತಣ್ಣೀರು ಸ್ನಾನ ಒಳ್ಳೆಯದು.
7. ಕರೆಂಟ್:
ತಣ್ಣೀರು ಸ್ನಾನದಿಂದ ಕರೆಂಟು ಖರ್ಚಾಗುವುದು ಉಳಿಸಬಹುದು ಅಂದರೆ ನಿಮಗೆ ಹಾಸ್ಯಾಸ್ಪದ ಅನಿಸಬಹುದು, ಆದರೆ ಇದು ಚಿಂತಿಸಬೇಕಾದ ವಿಷಯ. ವಿದ್ಯುತ್ ಮಿತ ಬಳಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
