Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ದಪ್ಪಗಿರುವುದಕ್ಕೆ ಈ ಕಾರಣ ಹೇಳಬೇಡಿ ಪ್ಲೀಸ್!

'ಸಣ್ಣಗಾಗ ಬೇಕೆಂಬ ಆಸೆ, ಆದರೆ ನನ್ನ ದೇಹ ತೂಕವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾವ ವ್ಯಾಯಾಮ ಅಥವಾ ಡಯಟ್ ಪ್ರಯೋಜನಕಾರಿ ಆಗಲಿಲ್ಲ ' ಎಂದು ನಿರಾಸೆ ವ್ಯಕ್ತ ಪಡಿಸುತ್ತಾರೆ. ಆದರೆ ಅವರ ಭಾವನೆ ತಪ್ಪು. ಏಕೆಂದರೆ ತೆಳ್ಳಗಾಗಲು ಅವರು ನಿಜವಾದ ಪರಿಶ್ರಮ ಪಡುತ್ತಿಲ್ಲ ಅಷ್ಟೆ.
ವ್ಯಾಯಾಮ ಮತ್ತು ಡಯಟ್ ಮಾಡಿ ಒಂದೇ ವಾರದಲ್ಲಿ ಸಣ್ಣಗಾಗ ಬೇಕೆಂದರೆ ಆಗಲು ಸಾದ್ಯವಿಲ್ಲ, ಕೆಲವರಿಗೆ ಸಣ್ಣಗಾಗಿ, ಸರಿಯಾದ ಮೈಕಟ್ಟು ಪಡೆಯಲು ಒಂದು ವರ್ಷ ಕೂಡ ಹಿಡಿಯಬಹುದು. ಇದಕ್ಕಾಗಿ ಮಾಡಬೇಕಾದದರು ಕಟ್ಟುನಿಟ್ಟಿನ ವ್ಯಾಯಾಮ ಮತ್ತು ಅಹಾರಕ್ರಮ.
ಒಂದು ವೇಳೆ ನೀವು ದಪ್ಪಗಿದ್ದು, ನಿಮ್ಮ ದಪ್ಪಕ್ಕೆ ಈ ಕೆಳಗಿನ ಕಾರಣಗಳನ್ನು ಕೊಡುವ ಅಭ್ಯಾಸವಿಟ್ಟು ಕೊಂಡಿದ್ದರೆ ಆ ಅಭ್ಯಾಸವನ್ನು ಇಂದೇ ಬಿಡುವುದು ಒಳ್ಳೆಯದು. ಏಕೆಂದರೆ ಈ ಕಾರಣಗಳೆ ನಿಮ್ಮನ್ನು ಮತ್ತಷ್ಟು ಸೋಮಾರಿಯನ್ನಾಗಿ ಮಾಡಿ ದೇಹದ ತೂಕ ಹೆಚ್ಚಾಗಲು ಕಾರಣವಾಗಿದೆ.
1. ಇದು ವಂಶ ಪಾರಂಪರ್ಯವಾದ ದಪ್ಪ: 'ನನ್ನ ದಪ್ಪ ವಂಶ ಪಾರಂಪರ್ಯವಾಗಿ ಬಂದಿದ್ದು, ಆದ್ದರಿಂದ ಏನು ಮಾಡಿದರೂ ಕರಗುವುದಿಲ್ಲ' ಎಂದು ಹೇಳುವುದೇ ದಪ್ಪ ಕಡಿಮೆಯಾಗದಿರಲು ಪ್ರಮುಖ ಕಾರಣ. ನಿಮ್ಮ ಪೋಷಕರು ದಪ್ಪವಿರಬಹುದು, ಅದರೆ ನೀವು ಕಟ್ಟುನಿಟ್ಟಿನ ವ್ಯಾಯಾಮ ಮತ್ತು ಡಯಟ್ ಪಾಲಿಸಿದರೆ ಆಕರ್ಷಕ ಮೈಕಟ್ಟು ಪಡೆಯಬಹುದು.
2. ಡಯಟ್ ಮಾಡಿದರೆ ನಿಶ್ಯಕ್ತಿ ಉಂಟಾಗುತ್ತದೆ: ಡಯಟ್ ಅಂದ ತಕ್ಷಣ ಹೆಚ್ಚಿನವರ ಯೋಚನೆ ಊಟಬಿಡುವುದು. ಈ ರೀತಿ ಮಾಡಿದರೆ ನಿಶ್ಯಕ್ತಿ ಉಂಟಾಗಿ ಅನಾರೋಗ್ಯ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಡಯಟ್ ಅಂದರೆ ಅತಿ ಕೊಬ್ಬಿನ ಪದಾರ್ಥಗಳನ್ನು ತಿನ್ನದೆ ಪ್ರೊಟೀನ್ ಮತ್ತು ನಾರಿನಂಶವಿರುವ ಪದಾರ್ಥಗಳನ್ನು ತಿನ್ನಬೇಕು. ಈ ರೀತಿ ಮಾಡಿದರೆ ಆರೋಗ್ಯ ಹಾಳಾಗುವುದಿಲ್ಲ, ದೇಹದ ತೂಕ ಕಡಿಮೆಯಾಗುವುದು.
3. ಬಿಡುವಿಲ್ಲ: ತುಂಬಾ ಕೆಲಸದ ಒತ್ತಡ. ಆದ್ದರಿಂದ ವ್ಯಾಯಾಮ ಮಾಡಲು ಬಿಡುವಿಲ್ಲ ಅನ್ನುವುದು ಹೆಚ್ಚಿನವರು ಕೊಡುವ ಕಾರಣ. ಆದರೆ ಬಿಡುವು ಯಾವುತ್ತು ಇರುವುದಿಲ್ಲ. ದೇಹದ ಆರೋಗ್ಯಕ್ಕಾಗಿ ದಿನದಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಳ್ಳಲು ಮನಸ್ಸು ಮಾಡಬೇಕು, ಸೋಮಾರಿತನ ಬಿಡಬೇಕು ಅಷ್ಟೆ.
4. ಏನೂ ಮಾಡಿದರೂ ಪ್ರಯೋಜನವಾಗಲಿಲ್ಲ: ಡಯಟ್ ಮತ್ತು ವ್ಯಾಯಾಮ ಮಾಡಿದರೂ ಪ್ರಯೋಜನವಾಗುತ್ತಿಲ್ಲವಾದರೆ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಗಳಗಂಡ (ಥೈರಾಯ್ಡ್) ರೋಗವಿದ್ದರೆ ದೇಹದ ತೂಕ ಕಡಿಮೆಯಾಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications