Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚೀಸ್ ನಲ್ಲಿದೆ ಆರೋಗ್ಯ ಹೆಚ್ಚಿಸುವ ನವ ಅಂಶಗಳು

1. ಹಲ್ಲುಗಳನ್ನು ಗಟ್ಟಿಮುಟ್ಟಾಗಿಸುತ್ತದೆ: ಚೀಸ್ ನಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳನ್ನು ಬಲಪಡಿಸುತ್ತದೆ ಅಲ್ಲದೆ ಇದರಲ್ಲಿ ಕಡಿಮೆ ಲ್ಯಾಕ್ಟೋಸ್ ಇರುವುದರಿಂದ ಹುಳುಕು ಹಲ್ಲುಗಳು ಉಂಟಾಗದಂತೆ ತಡೆಯುತ್ತದೆ. ಆದ್ದರಿಂದ ಇದನ್ನು ಊಟದ ನಂತರ ಸೇವಿಸುವುದು ಒಳ್ಳೆಯದು.
2. ಸ್ನಾಯುಗಳನ್ನು ಬಲಪಡಿಸುತ್ತದೆ: ಚೀಸ್ ನಲ್ಲಿ ವಿಟಮಿನ್ ಬಿ-12 ಮತ್ತು ಪ್ರೊಟೀನ್ ಇರುವುದರಿಂದ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಇದನ್ನು ಸೇವಿಸಿದರೆ ಕೀಲು ನೋವು ಉಂಟಾಗುವುದು, ಮೂಳೆ ಸವೆತ ಇವುಗಳನ್ನು ತಡೆಗಟ್ಟಬಹುದು.
3. ಗರ್ಭಿಣಿಯರ ಆರೋಗ್ಯಕ್ಕೆ: ಗರ್ಭಿಣಿಯರು ಚೀಸ್ ಸೇವಿಸುವುದರಿಂದ ದೇಹಕ್ಕೆ ಉತ್ತಮವಾದ ಪೋಷಕಾಂಶ, ವಿಟಮಿನ್ ಮತ್ತು ಪ್ರೊಟೀನ್ ದೊರೆಯುವುದು. ಈ ಸಮಯದಲ್ಲಿ ಚೀಸ್ ಸೇವಿಸಿದರೆ ಹೆರಿಗೆಯ ನಂತರ ಎದೆ ಹಾಲು ಉತ್ಪತ್ತಿಯನ್ನು ಹೆಚ್ಚು ಮಾಡಲು ಸಹಕಾರಿಯಾಗಿದೆ.
4. ತ್ವಚೆ ರಕ್ಷಣೆ: ಚೀಸ್ ನಲ್ಲಿ ವಿಟಮಿನ್ ಬಿ ಇರುವುದರಿಂದ ತ್ವಚೆಯನ್ನು ಆರೋಗ್ಯಕರ ಮತ್ತು ಕಾಂತಿಯುತವಾಗಿ ಇಡುತ್ತದೆ.
5. ಕ್ಯಾನ್ಸರ್ ತಡೆಗಟ್ಟುವಿಕೆ: ಚೀಸ್ ನಲ್ಲಿ CLA (conjugated linoleic acid) ಮತ್ತು ಸ್ಪಿನ್ಗೋಲಿಪಿಡ್ಸ್ ಅಂಶವಿದ್ದು ಇವು ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ.
6. ದೇಹದ ತೂಕ ಹೆಚ್ಚಿಸುತ್ತದೆ: ತುಂಬಾ ಸಪೂರವಿದ್ದವರು ಚೀಸ್ ಪ್ರತಿನಿತ್ಯ ಸೇವಿಸಿದರೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಚೀಸ್ ನಲ್ಲಿ ಉತ್ತಮ ಕೊಬ್ಬಿನಂಶ, ಕ್ಯಾಲ್ಸಿಯಂ, ಖನಿಜಾಂಶಗಳು ಮತ್ತು ವಿಟಮಿನ್ ಗಳಿದ್ದು ದೇಹದ ತೂಕ ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
7. ಮೈಗ್ರೇನ್ ಗೆ ಉತ್ತಮ ಚಿಕಿತ್ಸೆ: ಚೀಸ್ ನಲ್ಲಿ ಅಧಿಕ ಕ್ಯಾಲ್ಸಿಯಂ ಇರುವುದರಿಂದ ಸಹಿಸಲು ಅಸ್ಯಾಧವಾದ ತಲೆನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
8. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಪುರುಷರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಅನೇಕ ರೀತಿಯ ಕಾಯಿಲೆಗಳು ಬರದಂತೆ ತಡೆಯುವುದು. ಇದರಲ್ಲಿ ರಂಜಕ, ಸತು, ವಿಟಮಿನ್ ಎ, ವಿಟಮಿನ್ ಬಿ12 ಪೋಷಕಾಂಶಗಳು ಇರುವುದರಿಂದ ಪುರುಷರನ್ನು ದೃಢಕಾಯರಾಗಿ ಮಾಡುವುದು.
9. ಮುಟ್ಟುವಿನ ಸಮಸ್ಯೆ: ಚೀಸ್ ನಲ್ಲಿರುವ ಕ್ಯಾಲ್ಸಿಯಂ ಅಂಶ ಮುಟ್ಟುವಿನ ಮೊದಲು ಕಾಣಿಸಿಕೊಳ್ಳುವ ಸೊಂಟನೋವು ಅಥವಾ ಹೊಟ್ಟೆನೋವಿನಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
