Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಎತ್ತರ ಹೆಚ್ಚಿಸಿಕೊಳ್ಳಲು ಈ ಆಹಾರ ತಿನ್ನಿ

ಆದರೆ ನಿಮಗೆ ಗೊತ್ತಾ? ಕೆಲವು ರೀತಿಯ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹದ ಎತ್ತರವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು. ಆ ಆಹಾರಗಳು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ.
ಎತ್ತರ ಹೆಚ್ಚಿಸುವ ಆಹಾರಗಳು:
* ವಿಟಮಿನ್ ಡಿ: ಎತ್ತರ ಹೆಚ್ಚಿಸುವಲ್ಲಿ ಅತಿ ಅಗತ್ಯವಿರುವುದು ವಿಟಮಿನ್ ಡಿ. ಕ್ಯಾಲ್ಸಿಯಂ ದೇಹಕ್ಕೆ ಹೆಚ್ಚು ಸೇರಿದಷ್ಟು ಮೂಳೆಗಳ ಬೆಳವಣಿಗೆಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದ್ದರಿಂದ ವಿಟಮಿನ್ ಡಿ ಅಂಶವನ್ನು ಹೊಂದಿರುವ ಮೀನು, ಧಾನ್ಯಗಳು, ಮೊಟ್ಟೆ, ಟೋಫು, ಸೋಯಾ ಹಾಲು, ಸೋಯಾ ಬೀನ್, ಅಣಬೆ, ಬಾದಾಮಿ ಸೇವನೆ ಒಳ್ಳೆಯದು.
* ಹಾಲು, ಓಟ್ ಮೀಲ್: ಎತ್ತರ ಏರಬೇಕೆಂದರೆ ದೇಹಕ್ಕೆ ಪ್ರೊಟೀನ್ ಅಂಶ ಅತ್ಯವಶ್ಯಕ. ಪ್ರೊಟೀನ್ ಹೆಚ್ಚಿದ್ದಷ್ಟು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತದೆ. ಆದ್ದರಿಂದ ಪ್ರೊಟೀನ್ ಹೆಚ್ಚಿರುವ ಹಾಲು, ಚೀಸ್, ಬೀನ್ಸ್, ಕುಂಬಳಕಾಯಿ, ಕಲ್ಲಂಗಡಿಯ ಬೀಜ ಇವುಗಳನ್ನು ತಿನ್ನಬಹುದು. ಚಿಕನ್, ಓಟ್ ಮೀಲ್, ಸೊಯಾ ಬೀನ್ ಮತ್ತು ಇನ್ನಿತರ ದವಸಗಳು ಎತ್ತರವನ್ನು ಹೆಚ್ಚಿಸುತ್ತದೆ.
* ಪಾಲಾಕ್, ಕ್ಯಾರೆಟ್: ದೇಹದ ಅಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಬೇಕೆಂದರೆ ವಿಟಮಿನ್ ಎ ಸಹಾಯ ಬೇಕೇ ಬೇಕು. ವಿಟಮಿನ್ ಎ ಪೂರಿತ ಆಹಾರ ಸೇವನೆಯಿಂದ ಹೊಳೆಯುವ ತ್ವಚೆಯನ್ನೂ ಪಡೆಯಬಹುದು. ಪಾಲಾಕ್, ಬೀಟ್ ರೂಟ್, ಕ್ಯಾರೆಟ್, ಚಿಕನ್, ಪಪ್ಪಾಯ, ಪೀಚ್, ಹಾಲು, ಟೊಮೆಟೊ, ಬಟಾಣಿ, ಅಪ್ರಿಕಾಟ್ ಮುಂತಾದವುಗಳಲ್ಲಿ ವಿಟಮಿನ್ ಎ ಹೆಚ್ಚಿದೆ. ಟೊಮೆಟೊ, ಕ್ಯಾರೆಟ್, ಬೀಟ್ ರೂಟ್ ಇವುಗಳ ಜ್ಯೂಸ್ ಗಳನ್ನೂ ಸೇವಿಸಬಹುದು.
* ಮೊಟ್ಟೆ, ಹಾಲು: ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಹಾಲು, ಚೀಸ್, ಮೊಟ್ಟೆಯನ್ನು ಪ್ರತಿ ದಿನ ಸೇವಿಸುತ್ತಿದ್ದರೆ ಎತ್ತರ ಹೆಚ್ಚುತ್ತದೆ. ಈ ಆಹಾರಗಳು ರುಚಿಕರ ಮತ್ತು ಹೊಟ್ಟೆ ತುಂಬುವುದಷ್ಟೇ ಅಲ್ಲ, ಆರೋಗ್ಯವನ್ನು ಹೆಚ್ಚಿಸುತ್ತದೆ.
* ಬಾಳೆಹಣ್ಣು: ದೈಹಿಕ ಬೆಳವಣಿಗೆಗೆ ಖನಿಜಾಂಶದ ಅಗತ್ಯ ಹೆಚ್ಚಿದೆ. ಇದು ದೇಹದಲ್ಲಿ ರಕ್ತ ಸಂಚಲನವನ್ನೂ ಅಭಿವೃದ್ಧಿ ಪಡಿಸುತ್ತದೆ. ಆದ್ದರಿಂದ ಖನಿಜಾಂಶ ಹೆಚ್ಚಿರುವ ಬೀನ್ಸ್, ಬ್ರೊಕೊಲಿ, ಪಾಲಾಕ್, ಹೂಕೋಸು, ಕುಂಬಳಕಾಯಿ, ಕ್ಯಾರೆಟ್, ಬಾಳೆಹಣ್ಣು, ದ್ರಾಕ್ಷಿ ಇಂತಹ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
