Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಅಜೀರ್ಣತೆ, ಗ್ಯಾಸ್ ತರುವ ಆಹಾರ ಯಾವುದು?

ಅತಿಯಾದ ಆಸಿಡ್ ಹೊಟ್ಟೆಯಲ್ಲಿ ಉತ್ಪತ್ತಿಯಾದಾಗ ಅಜೀರ್ಣತೆ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ತೇಗು ಮತ್ತು ಎದೆ ಉರಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಯಾವ ರೀತಿಯ ಆಹಾರ ಸೇವನೆ ಅಜೀರ್ಣತೆಗೆ ಕಾರಣವಾಗುತ್ತವೆ ಎಂದು ತಿಳಿದುಕೊಂಡರೆ ಈ ಸಮಸ್ಯೆಯಿಂದ ದೂರವುಳಿಯಬಹುದು.
ಅಜೀರ್ಣ ಮತ್ತು ಗ್ಯಾಸ್ ತರುವ ಆಹಾರ ಪದಾರ್ಥಗಳು:
1. ಚಿಪ್ಸ್: ಎಣ್ಣೆ ಮತ್ತು ಬೊಜ್ಜಿನಂಶವಿರುವ ಆಹಾರದಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಎಣ್ಣೆ ಗ್ಯಾಸ್ ಉತ್ಪತ್ತಿ ಮಾಡಿ ತೇಗು ಉಂಟಾಗಿ ಅಜೀರ್ಣತೆಯಿಂದ ಬಳಲುವಂತಾಗುತ್ತದೆ. ಆದ್ದರಿಂದ ಫಾಸ್ಟ್ ಫುಡ್ ಗಳಾದ ಬರ್ಗರ್, ಫ್ರೆಂಚ್ ಫ್ರೈ, ಆಲೂ ಚಿಪ್ಸ್, ಪಕೋಡಾ, ಬೆಣ್ಣೆ, ಹುರಿದ ಮಾಂಸ ಇವುಗಳಿಂದ ದೂರವಿರುವುದು ಒಳಿತು.
2. ಖಾರಾ ಪದಾರ್ಥ: ಅತಿ ಖಾರವಾದ ಪದಾರ್ಥಗಳು ಅಜೀರ್ಣ ಮತ್ತು ಗ್ಯಾಸ್ ತುಂಬಿಕೊಳ್ಳಲು ಕಾರಣ. ಅದರಲ್ಲೂ ಬೀದಿ ಬದಿಯ ಖಾರದ ಪದಾರ್ಥಗಳು ಹೊಟ್ಟೆಗೆ ತಂಪಲ್ಲ. ಕೆಂಪು ಮೆಣಸಿನಕಾಯಿ ಪುಡಿ, ಚಾಟ್ ಮಸಾಲಾ ಪುಡಿ ಇವುಗಳ ಬೆರೆಸಿದ ಆಹಾರದ ಅತಿಯಾದ ಸೇವನೆ ಮಾಡಬಾರದು. ಏಕೆಂದರೆ ಖಾರ ಮತ್ತು ಸಾಂಬಾರು ಪದಾರ್ಥಗಳು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಮತ್ತು ಎದೆ ಉರಿ ಕಾಣಿಸಿಕೊಳ್ಳುತ್ತದೆ.
3. ಮೂಲಂಗಿ : ಎಲೆ ಕೋಸು ಮತ್ತು ಮೂಲಂಗಿ ಆರೋಗ್ಯಕರ ತರಕಾರಿ. ಆದರೆ ಈ ತರಕಾರಿ ಅಜೀರ್ಣವನ್ನೂ ತಂದೊಡ್ಡಬಹುದು. ಈ ತರಕಾರಿಗಳನ್ನು ಕುದಿಸುವುದಕ್ಕಿಂತ ಪಾತ್ರೆ ಮುಚ್ಚಿ ಆವಿಯಲ್ಲಿ ಬೇಯಿಸಿದರೆ ಪ್ರೊಟೀನ್ ದೊರೆಯುವುದಲ್ಲದೆ ಅಜೀರ್ಣವೂ ಇರುವುದಿಲ್ಲ.
4. ಕಾಫಿ, ಟೀ: ನೀವು ಕಾಫಿ ಅಥವಾ ಟೀ ಚಟ ಅಂಟಿಸಿಕೊಂಡಿದ್ದರೆ ಎದೆ ಉರಿ ಖಚಿತ. ಆದ್ದರಿಂದ ಹೆಚ್ಚು ಕಾಫಿ ಟೀ ಸೇವನೆ, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆ ಮಾಡಲೇಬಾರದು.
5. ಕಾರ್ಬೊನೇಟೆಡ್ ಪಾನೀಯ: ಕೋಕ್, ಸೋಡಾ ಬೆರೆಸಿರುವ ಪಾನೀಯ ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆಯಲ್ಲಿರುವ ಆಹಾರವನ್ನು ಮೇಲಕ್ಕೆ ತಳ್ಳುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಉತ್ಪಾದನೆಯಾಗಿ ತಳಮಳ ಆರಂಭಗೊಳ್ಳುತ್ತದೆ.
6. ಹಾಲು: ಅತಿ ಸುಲಭವಾಗಿ ಅಜೀರ್ಣವಾಗುವ ಅಂಶವೆಂದರೆ ಹಾಲು. ಲ್ಯಾಕ್ಟೋಸ್ ಕೊರತೆಯಿದ್ದವರಿಗೆ ಹಾಲನ್ನು ಜೀರ್ಣಗೊಳಿಸಲು ತೊಂದರೆಯುಂಟಾಗಿ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಆಗುತ್ತದೆ. ಆದ್ದರಿಂದ ಹಾಲು ಕುಡಿದ ನಂತರ ಹೊಟ್ಟೆ ತಳಮಳಗೊಂಡರೆ ಲ್ಯಾಕ್ಟೋಸ್ ಇರುವ ಆಹಾರಗಳನ್ನು ಆನಂತರ ಸೇವಿಸುವುದು ಬಿಡಬೇಕು.
7. ನಟ್ಸ್: ಕೆಲವು ನಟ್ಸ್ ಗಳೂ ಕೂಡ ಅಜೀರ್ಣ ತರುತ್ತದೆ. ನಟ್ಸ್ ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವೆನಿಸದರೆ ಅದರ ಸೇವನೆಯನ್ನು ತ್ಯಜಿಸಬೇಕು. ನಟ್ಸ್ ಗಳಲ್ಲಿ ಟ್ಯಾನಿಸ್ ಇರುವುದರಿಂದ ಅಜೀರ್ಣತೆ ಕಾರಣವಾಗುತ್ತದೆ.
8. ವ್ಯಾಯಾಮದ ಕೊರತೆ: ಕೇವಲ ಆಹಾರವಷ್ಟೇ ಅಲ್ಲ, ವ್ಯಾಯಾಮದ ಕೊರತೆಯೂ ಕೂಡ ಅಜೀರ್ಣತೆಗೆ ಕಾರಣ. ಆದ್ದರಿಂದ ಉತ್ತಮ ಆಹಾರ ಕ್ರಮದೊಂದಿಗೆ ವ್ಯಾಯಾಮವೂ ಇರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
