Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆಫೀಸಿನಲ್ಲಿ ತೂಕಡಿಕೆ ಬಂದರೆ ಇದನ್ನು ತಿನ್ನಿ

ಆದ್ದರಿಂದ ಮಧ್ಯಾಹ್ನ ನಿದ್ದೆಯನ್ನು ನಿವಾರಿಸುವ ಕೆಲವು ಆಹಾರ ಸಲಹೆಗಳು ಇಲ್ಲಿವೆ. ಅದೇನೆಂದು ಮುಂದೆ ತಿಳಿದುಕೊಳ್ಳಿ.
* ರೋಟಿ ಇರಲಿ: ಮಧ್ಯಾಹ್ನದ ವೇಳೆ ಅನ್ನ ತಿಂದರೆ ತೂಕಡಿಕೆ ಹೆಚ್ಚುತ್ತೆ. ಅನ್ನ ಹೊಟ್ಟೆಗೆ ತುಂಬಾ ಭಾರದ ಆಹಾರವಾಗಿರುವುದರಿಂದ ತೂಕಡಿಕೆ ಬರುತ್ತೆ. ಇದು ಬೇಗನೆ ಜೀರ್ಣವಾದರೂ ಭಾರವಾಗಿರುವುದರಿಂದ ಕೆಲಸದಲ್ಲಿ ನಿದ್ದೆ ತಪ್ಪಿದ್ದಲ್ಲ. ಆದ್ದರಿಂದ ಬ್ರೆಡ್ ಅಥವಾ ರೋಟಿಯನ್ನು ಮಧ್ಯಾಹ್ನದ ಹೊತ್ತು ತಿಂದರೆ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ದಿನನಿತ್ಯ ರೋಟಿಯೂ ಆರೋಗ್ಯಕರವಲ್ಲ.
* ಆಲೂಗಡ್ಡೆ ಬೇಡ: ಮಧ್ಯಾಹ್ನದ ಹೊತ್ತು ಸೇವಿಸುವ ಆಹಾರದಲ್ಲಿ ಆಲೂಗಡ್ಡೆ ಇರದಿರಲಿ. ಆಲೂಗಡ್ಡೆ ಫ್ರೈ ಮುಟ್ಟಲೇಬಾರದು. ಆಲೂಗಡ್ಡೆಯಲ್ಲಿ ಗ್ಲೈಸಮಿನ್ ಅಂಶ ಹೆಚ್ಚಿರುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿಸಿ ಸೋಮಾರಿತನ ನೀಡುತ್ತದೆ. ಬೇಯಿಸಿದ ಆಲೂಗಡ್ಡೆಯಿಂದ ಅಷ್ಟು ತೊಂದರೆಯಿಲ್ಲ.
* ಜೇನು ಬೆರೆಸಿದ ಆಹಾರ ತ್ಯಜಿಸಿ: ಹಾಲು ಮತ್ತು ಜೇನಿನ ಮಿಶ್ರಣ ಒಳ್ಳೆ ನಿದ್ದೆ ನೀಡುತ್ತದೆ. ಆದ್ದರಿಂದ ಜೇನು ಬೆರೆಸಿದ ಯಾವುದೇ ಆಹಾರ ಅಥವಾ ಯಾವುದೇ ಸಿಹಿ ತಿಂಡಿ ನಿದ್ದೆ ತರಬಹುದು. ಆದ್ದರಿಂದ ಮಧ್ಯಾಹ್ನದ ವೇಳೆ ಕಡಿಮೆ ಸಿಹಿ ತಿನ್ನದಿರುವುದು ಒಳ್ಳೆಯದು.
* ಹಿಟ್ಟಿನ ಪದಾರ್ಥಗಳನ್ನು ಮುಟ್ಟಬೇಡಿ: ಪಾಸ್ತಾ, ಪಫ್ ಮುಂತಾದವು ಹೊಟ್ಟೆ ತುಂಬಿಸುತ್ತದೆ. ಆದರೆ ಈ ಆಹಾರಗಳು ನಿದ್ದೆಯನ್ನೂ ನೀಡುತ್ತದೆ. ಹೊಟ್ಟೆ ತುಂಬಿಸಿದರೂ ನಿದ್ದೆ ಬರಿಸುವುದರಿಂದ ಈ ಆಹಾರದ ಸೇವನೆ ಮಧ್ಯಾಹ್ನದ ವೇಳೆ ಬೇಡ.
* ಜಂಕ್ ಫುಡ್: ಜಂಕ್ ಫುಡ್ ನಲ್ಲಿರುವ ಟ್ರಾನ್ಸ್ ಫ್ಯಾಟ್ ಗಳು ಆರೋಗ್ಯಕರವಲ್ಲ. ಇದು ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವಂತೆ ಮಾಡಿ ಹೊಟ್ಟೆ ಉಬ್ಬರಿಸಿ ನಿದ್ದೆ ಬರುವಂತೆ ಮಾಡುತ್ತದೆ. ಆದ್ದರಿಂದ ಮಧ್ಯಾಹ್ನಕ್ಕೆ ಜಂಕ್ ಫುಡ್ ಆಯ್ಕೆ ನಿಮ್ಮದಲ್ಲದಿರಲಿ.
* ಬ್ರೇಕ್ ಫಾಸ್ಟ್ ಹೆಚ್ಚಿರಲಿ: ಮಧ್ಯಾಹ್ನ ಹೆಚ್ಚು ತಿನ್ನುವುದನ್ನು ತಡೆಯಲು ಬೆಳಗ್ಗೆ ಚೆನ್ನಾಗಿ ಹೊಟ್ಟೆ ತುಂಬಾ ತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ಊಟ ಹೆಚ್ಚು ತಿನ್ನುವುದು ತಪ್ಪುತ್ತದೆ ಮತ್ತು ಸೋಮಾರಿತನ ಮೈಗೂಡುವುದನ್ನು ನಿವಾರಿಸಿದಂತಾಗುತ್ತದೆ.
* ಊಟದ ಪ್ರಮಾಣದ ಬಗ್ಗೆ ಗಮನವಿಡಿ: ಮಧ್ಯಾಹ್ನದ ವೇಳೆ ಆದಷ್ಟು ಕಡಿಮೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕುತ್ತಿಗೆ ವರೆಗೂ ಬಂದಂತೆ ತಿಂದರೆ ಮಧ್ಯಾಹ್ನದ ಹೊತ್ತು ನಿದ್ದೆ ಗ್ಯಾರಂಟಿ. ಬೆಳಗ್ಗೆ ಹೊತ್ತು ಹೆಚ್ಚು ತಿಂದಷ್ಟೂ ಒಳ್ಳೆಯದು.
ಈ ಸಲಹೆಗಳನ್ನು ಪಾಲಿಸಿದರೆ ಆಫೀಸ್ ಸಮಯದಲ್ಲಿ ತೂಕಡಿಸಿ ಕೆಲಸ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
