Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆರಳುಗಳ ನೋವನ್ನು ಸುಲಭವಾಗಿ ನಿವಾರಿಸಿ

ಚಳಿಗಾಲದಲ್ಲಂತೂ ಈ ಕೈಗಂಟಿನ ನೋವು ದ್ವಿಗುಣಗೊಳ್ಳುತ್ತದೆ. ಇದರಿಂದ ಬೆರಳುಗಳನ್ನು ಉಪಯೋಗಿಸುವುದೇ ಕಷ್ಟವೆನಿಸುತ್ತದೆ. ಲೊಟಿಕೆ ತೆಗೆಯುವುದು ತಾತ್ಕಾಲಿಕವಾಗಿ ನೋವನ್ನು ನಿವಾರಿಸಿದರೂ ಆನಂತರ ನೋವು ಹೆಚ್ಚುತ್ತದೆ. ಆದ್ದರಿಂದ ಸಮಯ ಸಿಕ್ಕಾಗ ಕೆಲವು ಸುಲಭ ಹಸ್ತದ ವ್ಯಾಯಾಮ ಮಾಡಿದರೆ ಬೆರಳಿನ ನೋವನ್ನು ಗುಣಪಡಿಸಿಕೊಳ್ಳಬಹುದು. ಅದು ಹೇಗೆಂದು ಮುಂದೆ ನೋಡಿ.
ಬೆರಳಿನ ನೋವನ್ನು ಹೋಗಲಾಡಿಸುವ ವ್ಯಾಯಾಮ:
1. ಗಾಯವಾಗಿ ಬೆರಳುಗಳಲ್ಲಿ ನೋವು ಬಂದಿದ್ದರೆ ಆ ಬೆರಳುಗಳ ಮೇಲೆ ಒತ್ತಡ ಹೇರಬಾರದು. ಕೆಲವು ವಾರ ಭಾರದ ಪದಾರ್ಥಗಳನ್ನು ಎತ್ತಲೇಬಾರದು. ಬೆರಳುಗಳಿಗೆ ಪೂರ್ಣ ವಿಶ್ರಾಂತಿ ನೀಡಬೇಕು.
2. ಆಗಾಗ್ಗೆ ಬೆರಳುಗಳನ್ನು ಒಂದಕ್ಕೊಂದು ಗಂಟುಹಾಕಿಕೊಳ್ಳುತ್ತಿರಬೇಕು. ಇದರಿಂದ ಬೆರಳುಗಳು ಮರಗಟ್ಟಿದಂತಾಗುವುದು ತಪ್ಪುತ್ತದೆ. ಆಗಾಗ್ಗೆ ಬೆರಳುಗಳನ್ನು ಒಂದಕ್ಕೊಂದು ಬಾಗಿಸಿದರೂ ಕೂಡ ಮರಗಟ್ಟುವಿಕೆ ತಡೆದು ರಕ್ತ ಸಂಚಲನವನ್ನು ಹೆಚ್ಚಿಸಬಹುದು.
3. ನೋವಿದ್ದ ಸಮಯದಲ್ಲಿ ಲೊಟಿಕೆ ತೆಗೆಯಬಾರದು. ಇದು ತಾತ್ಕಾಲಿಕವಾಗಿ ವಿಶ್ರಾಂತಿ ಎನಿಸಿದರೂ ನಂತರ ನೋವನ್ನು ಹೆಚ್ಚಿಸುತ್ತದೆ.
4. ಕಂಪ್ಯೂಟರ್ ಮುಂದೆ ಹೆಚ್ಚು ಟೈಪ್ ಮಾಡಿ ಬೆರಳುಗಳು ನೋವು ಬಂದಿದ್ದರೆ ಅಂತಹವರು 15 ನಿಮಿಷಕ್ಕೊಮ್ಮೆ ಎರಡೂ ಕೈಗಳ ಬೆರಳುಗಳನ್ನು ಬಾಗಿಸುತ್ತಿರಬೇಕು. ಹೀಗೆ ಸ್ವಲ್ಪವೇ ಒತ್ತಡ ಹಾಕಿ ಮಾಡುವುದರಿಂದ ಬೆರಳುಗಳು ಆರಾಮವೆನಿಸುತ್ತದೆ.
5. ಎಲ್ಲಾ ಬೆರಳುಗಳನ್ನು ಮಡಚಿ ಇನ್ನೊಂದು ಕೈ ಸಹಾಯದಿಂದ ಮೊಣಕಟ್ಟನ್ನು ಹಿಡಿದುಕೊಂಡು ಒಮ್ಮೆಲೆ ಕೈಯ್ಯನ್ನು ತಿರುಗಿಸಬೇಕು. ಇದು ಬೆರಳುಗಳ ನೋವನ್ನು ಪರಿಣಾಮಕಾರಿಯಾಗಿ ಹೋಗಿಸುವ ವ್ಯಾಯಾಮ.
6. ಎರಡೂ ಕೈಗಳ ಬೆರಳುಗಳನ್ನು ಮುಷ್ಟಿಯಂತೆ ಹಿಡಿದು ಹೆಬ್ಬೆರಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಹೀಗೆ ಮಾಡುವುದರಿಂದ ಬೆರಳು ನೋವನ್ನು ಹೋಗಿಸಬಹುದು.
7. ಬೆಚ್ಚಗಿನ ನೀರಿನಲ್ಲಿ ಬೆರಳುಗಳನ್ನು ಅದ್ದಿ ಕೆಲವು ನಿಮಿಷ ಬಿಡಬೇಕು. ಇದರಿಂದ ನೋವು ಕಡಿಮೆಯಾಗುವುದಲ್ಲದೆ ರಕ್ತಸಂಚಲನವೂ ಹೆಚ್ಚುತ್ತದೆ.
8. ಕೈಗಳಿಗೆ ಹೆಚ್ಚು ಭಾರ ಕೊಟ್ಟರೂ ಅಥವಾ ಮಲಗುವ ಭಂಗಿ ಸರಿಯಿಲ್ಲದಿದ್ದರೂ ಈ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ವ್ಯಾಯಾಮಗಳನ್ನು ಅನುಸರಿಸುವುದರಿಂದ ಬೆರಳುಗಳು ರಿಲ್ಯಾಕ್ಸ್ ಆಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
