Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನೀರಿನಂಶ ಹೆಚ್ಚಿರುವ ಆಹಾರ ಯಾವುದು?

ನಿರ್ಜಲೀಕರಣ ನಿವಾರಿಸುವ ಆಹಾರಗಳು:
* ನೀರಿನಂಶದ ತರಕಾರಿ: ಹೂಕೋಸು, ಕ್ಯಾರೆಟ್, ಎಲೆಕೋಸು, ಈರುಳ್ಳಿ, ಟೊಮೆಟೊ ಮತ್ತು ಸೌತೆ ಕಾಯಿಯಲ್ಲಿ ನೀರಿನಂಶ ಅಧಿಕ ಪ್ರಮಾಣದಲ್ಲಿದೆ. ನಿಮ್ಮ ದೇಹದಲ್ಲಿ ನೀರಿನಂಶದ ಕೊರತೆ ಉಂಟಾದರೆ ಈ ರೀತಿಯ ತರಕಾರಿಗಳನ್ನು ನಿಮ್ಮ ಆಹಾರದೊಂದಿಗೆ ಹೆಚ್ಚಾಗಿ ಬಳಸಿರಿ.
* ಜ್ಯೂಸ್ ಹಣ್ಣುಗಳು: ಕಲ್ಲಂಗಡಿ, ಖರ್ಬೂಜದ ಹಣ್ಣು, ಪೈನಾಪಲ್, ಸೇಬು, ಸ್ಟ್ರಾಬೆರಿ, ನಿಂಬೆ, ದ್ರಾಕ್ಷಿ, ಕಿತ್ತಳೆ, ಚೆರಿ ಮುಂತಾದ ಹಣ್ಣುಗಳಲ್ಲಿ ದೇಹದಲ್ಲಿನ ನಿರ್ಜಲೀಕರಣ ಹೋಗಿಸುವ ಅಂಶವಿದೆ. ಅದರಲ್ಲೂ ವ್ಯಾಯಾಮ ಮಾಡುವವರಿಗೆ ಈ ಹಣ್ಣುಗಳು ಅವಶ್ಯಕ.
* ಸೂಪ್ ಹಾಗೂ ಜ್ಯೂಸ್: ನೀರನ್ನು ಹೆಚ್ಚು ಬಳಸಿ ತಯಾರಿಸಿದ ತರಕಾರಿ, ಸೊಪ್ಪಿನ ಸೂಪ್, ಹಣ್ಣಿನ ಜ್ಯೂಸ್ ದೇಹದಲ್ಲಿನ ನೀರಿನ ಮಟ್ಟವನ್ನು ಅಧಿಕ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಸಕ್ಕರೆರಹಿತ ಎರಡು ಗ್ಲಾಸ್ ಜ್ಯೂಸನ್ನು ಪ್ರತಿನಿತ್ಯ ಸೇವಿಸಿದರೆ ಒಳ್ಳೆಯದು.
* ನೀರು: ದಿನಕ್ಕೆ 8-10 ಗ್ಲಾಸ್ ನೀರಿನ ಸೇವನೆ ಅತ್ಯವಶ್ಯಕ. ನೀರನ್ನು ಹೆಚ್ಚು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ತೊಲಗಿ ತ್ವಚೆಯನ್ನು ಶುದ್ಧಗೊಳಿಸಿ ಕೂದಲ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಒಂದು ಗಂಟೆ ಅಥವಾ 30 ನಿಮಿಷಗಳಿಗೊಮ್ಮೆ ನೀರನ್ನು ಕುಡಿಯುತ್ತಿರಬೇಕು.
* ಮಜ್ಜಿಗೆ ಅಥವಾ ಹಾಲಿನ ಉತ್ಪನ್ನ: ಹಾಲು ಮತ್ತು ಮೊಸರಿನಲ್ಲಿ ಅಧಿಕ ನೀರಿನಂಶವಿದೆ. ಅಷ್ಟೇ ಅಲ್ಲ, ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಖನಿಜಾಂಶ ಹೆಚ್ಚಿರುವುದರಿಂದ ದೇಹಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು. ಇಲ್ಲವೆಂದರೆ ಮಿಲ್ಕ್ ಶೇಕ್, ಮಜ್ಜಿಗೆ ಯನ್ನೂ ಆಗಾಗ್ಗೆ ಕುಡಿಯುತ್ತಿರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
