Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನ್ಯೂಟ್ರಿಷಿಯಸ್ ಆಹಾರಕ್ಕೆ ಎಷ್ಟು ಬೇಯಿಸಬೇಕು?

ಕೆಲವೊಮ್ಮೆ ಸೋಮಾರಿತನದಿಂದಾಗಿ ಆಹಾರವನ್ನು ಸರಿಯಾಗಿ ಸಂಗ್ರಹಿಸಿಡುವುದಿಲ್ಲ. ಆದರೆ ಆಹಾರವನ್ನು ಬೇಯಿಸುವ ಮತ್ತು ಸಂಗ್ರಹಿಸಿಡುವ ವಿಧಾನದ ಬಗ್ಗೆ ತಿಳಿದುಕೊಂಡರೆ ಆಹಾರ ಬೇಗನೆ ಕೆಡುವುದಿಲ್ಲ, ಆರೋಗ್ಯಕ್ಕೂ ಒಳ್ಳೆಯದು.
1. ಆಹಾರವನ್ನು ಬೇಯಿಸುವುದರಿಂದ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ, ಆದರೆ ಆಹಾರವನ್ನು ಅತಿ ಹೆಚ್ಚು ಬೇಯಿಸಿದರೆ ಅಥವಾ ಸರಿಯಾಗಿ ಬೇಯಿಸದಿದ್ದರೆ ಪೋಷಕಾಂಶ ನಾಶವಾಗುತ್ತದೆ. ಆದ್ದರಿಂದ ಆಹಾರವನ್ನು ಬೇಯಿಸುವಾಗ ಕಡಿಮೆ ಉರಿಯಲ್ಲಿ ಬೇಯಿಸಿದರೆ ಒಳ್ಳೆಯದು.
2. ಮಾಂಸಾಹಾರ ತಯಾರಿಸುವಾಗ, ಅದರಲ್ಲೂ ಮೀನು, ಸೀಗಡಿ ಇವುಗಳನ್ನು ಕಡಿಮೆ ಉರಿಯಲ್ಲಿ ಬೇಯಿಸುವುದು ಒಳ್ಳೆಯದು. ಅಧಿಕ ಬೇಯಿಸಿದರೆ ಅದರಲ್ಲಿನ ಖನಿಜಾಂಶಗಳು ಕಡಿಮೆಯಾಗುತ್ತದೆ.
3. ಮಾಂಸಾಹಾರ ತಯಾರಿಸುವಾಗ ಅತ್ಯಾವಶ್ಯಕವಾದ ಉಷ್ಣತೆ ಬೇಕಾಗುತ್ತದೆ. ಅದರಲ್ಲೂ ಗ್ರಿಲ್ಸ್, ರೋಸ್ಟ್ ಇವುಗಳನ್ನು ಸರಿಯಾದ ರೀತಿಯಲ್ಲಿ ಬೇಯಿಸದಿದ್ದರೆ ಅದರಲ್ಲಿರುವ ನ್ಯೂಟ್ರಿಷನ್ ಹಾಳಾಗುತ್ತದೆ.
4. ಮಾಂಸವನ್ನು ರೋಸ್ಟ್ ಮಾಡುವಾಗ ಉಷ್ಣತೆಯು 325 ಡಿಗ್ರಿ ಫ್ಯಾರಾನ್ಹೀಟ್ ಇರಬೇಕು. ಅದಕ್ಕಿಂತ ಕಡಿಮೆ ಉಷ್ಣತೆಯಲ್ಲಿ ಬೇಯಿಸುವುದು ಆರೋಗ್ಯಕ್ಕೆ ಹಾನಿಕರ.
5. ರೆಫ್ರಿಜಿರೇಟರ್ ನಲ್ಲಿ ಆಹಾರ ಇಡುವಾಗ ಬೇಯಿಸದ ಆಹಾರವನ್ನು ಫ್ರೀಜರ್ ಮತ್ತು ಬೇಯಿಸಿದ ಆಹಾರವನ್ನು ಫ್ರಿಡ್ಜ್ ನಲ್ಲಿ ಇಡುವುದು ಒಳ್ಳೆಯದು.
6. ಆಹಾರವನ್ನು ಬೇಯಿಸುವಾಗ ಪಾತ್ರೆಯನ್ನು ಮುಚ್ಚಿ ಬೇಯಿಸಬೇಕು. ಆಗ ಉಷ್ಣತೆ ಪಾತ್ರೆಯ ಒಳಗೆ ಸರಿಯಾದ ರೀತಿಯಲ್ಲಿ ಹರಡುವುದು.
7. ಬೇಯಿಸಿದ ಆಹಾರವನ್ನು ಪ್ರತಿ ದಿನ ತಿನ್ನುವ ಮೊದಲು ಬಿಸಿ ಮಾಡಿ ತಿನ್ನಬೇಕು. ಏಕೆಂದರೆ ಹಾಲಿನಂತಹ ಪದಾರ್ಥಗಳಲ್ಲಿ ಸೂಕ್ಷ್ಮಾಣು ಜೀವಿಗಳು ಬೇಗನೆ ಉಂಟಾಗುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
