Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹೆಚ್ಚು ನಿದ್ದೆ ಮಾಡಿದರೆ ಸಂತೋಷ ಹಾಳಾಗಬಹುದಂತೆ...

ಹೌದು. ನೀವು ಸಂತೋಷ, ಆರೋಗ್ಯವನ್ನು ಬಯಸುವುದಾದರೆ ಮುಂಜಾನೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕ ಎಂದಿದೆ ನೂತನ ಅಧ್ಯಯನ. ಮುಂಜಾನೆಯ ಸಮಯ ತಡವಾಗಿ ಏಳುವವರಿಗೆ ಹೋಲಿಸಿದರೆ ಬೇಗನೆ ಏಳುವವರು ಹೆಚ್ಚು ಆರೋಗ್ಯವಂತರಾಗಿ, ಒತ್ತಡರಹಿತರಾಗಿ ಇರುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ರೊಹ್ಯಾಂಪ್ಟನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ, ಅಲಾರ್ಮ್ ಹೊಡೆದಾಕ್ಷಣವೇ ಏಳುವವರು ಬೇಗ ಬೇಗನೆ ಮನೆಯಲ್ಲೂ ಎಲ್ಲಾ ಕೆಲಸ ಮುಗಿಸುವುದರೊಂದಿಗೆ ಹೊರಗಿನ ಕೆಲಸದಲ್ಲೂ ಚೈತನ್ಯದಿಂದ ಕೆಲಸ ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.
ಆದರೆ ರಾತ್ರಿಯಿಡೀ ನಿದ್ದೆಗೆಟ್ಟಿದ್ದು, ಬೆಳಗ್ಗೆ ಬೇಗ ಎದ್ದರೆ ಈ ಲಾಭವನ್ನು ನೀವು ಬಯಸುವಂತಿಲ್ಲ. ರಾತ್ರಿ ನಿದ್ದೆಗೆಡುವವರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ. ಆದ್ದರಿಂದ ರಾತ್ರಿ ಸ್ವಲ್ಪ ಬೇಗನೆ ನಿದ್ದೆಗೆ ಜಾರಿ ಬೆಳಗ್ಗೆ ಬೇಗನೆ ಏಳುವುದರಿಂದ ಎಲ್ಲಾ ದೃಷ್ಟಿಯಿಂದಲೂ ಪ್ರಯೋಜನ ಪಡೆಯಬಹುದು.
ಅಧ್ಯಯನದಲ್ಲಿ 1,068 ಜನರನ್ನು ಒಳಪಡಿಸಿ ಅವರ ಆರೋಗ್ಯ ಮತ್ತು ನಿದ್ದೆಯ ಅವಧಿಯ ಕುರಿತು ಪರೀಕ್ಷಿಸಿದಾಗ, ಬೆಳಗ್ಗೆ ಬೇಗನೆ ಅಂದರೆ 6 ಗಂಟೆಯ ಹೊತ್ತಿಗೆ ಏಳುವವರು ಮತ್ತು ತಡವಾಗಿ, ಅಂದರೆ 8 ರಿಂದ 9 ಗಂಟೆ ನಂತರ ಏಳುವವರ ನಡುವೆ ಅನೇಕ ವಿಭಿನ್ನತೆಗಳು ಕಂಡುಬಂದಿದೆ.
ಬೇಗನೆ ಏಳುವ ಮಂದಿ ಆರೋಗ್ಯಕರವಾಗಿ, ಸಂತೋಷವಾಗಿ ಮತ್ತು ಕಡಿಮೆ ತೂಕ ಹೊಂದಿರುವುದಾಗಿ ತಿಳಿದುಬಂದಿದೆ. ಆದರೆ ತಡವಾಗಿ ಏಳುವವರಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಅಂಶವೂ ಸೇರಿಕೊಳ್ಳುವುದಷ್ಟೇ ಅಲ್ಲ, ಒತ್ತಡವೂ ಹೆಚ್ಚುತ್ತದೆ ಎಂದು ತಿಳಿದುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications