Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬಾಯಿ ದುರ್ನಾತ ಹೊಡೆಯುತ್ತಿದ್ದರೆ ಈ ಆಹಾರ ತಿನ್ನಿ

ಬಾಯಿಯ ದುರ್ಗಂಧ ಹೋಗಲಾಡಿಸುವ ಆಹಾರಗಳು:
* ವಿಟಮಿನ್ ಸಿ: ಸಿಟ್ರಸ್ ಹಣ್ಣುಗಳ ಸೇವನೆ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ಈ ಹಣ್ಣುಗಳು ಬಾಯಿ ಮತ್ತು ಹಲ್ಲಿನಲ್ಲಿನ ಬ್ಯಾಕ್ಟೀರಿಯಾ ಕಡಿಮೆಮಾಡುತ್ತದೆ. ಇದರಿಂದ ವಸಡುಗಳಲ್ಲಿನ ಸಮಸ್ಯೆಯನ್ನೂ ತಡೆಯಬಹುದು. ಸ್ಟ್ರಾಬೆರಿ, ದ್ರಾಕ್ಷಿ, ನಿಂಬೆ, ಕಿತ್ತಳೆ ಈ ಹಣ್ಣುಗಳು ಮತ್ತು ಸೇಬು, ಕ್ಯಾರೆಟ್ ಇವುಗಳನ್ನೂ ಅಗಿದು ತಿಂದರೆ ಹಲ್ಲುಗಳು ಶುದ್ಧಗೊಳ್ಳುವುದಲ್ಲದೆ ದುರ್ವಾಸನೆಯೂ ಹೋಗುತ್ತದೆ.
* ನಿಂಬೆಹಣ್ಣು: ಊಟವಾದ ನಂತರ ನಿಂಬೆಹುಳಿ ಅಥವಾ ನಿಂಬೆಸಿಪ್ಪೆಯನ್ನು ಒಮ್ಮೆ ಉಜ್ಜಿಕೊಂಡರೆ ಹಲ್ಲುಗಳೂ ಚೆನ್ನಾಗಿರುತ್ತೆ, ದುರ್ವಾಸನೆಯೂ ಇರುವುದಿಲ್ಲ. ನಿಂಬೆ ಬಾಯಿಯಲ್ಲಿನ ಬ್ಯಾಕ್ಟೀರಿಯಾ ತೊಲಗಿಸುವುದಲ್ಲದೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿಯ ವಾಸನೆಯನ್ನೂ ಬಾಯಿಯಿಂದ ಹೋಗಿಸುತ್ತದೆ.
* ಏಲಕ್ಕಿ, ಸೋಂಪು: ಏಲಕ್ಕಿ, ಲವಂಗ ಮತ್ತು ಸೋಂಪು ಕಾಳು ನೈಸರ್ಗಿಕವಾಗಿ ಬಾಯಿಯಿಂದ ದುರ್ಗಂಧವನ್ನು ಹೋಗಿಸುತ್ತದೆ. ಇದು ಬಾಯಿಯನ್ನು ರಿಫ್ರೆಷ್ ಮಾಡುತ್ತದೆ.
* ಸೀಬೆ ಎಲೆ: ಸೀಬೆ ಗಿಡದ ಎಲೆಯನ್ನು ಅಗಿದರೆ ಹಲ್ಲುಗಳು ಬೆಳ್ಳಗಾಗುತ್ತವೆ ಎನ್ನಲಾಗಿದೆ. ಇದು ಬಾಯಿ ದುರ್ಗಂಧವನ್ನೂ ತಡೆಯುತ್ತದೆ. ಕೊತ್ತಂಬರಿ ಮತ್ತು ಪುದೀನಾ ಎಲೆಯನ್ನೂ ಅಗಿಯಬಹುದು.
* ಮೊಸರು: ಸಂಶೋಧಕರ ಪ್ರಕಾರ, ಮೊಸರಿನ ಸೇವನೆಯಿಂದ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾಗುವ ಸಲ್ಫೈಟ್ ಕಡಿಮೆ ಮಾಡಬಹುದು. ಇದು ಬ್ಯಾಕ್ಟೀರಿಯಾವನ್ನು ತೊಲಗಿಸುವುದರಿಂದ ಕಡಿಮೆ ಕೊಬ್ಬಿನಂಶ, ಸಕ್ಕರೆರಹಿತ ಮೊಸರಿಸ ಸೇವನೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಬೆರೆಸಿ ತಿಂದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಇನ್ನಷ್ಟು ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
