Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಂಪ್ಯೂಟರ್ ಮಾಡಿತು ಕೆಲಸ ಸಡಿಲ ಆರೋಗ್ಯ ಜಟಿಲ

ಕಂಪ್ಯೂಟರ್ ನಲ್ಲಿ ಕೆಲಸ ಮಾಡುವರು ಹೆಚ್ಚಾಗಿ ಎದುರಿಸುವ ಸಮಸ್ಯೆ ಅಂದರೆ ದೃಷ್ಠಿದೋಷ ಮತ್ತು ಬೆನ್ನು ನೋವು.ಇವತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದರಿಂದ ಸೊಂಟನೋವು ಉಂಟಾಗಲು ಕಾರಣ ಮತ್ತು ಪರಿಹಾರದ ಕುರಿತು ತಿಳಿಯೋಣ:
1. ಕೂರುವ ಭಂಗಿ: ಕಂಪ್ಯಟರ್ ನಲ್ಲಿ ಕೆಲಸ ಮಾಡುವಾಗ ಕಣ್ನು ಕೆಳಕ್ಕೆ ಬಾಗಿ ಕಂಪ್ಯೂಟರ್ ಪರೆದೆ ಯನ್ನು ನೋಡುತ್ತಿರುತ್ತದೆ. ಕೂತ ಭಂಗಿಯಲ್ಲಿಯೆ ತುಂಬಾ ಹೊತ್ತು ಕೂರುವುದರಿಂದ ಬೆನ್ನು ನೋವು ಬರುವುದು.
2.ಒತ್ತಡ: ಕಂಪ್ಯೂಟರ್ ಎದುರುಗಡೆ ಕೂತಲ್ಲಿಯೆ ಕೂರುವುದರಿಂದ ಬೆನ್ನಿನ ಮೇಲೆ ಅಧಿಕ ಒತ್ತಡ ಬೀಳುವುದರಿಂದ ಬೆನ್ನಿನಲ್ಲಿ ನೋವು ಬರುವುದು.
3. ದೇಹಕ್ಕೆ ಕೆಲಸವಿಲ್ಲದಿರುವುದು: ಕಂಪ್ಯೂಟರ್ ಮುಂದೆ ಕುಳಿತಾಗ ದೇಹಕ್ಕೆ ಅಷ್ಟೇನು ಕೆಲಸವಿಲ್ಲ, ಕೆಲಸವೆಲ್ಲ ಮೆದುಳಿನದು ಮತ್ತು ಕೈಯದು, ಈ ರೀತಿ ದೇಹ ಒಂದೆ ಭಂಗಿಯಲ್ಲಿ ಇರುವುದರಿಂದ ಓದುವಾಗ ಅಥವಾ ಕೆಲಸ ಮಾಡುವುದರಿಂದ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹಾಗಂತ ಕೆಲಸ ಕಡಿಮೆಮಾಡಲು ಸಾಧ್ಯವಿಲ್ಲ, ಅದು ಅನಿವಾರ್ಯ ಅದರ ಜೊತೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಈ ರೀತಿಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
1. ಕುಳಿತುಕೊಳ್ಳುವ ಭಂಗಿ:ಕುಳಿತುಕೊಳ್ಳುವಾಗ ನೇರವಾಗಿ ಕಾಲು ನೆಲಕ್ಕೆ ಮುಟ್ಟುವಂತೆ ಕುಳಿತುಕೊಳ್ಳಬೇಕು. ಈ ರೀತಿ ಕುಳಿತುಕೊಳ್ಳುವುದರಿಂದ ದೇಹದ ಎಲ್ಲಾ ಬಾಗಗಳಲ್ಲಿ ಸಮನಾಗಿ ಒತ್ತಡ ಬೀಳುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುವುದಿಲ್ಲ.
2. ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿ:ಕಂಪ್ಯೂಟರ್ ನ ಎದುರುಗಡೆ ನಿರಂತರವಾಗಿ ಕುಲಿತುಕೊಳ್ಳದೆ ಒಂದು ಗಂಟೆಯ ಬಳಿಕ 5 ನಿಮಿಷ ಬ್ರೇಕ್ ತೆಗೆದು ಕೊಳ್ಳುವುದು ಅಂದರೆ ಎದ್ದು ಸ್ವಲ್ಪ ನಡೆಯುವುದು ಒಳ್ಳೆಯದು.ಇದರಿಂದ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿ ಆಗುವುದು.
3. ದಿನ ನಿತ್ಯದ ವ್ಯಾಯಾಮ: ಬೆನ್ನಿಗೆ ಶಕ್ತಿ ನೀಡುವಂತಹ ವ್ಯಾಯಾಮವನ್ನು ಪ್ರತಿ ನಿತ್ಯ ಮಾಡಬೇಕು. ಈಜು ಇದಕ್ಕೆ ಒಂದು ಅತ್ಯುತ್ತಮವಾದ ವ್ಯಾಯಾಮವಾಗಿದೆ.
4. ಮಿತವಾದ ತೂಕ: ಕಂಪ್ಯೂಟರ್ ಮುಂದೆ ಕರುವುದರಿಂದ ಹೆಚ್ಚಿನವರು ತುಂಬಾ ದಪ್ಪಗಾಗುತ್ತಾರೆ, ಅದರಲ್ಲೂ ಬೆನ್ನು ಮತ್ತು ಹೊಟ್ಟೆಯಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಿ ದೇಹದ ಆರೋಗ್ಯ ಹಾಳಾಗುತ್ತದೆ, ಆದ್ದರಿಂದ ವ್ಯಾಯಾಮ ಮಾಡಿ ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳಬೇಕು.
5. ವಿಶ್ರಾಂತಿ: ಬಿಡುವಿಲ್ಲದೆ ಕೆಲಸ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ, ಆಗಾಗ ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನು ನೀಡುತ್ತಿರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
