Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ನೀರು ಕುಡಿಯಲೇಬೇಕಾದ ಆರು ಕಾರಣ ಯಾವುದು?

ಆದರೆ ನೀರಿಗೂ, ಆರೋಗ್ಯಕ್ಕೂ ನಡುವಿನ ನಂಟು ಹೇಗೆ ಸಾಧ್ಯ ಎಂದು ಇಲ್ಲಿ ತಿಳಿದುಕೊಳ್ಳಬಹುದು.
* ಜ್ಞಾಪಕ ಶಕ್ತಿ ವೃದ್ಧಿ: ನೀರು ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಈ ಮೂಲಕ ನಿಮ್ಮ ಆಲೋಚನೆಗಳೂ ಸ್ಪಷ್ಟವಾಗುತ್ತದೆ. ಚೆನ್ನಾಗಿ ನೀರು ಕುಡಿಯದಿದ್ದರೆ ಮೆದುಳಿಗೆ ಅವಶ್ಯಕವಾದ ಆಮ್ಲಜನಕ ಸಾಗಿಸಲು ಕಷ್ಟವಾಗಿ ಏಕಾಗ್ರತೆಯೂ ಕುಂದುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
* ಬಾಯಿಯ ಸ್ವಾಸ್ಥ್ಯ: ನೀರು ಸೇವನೆಯಿಂದ ನಿಮ್ಮ ಗಂಟಲು ಮತ್ತು ತುಟಿಯಲ್ಲಿ ತೇವಾಂಶವಿರುತ್ತದೆ. ಇದರಿಂದ ಬಾಯಿ ಒಣಗುವುದನ್ನು ತಡೆಯುತ್ತದೆ. ಇಲ್ಲದಿದ್ದರೆ ಬಾಯಿ ಒಣಗುವುದರಿಂದ ದುರ್ವಾಸನೆಯೂ ಬಂದು ಬಾಯಿಯ ಆರೋಗ್ಯವೂ ಕೆಡುತ್ತದೆ. ಆದ್ದರಿಂದ ಆಗಾಗ್ಗೆ ನೀರು ಕುಡಿಯುತ್ತಿದ್ದರೆ ಉತ್ತಮ.
* ಹೃದಯದ ಆರೋಗ್ಯ: ನಿರ್ಜಲೀಕರಣ ರಕ್ತ ಕಣಗಳನ್ನೂ ಕಡಿಮೆಗೊಳಿಸುತ್ತೆ. ಈ ಕಾರಣ ರಕ್ತವನ್ನು ಸಾಗಿಸಲು ಹೃದಯಕ್ಕೆ ತುಂಬಾ ಶ್ರಮವಾಗುತ್ತದೆ. ಇದರಿಂದ ಮೆಟ್ಟಿಲೇರಲು, ವ್ಯಾಯಾಮ ಮಾಡಲು ಕಷ್ಟಪಡಬೇಕಾಗುತ್ತೆ. ನೀರಿನ ಕೊರತೆಯಿದ್ದರೆ ಜೀವಕಣಗಳಿಗೆ ಅವಶ್ಯಕ ಆಮ್ಲಜನಕ ಸಾಗಿಸಲೂ ಸಾಧ್ಯವಾಗುವುದಿಲ್ಲ.
* ನಿರ್ಜಲೀಕರಣದಿಂದ ಸುಸ್ತು: ಚರ್ಮದಲ್ಲಿರುವ ರಕ್ತ ಕಣಗಳು ಹಿಗ್ಗಿ ಉಷ್ಣ ಹೊರಬರುತ್ತದೆ, ಇದರಿಂದ ರಕ್ತ ಸಂಚಲನ ಸುಸೂತ್ರವಾಗಿ ನಡೆಯುತ್ತೆ. ಆದರೆ ಅವಶ್ಯಕ ನೀರು ದೊರೆಯದಿದ್ದರೆ ರಕ್ತಕಣ ಹಿಗ್ಗಲು ತುಂಬಾ ಶ್ರಮವಹಿಸಬೇಕಾಗುತ್ತದೆ, ಇದರಿಂದ ರಕ್ತಸಂಚಲನವೂ ಕುಂಠಿತವಾಗುತ್ತದೆ.
* ಚರ್ಮದ ರಕ್ಷಣೆ: ದೇಹದಲ್ಲಿ ಅವಶ್ಯಕವೆನಿಸುವಷ್ಟು ನೀರಿಲ್ಲದಿದ್ದರೆ ಚರ್ಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚರ್ಮದಲ್ಲಿ ಹೊಂದಾಣಿಕೆ, ಹಿಗ್ಗುವಿಕೆ ಕಡಿಮೆಯಾಗುತ್ತದೆ. ಸೋಪು, ಬಿಸಿ ನೀರು, ಬಿಸಿ ಗಾಳಿಗೆ ಒಡ್ಡಿ ಚರ್ಮ ಒಣಗುವುದೇ ಬೇರೆ. ಆದರೆ ಕಡಿಮೆ ನೀರು ಕುಡಿಯುವುದರಿಂದ ಚರ್ಮಕ್ಕೆ ಸಿಗಬೇಕಾದ ಕನಿಷ್ಠ ಪೋಷಕಾಂಶವೂ ದೊರೆಯದಂತಾಗುತ್ತದೆ.
* ಕಿಡ್ನಿಗೂ ನೀರು ಬೇಕು: ರಕ್ತವನ್ನು ಶುದ್ದೀಕರಣಗೊಳಿಸಿ, ತ್ಯಾಜ್ಯವನ್ನು ಹೊರಬಿಡಲು ಕಿಡ್ನಿಗೆ ಸಾಕಷ್ಟು ನೀರಿನ ಅವಶ್ಯಕತೆಯಿರುತ್ತದೆ. ನೀರು ಕುಡಿಯುವುದರಿಂ ಮೂತ್ರನಾಳದ ಸೋಂಕನ್ನೂ ತಡೆಗಟ್ಟಬಹುದು. ಕಿಡ್ನಿ ಕಲ್ಲಿನ ತೊಂದರೆಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ನೀರು ಕಡಿಮೆ ಕುಡಿದರೆ ಕಿಡ್ನಿ ಕಾರ್ಯ ನಿರ್ವಹಿಸಲು ಕಷ್ಟವಾಗಿ, ವಿಷಕಾರಿ ಅಂಶಗಳು ದೇಹದಲ್ಲೇ ಉಳಿದುಕೊಂಡು ಬಿಡುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
