Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಸ್ತನದ ಗಾತ್ರ ಹೆಚ್ಚಿಸುವ ಸುಲಭ ವಿಧಾನ ಯಾವುದು?

ಸ್ತನದ ಗಾತ್ರ ಹೆಚ್ಚಿಸುವ ಆಹಾರಗಳು ಯಾವುವು?
1. ಹಾರ್ಮೋನುಗಳಲ್ಲಿನ ಅಸಮತೋಲನವೇ ಸ್ತನದ ಗಾತ್ರ ಕಡಿಮೆಯಿರಲು ಕಾರಣ. ಮಹಿಳೆಯರಲ್ಲಿ ಅತಿಯಾದ ಟೆಸ್ಟೊಸ್ಟೆರೋನ್ ಉತ್ಪತ್ತಿ ಸ್ತನದ ಗಾತ್ರವನ್ನು ನಿಯಂತ್ರಿಸುವುದೇ ಕಡಿಮೆ ಗಾತ್ರಕ್ಕೆ ಕಾರಣವಾಗಿರುತ್ತೆ.
2. ಈ ಟೆಸ್ಟೊಸ್ಟೆರೋನ್ ಉತ್ಪತ್ತಿಯನ್ನು ನಿಯಂತ್ರಿಸಲು ಮಹಿಳೆಯರಲ್ಲಿನ ಲೈಂಗಿಕ ಹಾರ್ಮೋನಾದ ಈಸ್ಟ್ರೋಜೆನ್ ಅಂಶ ಹೆಚ್ಚಿರುವ ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವಿಸಬೇಕು. ಬಾರ್ಲೆ, ಕೆಂಪಕ್ಕಿ, ಓಟ್ಸ್ ಸೇವನೆ ಕೂಡ ಸ್ತನದ ಗಾತ್ರ ಹಿಗ್ಗುವಂತೆ ಮಾಡುತ್ತದೆ.
3. ಕೋಳಿ ಮಾಂಸದಲ್ಲಿ ಹೆಚ್ಚು ಈಸ್ಟ್ರೋಜೆನ್ ಇರುತ್ತದೆ. ಆದ್ದರಿಂದ ಚಿಕನ್ ನಿಮ್ಮ ಆಹಾರ ಕ್ರಮದಲ್ಲಿದ್ದರೆ ಉತ್ತಮ.
4. ಹಾಲು, ಹಾಲಿನ ಉತ್ಪನ್ನಗಳು, ಮೊಸರಿನಲ್ಲಿ ಕೂಡ ಈಸ್ಟ್ರೋಜೆನ್ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಸ್ತನದ ಗಾತ್ರ ಹೆಚ್ಚಬೇಕೆಂದರೆ ಈ ಉತ್ಪನ್ನಗಳ ಸೇವನೆ ತುಂಬಾ ಮುಖ್ಯ.
5. ಕಡಲೆ ಕಾಳು, ಕಿಡ್ನಿ ಬೀನ್, ಕೆಂಪು ಬೀನ್, ಅಲಸಂಡೆ ಕಾಳು, ಕಡಲೆ ಬೇಳೆ, ಅವರೆಕಾಳು, ಬೇಳೆ, ಬಟಾಣಿ, ಕೊತ್ತಂಬರಿ ಇವುಗಳ ಸೇವನೆಯಿಂದ ಈಸ್ಟ್ರೊಜೆನ್ ಅಂಶ ಹೆಚ್ಚಿಸಬಹುದು.
6. ಹಸಿರು ತರಕಾರಿಗಳು ಮತ್ತು ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಇರುವ ಆಹಾರಗಳ ಸೇವನೆಯಿಂದ ಸ್ತನದ ಜೀವಕೋಶಗಳನ್ನು ಹೆಚ್ಚಿಸಿಕೊಳ್ಳಬಹುದು. ಆಸ್ಪರಾಗಸ್, ಬೀಟ್ ರೂಟ್, ಎಲೆಕೋಸು, ಹೂಕೋಸು, ದವಸಧಾನ್ಯಗಳು, ಈರುಳ್ಳಿ, ಸೌತೆಕಾಯಿ, ಕುಂಬಳಕಾಯಿ ಇವುಗಳಿಂದಲೂ ನೈಸರ್ಗಿಕವಾಗಿ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಬಹುದು.
7. ಮೊಟ್ಟೆ, ಮೀನು, ಮಾಂಸದ ಸೇವನೆಯೂ ಸಹಕಾರಿ.
8. ಬ್ರೊಮೈನ್ ಮತ್ತು ಮ್ಯಾಂಗನೀಸ್ ಅಂಶ ಹಾರ್ಮೋನುಗಳನ್ನು ವೃದ್ಧಿಸುತ್ತದೆ. ಸೇಬು, ಬಾದಾಮಿ, ಜೋಳ, ಶುಂಠಿ, ಬೆಳ್ಳುಳ್ಳಿ, ಸೀಗಡಿ, ಕೆಂಪಕ್ಕಿ ಇವುಗಳಲ್ಲಿ ಬ್ರೊಮೈನ್ ಮತ್ತು ಮ್ಯಾಂಗನೀಸ್ ಹೆಚ್ಚಿರುವುದರಿಂದ ಇದು ಸ್ತನದ ಆಕಾರವನ್ನು ಹಿಗ್ಗಿಸಲು ಸಹಕರಿಸುತ್ತದೆ.
9. ಚೆರ್ರಿ, ಸ್ಟ್ರಾಬೆರಿ ಇವುಗಳಲ್ಲಿ ಈಸ್ಟ್ರೋಜೆನ್ ಹೆಚ್ಚಿರುತ್ತದೆ. ಆದ್ದರಿಂದ ಇವುಗಳನ್ನು ಸೇವಿಸಿದರೆ ಸ್ತನದ ಆಕಾರವನ್ನು ಬದಲಿಸಿಕೊಳ್ಳಬಹುದು.
10. ಹೆಚ್ಚು ಎಳ್ಳು ತಿನ್ನುವುದರಿಂದ ಮತ್ತು ಕಾಫಿ ಸೇವನೆ, ಕಾರ್ಬೊನೇಟೆಜ್ ಜ್ಯೂಸ್, ಹೆಚ್ಚು ಉಪ್ಪು ಹೊಂದಿದ ಮತ್ತು ಜಂಕ್ ಫುಡ್ ಸೇವನೆಯನ್ನು ತ್ಯಜಿಸುವುದರಿಂದ ಸ್ತನದ ಗಾತ್ರದ ಹೆಚ್ಚಳ ಸಾಧ್ಯವಾಗುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications