Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ನೆಗಡಿ ಸಮಸ್ಯೆ ಶಮನ ಮಾಡುವುದು ಹೇಗೆ?

ಮಕ್ಕಳಿಗೆ ಶೀತ ಆದರೆ ಅದರಿಂದ ತಾಯಿಗೂ ತೊಂದರೆ, ಬಾಯಿ ತನಕ ಬರುವ ತುಪ್ಪವನ್ನು ಒರೆಸುವುದೆ ಒಂದು ಕೆಲಸವಾಗಿ ಬಿಡುತ್ತದೆ.
ಹೀಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿಯನ್ನು ಈ ಕೆಳಗಿನಂತೆ ಮಾಡುವುದರಿಂದ ಈ ರೀತಿಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.
1. ಮನೆಯಲ್ಲಿ, ಹೊರಗೆ ಹೋಗುವಾಗ, ಹವಾನಿಯಂತ್ರಣ ಕೊಠಡಿಯಲ್ಲಿ ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳಬೇಕು, ಇದರಿಂದ ಕಿವಿಯೊಳಗೆ ತಂಪು ಗಾಳಿ ಹೋಗುವುದನ್ನು ತಡೆಯಬಹುದಾಗಿದೆ.
2. ಸಾಯಂಕಾಲ ಮನೆಯಿಂದ ಹೊರಗೆ ಹೋಗುವಾಗ ತಲೆಯನ್ನು ಮತ್ತು ಕುತ್ತಿಗೆಯನ್ನು ಉಣ್ಣೆ ಬಟ್ಟೆಯಿಂದ ಸುತ್ತಬೇಕು.
3. ಕರ್ಚೀಪ್ ಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಅದರ ವಾಸನೆಯನ್ನು ತೆಗೆದುಕೊಳ್ಳುವುದು ಕೂಡ ಒಳ್ಲೆಯದು.
4. ಸ್ನಾನ ಅಥವಾ ಮುಖ ತೊಳೆಯುವಾಗ ಉಗುರು ಬೆಚ್ಚಗಿನ ನೀರು ಬಳಸಿ.
5. ಗಂಟಲಿನಲ್ಲಿ ಕೆರತ ಉಂಟಾದರೆ ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು.
6. ಕೈಯನ್ನು ಆಗಾಗ ತೊಳೆಯುತ್ತಿರಬೇಕು, ಮತ್ತು ಕೈಯಿಂದ ಆಗಾಗ ಮುಖವನ್ನು ಮುಟ್ಟಬೇಡಿ.
7. ಶೀತ ಆದವರ ಅತಿ ಸಮೀಪ ಹೋಗುವುದರಿಂದ, ಅವರು ಬಳಸಿದ ಟವಲ್ ಬಳಸಿದರೆ ಶೀತ ಹರಡುವುದು.
8. ಶೀತವಾದಾಗ ಕರ್ಚೀಪ್ ಬದಲು ಟಿಶ್ಯು ಪೇಪರ್ ಬಳಸಿ.
9. ಆರೋಗ್ಯಕರವಾದ ಆಹಾರಕ್ರಮವನ್ನು ಪಾಲಿಸಬೇಕು.
10. ತುಂಬಾ ಹುಷಾರು ತಪ್ಪಿದರೆ ಮನೆಯಲ್ಲಿಯೆ ವಿಶ್ರಾಂತಿ ತೆಗೆದುಕೊಂಡು ಅದು ಮತ್ತೊಬ್ಬರಿಗೆ ಬರದಂತೆ ಎಚ್ಚರವಹಿಸಿದರೆ ಮತ್ತೊಬ್ಬರು ತೊಂದರೆ ಒಳಗಾಗುವುದು ತಪ್ಪುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
