Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಯಾವ ಆಹಾರದ ಮಿಶ್ರಣ ದೇಹಕ್ಕೆ ವಿಷಕಾರಿ?

ಈ ಆಹಾರದ ಮಿಶ್ರಣ ವಿಷಕಾರಿ:
* ಮಿಂಟ್ ಜೊತೆ ಜ್ಯೂಸ್: ಸೋಡಾ, ಇನ್ನಿತರ ತಣ್ಣಗಿನ ಪಾನೀಯದೊಂದಿಗೆ ಪೆಪ್ಪರ್ ಮಿಂಟ್ ಸೇವನೆ ಮಾಡಬಾರದು. ಇದರಿಂದ ಹೊಟ್ಟೆಯಲ್ಲಿ ವಿಷಕಾರಿ ಅಂಶ ಉಂಟಾಗುತ್ತದೆ. ಈ ಎರಡೂ ಸೇರಿದರೆ ಸೈಯನೈಡ್ ಎಂಬ ಅಂಶ ಉತ್ಪತ್ತಿಯಾಗಿ ವಿಷಕಾರಿಯಾಗುತ್ತದೆ.
* ಹಾಲಿನೊಂದಿಗೆ ಸಿಟ್ರಸ್ ಹಣ್ಣು ಅಥವಾ ತರಕಾರಿ: ಕೆಲವೊಬ್ಬರಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಅಂಶವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಇಂತಹ ಸಮಯದಲ್ಲಿ ಇದರೊಂದಿಗೆ ಸಿಟ್ರಸ್ ಅಂಶ ಸೇರಿಕೊಂಡರೆ ಹೊಟ್ಟೆಯಲ್ಲಿ ಆಸಿಡಿಟಿ ಉಂಟಾಗಿ ಉಷ್ಣ ಮತ್ತು ಗ್ಯಾಸ್ ಸಮಸ್ಯೆ ಅತಿಯಾಗುವಂತೆ ಮಾಡುತ್ತದೆ.
* ಹಣ್ಣುಗಳ ಜೊತೆ ಸ್ಟಾರ್ಚ್ ಆಹಾರ: ಊಟವಾದ ಅರ್ಧ ಗಂಟೆ ನಂತರ ಹಣ್ಣು ತಿನ್ನಬೇಕೆನ್ನುವುದು ಹಿರಿಯರು ಹೇಳುವ ಮಾತು. ಅದಕ್ಕೆ ಕಾರಣವೂ ಇದೆ. ಹಣ್ಣುಗಳು ಬೇಗನೆ ಜೀರ್ಣಗೊಳ್ಳುತ್ತದೆ. ಆದರೆ ಆಹಾರದಲ್ಲಿ ತೆಗೆದುಕೊಂಡ ಸ್ಟಾರ್ಚ್ ಅಂಶ (ಅನ್ನ ಮತ್ತು ಆಲೂಗಡ್ಡೆ) ಜೀರ್ಣಗೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಈ ಪ್ರಕ್ರಿಯೆಯಿಂದ ಹಣ್ಣುಗಳು ಹೆಚ್ಚು ಕಾಲ ಜೀರ್ಣವಾಗದೆ ಉಳಿದು ತೊಂದರೆಯುಂಟುಮಾಡುತ್ತದೆ.
* ಪ್ರೊಟೀನ್ ಜೊತೆ ಸ್ಟಾರ್ಚ್: ಆಲೂಗಡ್ಡ ಚಿಪ್ಸ್ ಜೊತೆ ಕರಿದ ಚಿಕನ್ ತಿನ್ನಬಾರದು ಎನ್ನುತ್ತಾರೆ. ಈ ಎರಡೂ ಆಹಾರಗಳ ಜೀರ್ಣಕ್ರಿಯೆ ಪ್ರಕ್ರಿಯೆ ಬೇರೆಯದ್ದೇ ಆಗಿದೆ. ಆದ್ದರಿಂದ ಇದು ಘರ್ಷಣೆಗೆ ಒಳಗಾಗುತ್ತದೆ. ಪ್ರೊಟೀನ್ ಹೊಟ್ಟೆಯಲ್ಲಿ ಜೀರ್ಣವಾದರೆ, ಸ್ಟಾರ್ಚ್ ಸಣ್ಣ ಕರುಳಿನಲ್ಲಿ ನಿಧಾನವಾಗಿ ಜೀರ್ಣಗೊಳ್ಳುತ್ತದೆ. ಈ ರೀತಿಯ ವ್ಯತಿರಿಕ್ತ ಜೀರ್ಣಕ್ರಿಯೆ ದೇಹಕ್ಕೆ ವಿಷಕಾರಿಯಾಗುತ್ತದೆ.
* ಸ್ವೀಟ್ ಜೊತೆ ಪ್ರೊಟೀನ್: ಚಿಕನ್ ಅಥವಾ ಸಾಮಾನ್ಯ ಊಟ ತಿಂದ ನಂತರ ಸಕ್ಕರೆ ಪೂರಿತ ಸ್ವೀಟ್ ತಿನ್ನಬಾರದು. ಇದರಿಂದ ಅಜೀರ್ಣವಾಗಿ ಹೊಟ್ಟೆ ಉರಿಯೂ ಉಂಟಾಗುತ್ತದೆ. ಆದ್ದರಿಂದ ಊಟವಾದ ಎರಡು ಗಂಟೆಗಳ ಬಳಿಕ ಸ್ವೀಟ್ ಸೇವನೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
