Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಓಮು ಕಾಳಿನಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ?
ಓಂ ಕಾಳನ್ನು ನಾವು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತೇವೆ. ಆದರೆ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಇಂತಹ ಕಾಯಿಲೆಗಳ ಬಂದಾಗ ನೀವು ಡಾಕ್ಟರ್ ಬಳಿ ಹೋಗಬೇಕಾದ ಅವಶ್ಯಕತೆ ಇಲ್ಲ. ಮನೆಯಲ್ಲಿ ಓಂ ಕಾಳಿದ್ದರೆ ಸಾಕು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳು ಕ್ಷಣ ಮಾತ್ರದಲ್ಲೇ ಮಾಯವಾಗುತ್ತದೆ.

ಹಾಗಾದ್ರೆ ಓಂ ಕಾಳಿನಿಂದ ಯಾವ ರೀತಿ ಆರೋಗ್ಯಕಾರಿ ಲಾಭಗಳಿಗೆ ಅನ್ನೋದನ್ನ ತಿಳಿಯೋಣ.
ಓಮು ಕಾಳಿನಲ್ಲಿರುವ ಆರೋಗ್ಯಕರ ಅಂಶ:
* ಜೀರ್ಣಕ್ರಿಯೆ: ಓಮು ಕಾಳಿನಲ್ಲಿರುವ ಆಸಿಡ್ ನಿರೋಧಕ ಗುಣ ಜೀರ್ಣಕ್ರಿಯೆ ಸಮಸ್ಯೆ ನೀಗಿಸುತ್ತದೆ. ಮಜ್ಜಿಗೆಯೊಂದಿಗೆ ಸ್ವಲ್ಪ ಓಮು ಕಾಳನ್ನು ಬೆರೆಸಿ ಕುಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು.
* ಕೆಮ್ಮು, ನೆಗಡಿ: ಥಂಡಿ ಅಥವಾ ಚಳಿ ವಾತಾವರಣವಿದ್ದಾಗ, ಈ ಕಾಳನ್ನು ತಿಂದರೆ ಕೆಮ್ಮು ಮತ್ತು ನೆಗಡಿ ಉಪಶಮನವಾಗುತ್ತದೆ. ಓಮನ್ನು ಅಗಿದು ಬಿಸಿ ನೀರಿನೊಂದಿಗೆ ನುಂಗಬೇಕು. ಇದು ಅಸ್ತಮಾ ಖಾಯಿಲೆಗೂ ಸೂಕ್ತ. ಬೆಲ್ಲದೊಂದಿಗೆ ಓಮು ಕಾಳನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
* ಹೊಟ್ಟೆ ನೋವು: ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಮುಂತಾದ ಕಾರಣದಿಂದ ಹೊಟ್ಟೆ ನೋವು ಬಂದಾಗ ಬಿಸಿ ನೀರಿನೊಂದಿಗೆ ಓಮು ಕಾಳನ್ನು ತಿನ್ನುವುದರಿಂದ ಉಪಶಮನಗೊಳ್ಳುತ್ತದೆ.
* ಕಿಡ್ನಿ ಕಲ್ಲು: ಓಮು ಕಾಳು ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯುವಲ್ಲಿ ಪರಿಣಾಮಕಾರಿ. ಇದರ ಸೇವನೆಯಿಂದ ಲಿವರ್ ಮತ್ತು ಕಿಡ್ನಿ ಸುಲಭವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
* ತಲೆ ನೋವು, ಎದೆ ಉರಿ: ಈ ಕಾಳಿನ ಸೇವನೆಯಿಂದ ತಲೆನೋವು, ಎದೆ ಉರಿ ಮತ್ತು ಕಿವಿ ನೋವನ್ನೂ ಕಡಿಮೆಗೊಳಿಸಬಹುದು. ಕಿವಿನೋವಿಗೆ ಓಮು ಕಾಳಿನ ಎಣ್ಣೆ ಬಿಡುವುದರಿಂದ ಕಿವಿ ನೋವು ಕಡಿಮೆಗೊಳ್ಳುತ್ತದೆ. ಬಿಸಿ ನೀರಿನೊಂದಿಗೆ ಕಾಳನ್ನು ಸೇವಿಸುವುದರಿಂದ ತಲೆ ನೋವು ಮತ್ತು ಎದೆ ಉರಿ ಕಡಿಮೆಯಾಗುತ್ತದೆ.
* ಕೀಲು ನೋವು: ಕೀಲು ನೋವಿನಿಂದ ಬಳಲುತ್ತಿದ್ದರೆ ಅಜ್ವೈನ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ನೋವು ಕಡಿಮೆಯಾಗುತ್ತದೆ.
* ವಾಂತಿ ಉಪಶಮನ: ಮದ್ಯ ಸೇವಿಸಿ ಹೊಟ್ಟೆ ತೊಳಸುವಂತಿದ್ದರೆ ಓಮು ಕಾಳು ಉಪಶಮನ ನೀಡುತ್ತದೆ. ವಾಂತಿ ನಿಯಂತ್ರಿಸಿ ಹಸಿವು ಹೆಚ್ಚುವಂತೆ ಮಾಡುತ್ತದೆ.
* ಬಾಯಿ ವಾಸನೆ: ಬಾಯಿ ವಾಸನೆ ಬರುತ್ತಿದ್ದರೆ ಓಮು ಜಿಗಿದರೆ ಕಡಿಮೆಯಾಗುತ್ತದೆ. ಹಲ್ಲು ನೋಯುತ್ತಿದ್ದರೆ ಬಿಸಿನೀರಿನಲ್ಲಿ ಓಮು ಕಾಳನ್ನು ಕುದಿಸಿ ಬಾಯಿ ಮುಕ್ಕಳಿಸಬೇಕು.
* ಮುಟ್ಟಿನ ನೋವು: ಓಮು ಕಾಳನ್ನು ಹುರಿದು ಹಾಲಿನೊಂದಿಗೆ ಕುಡಿದರೆ ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವಿಗೂ ಉಪಶಮನ ನೀಡುತ್ತದೆ.
* ಅಸಿಡಿಟಿ: ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.
* ರಕ್ತ ಶುದ್ಧೀಕರಣ: ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


