Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪೊಸೆಸಿವ್ ಸಂಗಾತಿಯೊಂದಿಗೆ ಹೊಂದಾಣಿಕೆ ಹೇಗೆ?

ಪೊಸೆಸಿವ್ ಅಂದರೆ ತನ್ನದನ್ನು ಯಾರಿಗೂ ಬಿಟ್ಟು ಕೊಡದ ಗುಣ ಅದನ್ನು ಸ್ವಾರ್ಥ ಎಂದು ಹೇಳಲು ಆಗುವುದಿಲ್ಲ. ಅದು ಒಬ್ಬ ವ್ಯಕ್ತಿಯ ಮೇಲೆ ಅತೀಯಾದ ಪ್ರೀತಿ ಇದ್ದು ಅವರು ಎಲ್ಲಿ ಕೈತಪ್ಪಿ ಹೋಗುತ್ತಾರೆ ಎಂಬ ಅಭದ್ರತೆ, ಭಯ ಕಾಡಲಾರಂಭಿಸಿದಾಗ ವ್ಯಕ್ತಿ ಪೊಸೆಸಿವ್ ಆಗುತ್ತಾ ಹೋಗುತ್ತಾನೆ.
ಆರಂಭದ ದಿನಗಳಲ್ಲಿ ನಮ್ಮ ಜೀವನ ಸಂಗಾತಿಯ ಪೊಸೆಸಿವ್ ಇಷ್ಟವಾದರೂ ಕ್ರಮೇಣ ಆ ಗುಣ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಅಂತವರು ಸಣ್ಣ ಪುಟ್ಟ ವಿಷಯಕ್ಕೂ ರಂಪಾಟ ಮಾಡಲಾರಂಭಿಸಿದಾಗ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
ಸ್ವಂತಿಕೆ ಕಡಿಮೆ, ಭಯ, ಹಳೆಯ ಕಹಿ ಘಟನೆಗಳು, ಹೊಟ್ಟೆಕಿಚ್ಚು, ಪ್ರೀತಿಯ ಆಭಾವ ಈ ಎಲ್ಲಾ ಕಾರಣಗಳಿಂದ ವ್ಯಕ್ತಿ ಹೆಚ್ಚು ಪೊಸೆಸಿವ್ ಆಗುತ್ತಾನೆ. ನಿಮ್ಮ ಸಂಗಾತಿಯ ಪೊಸೆಸಿವ್ ಗುಣದ ಬಗ್ಗೆ ಬೇಸರ ಪಟ್ಟು ಕೂರುವ ಬದಲು ನೀವು ಮಾಡಬೇಕಾದದ್ದು ಇಷ್ಟು.
1 ನಿಮ್ಮ ಸಂಗಾತಿಯ ಪೊಸೆಸಿವ್ ಗುಣಕ್ಕೆ ಕಾರಣವನ್ನು ತಿಳಿದುಕೊಳ್ಳಿ. ನಿಮ್ಮ ನಡುವಳಿಕೆಯಲ್ಲಿ ಏನಾದರೂ ತಪ್ಪಾಗಿದೆಯೆ ಅಥವಾ ನಿಮ್ಮ ಸಂಗಾತಿ ನಿಮ್ಮನ್ನು ತಪ್ಪಾಗಿ ಅರ್ಥೈಸಿ ಕೊಂಡಿದ್ದಾರೆಯೆ ಎಂದು ತಿಳಿದು ಅದನ್ನು ಸರಿಪಡಿಸಿ.
2. ನಿಮ್ಮ ಸಂಗಾತಿ ಮೊದಲೆಲ್ಲಾ ಚೆನ್ನಾಗಿದ್ದು ಇದ್ದಕಿದ್ದ ಹಾಗೆ ಪೊಸೆಸಿವ್ ಆದರೆ ಕಾರಣಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಭದ್ರತೆಯ ಅಭಾವ, ಹೊಟ್ಟೆಕಿಚ್ಚು, ಮನೋವಿಕಾರಗಳಿಂದಾಗಿ ಈ ರೀತಿ ವರ್ತಿಸಬಹುದು.
3. ನಿಮ್ಮ ಸಂಗಾತಿಯ ಪೊಸೆಸಿವ್ ಗುಣಕ್ಕೆ ಬೇಸತ್ತು ಜಗಳ ಮಾಡದೆ, ಅವರನ್ನು ಕೂರಿಸಿ ನಯವಾದ ಮಾತುಗಳಿಂದ ಅವರ ತಪ್ಪುಗಳನ್ನು ಮನವರಿಕೆ ಮಾಡಿ. ಒಂದು ವೇಳೆ ನೀವು ರೇಗಾಡಿದರೆ ಅದು ಸಂಶಯವನ್ನು ಹೆಚ್ಚು ಮಾಡಿ ಸಂಬಂಧವನ್ನು ಹಾಳು ಮಾಡುತ್ತದೆ.
4.ನೀವು ನಿಮ್ಮ ಸಂಗಾತಿಗೆ ಅವರೆಡೆಗೆ ನಿಮ್ಮ ಪ್ರೀತಿಯ ಆಳವನ್ನು ಮನವರೆಕೆ ಮಾಡಿ. ಪ್ರೀತಿಯಲ್ಲಿ ಅಭದ್ರತೆಯಂದಾಗಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಅದನ್ನು ಮೊದಲು ಅವರ ಮನಸ್ಸಿನಿಂದ ಕಿತ್ತು ಹಾಕಿ. ಹೀಗೆ ಮಾಡುವುದರಿಂದ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ.
ಈ ರೀತಿ ನೀವು ಮಾಡುವುದಿಂದ ಹಾಲು ಜೇನಿನ ಸಂಸಾರ ನಿಮ್ಮದಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
