Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ತಾಳಲಾರೆನು ಈ ಆಸಿಡಿಟಿ ನೋವನ್ನು...

ಅಸಿಡಿಟಿ ಮತ್ತು ಅದರ ನೋವನ್ನು ತಡೆಯುವ ನೈಸರ್ಗಿಕ ವಿಧಾನ:
1. ತಣ್ಣಗಿನ ನೀರು: ತಂಪಾದ ನೀರನ್ನು ಹೆಚ್ಚು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಗ್ಯಾಸ್ಟ್ರಿಕ್ ಹೆಚ್ಚಾಗಿ ಹೊಟ್ಟೆ ನೋವು ಕಾಣಿಸಿಕೊಂಡಾಗ ಐಸ್ ಕ್ರೀಂ ಮತ್ತು ತಣ್ಣಗಿನ ಹಾಲು ನೋವನ್ನು ಉಪಶಮನ ಮಾಡುತ್ತದೆ.
2. ಹೀಟಿಂಗ್ ಪ್ಯಾಡ್: ಹೊಟ್ಟೆಯ ಮೇಲೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆ ಅಥವಾ ಹೀಟಿಂಗ್ ಪ್ಯಾಡ್ ಇಟ್ಟುಕೊಂಡರೆ ತಾಳಲಾರದ ಹೊಟ್ಟೆ ನೋವು ಕಡಿಮೆಗೊಳ್ಳುತ್ತದೆ.
3. ಜಾಗಿಂಗ್: ಅಸಿಡಿಟಿಯಿಂದ ನೀವು ಬಳಲುತ್ತಿದ್ದರೆ ಬೆಳಗ್ಗೆ ಅಥವಾ ಸಂಜೆ ಜಾಗ್ ಮಾಡುವುದನ್ನು ರೂಢಿಸಿಕೊಳ್ಳಿ. ಲಘು ಆಹಾರವನ್ನು ಸೇವಿಸಿ ಮತ್ತು ಚೆನ್ನಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
4. ಅಜೀರ್ಣ: ಜೀರ್ಣಕ್ರಿಯೆ ಸರಿಯಿಲ್ಲದಿರುವುದೇ ಅಸಿಡಿಟಿಗೆ ಕಾರಣ. ಅತಿಯಾಗಿ ತಿಂದರೆ ಜೀರ್ಣ ಶಕ್ತಿ ಕುಂದುತ್ತದೆ. ಆದ್ದರಿಂದ ಲಘು ಆಹಾರವಿರಲಿ. ಎಳನೀರು, ಜೀರಿಗೆ ನೀರು ಗ್ಯಾಸ್ಟ್ರಿಕ್ ನೋವಿಗೆ ತುಂಬಾ ಪರಿಣಾಮಕಾರಿ. ಓಮು ಕಾಳನ್ನು ಬಿಸಿ ನೀರಿನೊಂದಿಗೆ ಅಗೆದು ತಿನ್ನುವುದರಿಂದಲೂ ನೋವು ಉಪಶಮನವಾಗುತ್ತದೆ.
5. ಅವಸರದ ಆಹಾರ ಸೇವನೆ ಬೇಡ: ನಿಧಾನವಾಗಿ ಆಹಾರವನ್ನು ಜಿಗಿದು ತಿಂದರೆ ಜೀರ್ಣಕ್ರಿಯೆ ಸುಲಭ. ಹೆಚ್ಚಾಗಿ ಒಟ್ಟಿಗೆ ತಿನ್ನುವುದಕ್ಕಿಂತ ಆಗಾಗ್ಗೆ ಸ್ವಲ್ಪ ಸ್ವಲ್ಪ ತಿನ್ನುತ್ತಿದ್ದರೆ ಒಳ್ಳೆಯದು.
6. ಕಾಫಿಯಿಂದ ದೂರವಿರಿ: ಸಾಸ್, ಕಾಫಿ, ಧೂಮಪಾನ, ಮದ್ಯಪಾನ ಇವುಗಳಿಂದ ದೂರವಿದ್ದಷ್ಟು ಗ್ಯಾಸ್ಟ್ರಿಕ್ ತೊಂದರೆ ನಿಮ್ಮಿಂದ ದೂರವಿರುತ್ತದೆ. ಹಾಗೆಯೇ ಎಣ್ಣೆಯಂಶವಿರುವ ಮತ್ತು ಮಸಾಲೆ ಪದಾರ್ಥಗಳಿಂದ ತುಂಬಿರುವ ಆಹಾರವನ್ನು ಕಡಿಮೆ ಮಾಡಿ, ಲಘುವಾದ ಮತ್ತು ಹೊಟ್ಟೆಗೆ ಹಗುರವೆನಿಸುವ ಆಹಾರವಿರಲಿ.
7. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ: ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿದರೆ ಯಾವ ತೊಂದರೆಯೂ ಕಾಣಿಸಿಕೊಳ್ಳುವುದಿಲ್ಲ. ತುಂಬಾ ತಡವಾಗಿ ತಿನ್ನುವುದು, ಅದರಲ್ಲೂ ಮಲಗುವ 30 ನಿಮಿಷದ ಮುನ್ನ ತಿನ್ನುವುದು ಒಳ್ಳೆಯದಲ್ಲ. ಮಲಗುವ 2-3 ಗಂಟೆಗೆ ಮುನ್ನ ಊಟ ಸೇವಿಸಿದರೆ ಜೀರ್ಣ ಕ್ರಿಯೆ ಸುಲಭ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
