Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗಂಟಲು ನೋವುತ್ತಿದೆಯಾ? ಹಾಗಾದರೆ ಹೀಗೆ ಮಾಡಿ

ಗಂಟಲು ಬೇನೆಯನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ:
1. ಸ್ವಲ್ಪ ಬಿಸಿಯಾದ ಟೀ ಡಿಕಾಕ್ಷನನ್ನು ಗಂಟಲಿಗೆ ಹಾಕಿಕೊಂಡು ಗಂಟಲನ್ನು ಗಲಬರಿಸುವುದರಿಂದ ಕ್ರಮೇಣ ಗಂಟಲು ನೋವು ಗುಣಮುಖವಾಗುತ್ತದೆ. ಟೀ ಯಲ್ಲಿನ ಔಷದೀಯ ಪದಾರ್ಥಗಳು ಗಂಟಲನ್ನು ಶುದ್ಧಗೊಳಿಸಿ ತುರಿಕೆ ಕಡಿಮೆ ಮಾಡುತ್ತದೆ.
2. ಬೆಳಗ್ಗಿನ ಜಾವ ಖಾಲಿ ಹೊಟ್ಟೆಯಲ್ಲಿ ಶುಂಠಿಯನ್ನು ಜೇನು ತುಪ್ಪದೊಂದಿಗೆ ಬೆರೆಸಿ ಒಂದು ಚಮಚ ಸೇವಿಸಿದರೆ ಗಂಟಲು ಸಂಬಂಧಿ ತೊಂದರೆ ನಿವಾರಣೆಯಾಗುತ್ತದೆ.
3. ಬಿಸಿ ನೀರಿನೊಂದಿಗೆ ಸ್ವಲ್ಪ ಕೆಂಪು ಮೆಣಸಿನ ಪುಡಿ ಬೆರೆಸಿ ಗಂಟಲನ್ನು ಮುಕ್ಕಳಿಸಿದರೆ ಹುಣ್ಣು ಮಾಯುತ್ತದೆ.
4. ಮೆಣಸನ್ನು ಜಿಗಿಯುತ್ತಾ ಅದರ ರಸವನ್ನು ಹೀರಿದರೆ ಗಂಟಲು ಬೇನೆ ಕಡಿಮೆಗೊಂಡು ಹುಣ್ಣು ಬೇಗ ವಾಸಿಯಾಗುತ್ತದೆ.
5. ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೂ ದೇಹ ಹಗುರಗೊಂಡು ಗಂಟಲೂ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಶೀತದಿಂದ ಗಂಟಲು ಬೇನೆ ತಗುಲಿದ್ದರೆ ಈ ಕ್ರಮ ಅನುಸರಿಸುವುದು ಉಪಯೋಗಕಾರಿ.
6. ಶೀತಗಾಳಿ ಹೋಗದಂತೆ ಮತ್ತು ಶೀತದಿಂದ ಉಂಟಾಗುವ ಗಂಟಲು ಬೇನೆ ತಡೆಗಟ್ಟಲು ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳಬೇಕು ಮತ್ತು ಬಿಸಿ ನೀರನ್ನು ಕುಡಿಯಬೇಕು.
ಶೀತಕ್ಕಾಗಲಿ, ಉಷ್ಣಕ್ಕಾಗಲಿ, ಗಂಟಲು ನೋವು ಕಾಣಿಸಿಕೊಳ್ಳುವುದು ಸಹಜ. ಆದ್ದರಿಂದ ಈ ಸಲಹೆಗಳು ಎಲ್ಲಾ ಕಾಲಕ್ಕೂ ಉಪಯೋಗಕ್ಕೆ ಬರುವಂತದ್ದು. ಇದು ತುಂಬಾ ಸರಳ ಎನಿಸಿದರೂ ಪರಿಣಾಮ ಮಾತ್ರ ತುಂಬಾ ಪ್ರಭಾವಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
