Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ನಿದ್ದೆ ಕಣ್ಣಿಗೆ ಹತ್ತುವ ಮುನ್ನ ತಿನ್ನದಿರಿ ಈ ತಿಂಡಿಯನ್ನ

* ಚೈನೀಸ್ ತಿಂಡಿ: ಮನೆಯಲ್ಲೇ ಅಡುಗೆ ತಯಾರಿಸೋದಕ್ಕೆ ಬೇಜಾರಾಗಿ ಚೈನೀಸ್ ತಿಂಡಿ, ಆಹಾರವನ್ನು ಹೋಟೆಲ್ ನಿಂದ ತರಿಸಿಕೊಂಡು ತಿನ್ನುತ್ತೀರಿ. ಆದರೆ ಇದು ನಿದ್ದೆಗೆ ಅಷ್ಟು ಒಳ್ಳೆಯದಲ್ಲ. ಆದರೆ ತರಕಾರಿ, ಅನ್ನ ಹೊಂದಿರುವ ಚೈನೀಸ್ ಆಹಾರವನ್ನು ಸೇವಿಸಿದರೆ ತೊಂದರೆಯಿಲ್ಲ.
* ಚಾಕಲೇಟ್ : ಎಲ್ಲರಿಗೂ ಇಷ್ಟವಾಗುವ ಚಾಕಲೇಟ್ ಮರೆಯೋದು ಹೇಗೆ? ಆದರೆ ಇದು ರಾತ್ರಿ ಮಲಗುವ ಮುನ್ನ ಮಾತ್ರ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಸಕ್ಕರೆ ಮತ್ತು ಕೆಫಿನ್ ಅಂಶದಿಂದ ನಿದ್ದೆಗೆ ಕೆಡುಕಾಗಬಹುದು. ಚಾಕಲೇಟ್ ಬದಲಾಗಿ ಏನು ತಿನ್ನಬಹುದುದೆಂದರೆ, ಮೊಟ್ಟೆಯ ಬಿಳಿಭಾಗಕ್ಕೆ ಒಂದು ಚಮಚ ಚಾಕಲೇಟ್ ಪ್ರೊಟೀನ್ ಪೌಡರ್ ಸೇರಿಸಿ 1 1\2 ನಿಮಿಷ ಮೈಕ್ರೊವೇವ್ ನಲ್ಲಿಟ್ಟರೆ ತಕ್ಷಣದ ಚಾಕಲೇಟ್ ರೆಡಿಯಾಗುತ್ತೆ. ಇದರಿಂದ ತಾತ್ಕಾಲಿಕವಾಗಿ ಚಾಕಲೇಟ್ ದಾಹವನ್ನು ತೀರಿಸಿಕೊಳ್ಳಬಹುದು.
* ಹಾಲು: ರಾತ್ರಿ ಹೊತ್ತು ಹಾಲು ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಹೇಳುವುದುಂಟು. ಆದರೆ ಹಾಲಿನ ಸೇವನೆ ರಾತ್ರಿ ಹೊತ್ತು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು ಅಥವಾ ಮಧ್ಯ ರಾತ್ರಿ ಹಸಿವನ್ನೂ ತಂದೊಡ್ಡಬಹುದು. ಇದರಿಂದ ಸಹಜವಾಗಿ ನಾವು ಎಚ್ಚರಗೊಂಡು ನಿದ್ದೆಗೆಡಬೇಕಾದ ಪರಿಸ್ಥಿತಿ ಬರುತ್ತದೆ.
* ಪಿಜ್ಜಾ: ಪಿಜ್ಜಾ ರಾತ್ರಿ ಸಮಯ ತಿನ್ನಲು ಬಲು ಹಿತವೆನಿಸುತ್ತೆ. ಆದರೆ ಇದು ಕ್ಯಾಲೋರಿಗಳನ್ನು ಹೆಚ್ಚಿಸಿ ನಿಮ್ಮ ದೇಹಾರೋಗ್ಯವನ್ನು ಗುರಿತಪ್ಪಿಸಬಹುದು, ಅಜೀರ್ಣತೆಯೂ ಉಂಟಾಗಬಹುದು. ಪಿಜ್ಜಾ ತಿನ್ನಲೇ ಬೇಕು ಎನಿಸಿದ ಸಮಯದಲ್ಲಿ ಎರಡು ಮೊಟ್ಟೆ ಬೇಯಿಸಿ ತಿಂದರೆ ಹೊಟ್ಟೆ ತುಂಬುವುದಲ್ಲದೆ ಸರಿಯಾದ ಪ್ರೊಟೀನನ್ನೂ ಒದಗಿಸುತ್ತದೆ.
* ಪಾಸ್ತಾ: ಪಾಸ್ತಾದಲ್ಲಿ ದೇಹಕ್ಕೆ ಅವಶ್ಯಕವಾದ ಕಾರ್ಬೊಹೈಡ್ರೇಡ್ ಇದ್ದರೂ ಸಹ ಇದು ಬೊಜ್ಜು ಹೆಚ್ಚಿಸಲು ಮುಖ್ಯ ಕಾರಣವಾಗುತ್ತದೆ. ಆದ್ದರಿಂದ ಪಾಸ್ತಾಗಿಂತ ಅದೇ ರುಚಿ ಹೊಂದಿರುವ ನೂಡಲ್ಸ್ ಸೇವನೆಯೇ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
