Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
ಅಯ್ಯೋ, ಏನೋ ಹೇಳ್ಬೇಕಂತಿದ್ದೆ ನೆನಪೇ ಆಗ್ತಿಲ್ಲ!

ನಿದ್ದೆಯ ಕೊರತೆ ನಿಮಗೆ ಮರೆಗುಳಿತನ ತರುವುದು ಗ್ಯಾರಂಟಿ. ಕ್ಯಾಲಿಫೋರ್ನಿಯಾದಲ್ಲಿ ನಡೆಸಿದ ಈ ಅಧ್ಯಯನ ಮನುಷ್ಯನ ನಿದ್ದೆ ಜ್ಞಾಪಕಶಕ್ತಿಗೆ ಎಷ್ಟು ಅವಶ್ಯಕ ಅನ್ನೋದರ ಬಗ್ಗೆ ತಿಳಿಸಿಕೊಟ್ಟಿದೆ.
ಯಾವುದೇ ಅಡ್ಡಿ ಆತಂಕವಿಲ್ಲದೆ ನಿದ್ದೆ ಮಾಡಿದರೆ ನೀವು ಯಾವುದನ್ನೂ ಮರೆಯೋದೇ ಇಲ್ಲ, ಇಲ್ಲ ಅಂದ್ರೆ ಮರೆಗುಳಿತನ ಬರುವ ಸಾಧ್ಯತೆ ಹೆಚ್ಚು. ನಿದ್ದೆ ಮಾಡುವ ಒಟ್ಟು ಅವಧಿಗಿಂತ ನಿದ್ದೆಯನ್ನು ಯಾವುದೇ ಅಡ್ಡಿಯಿಲ್ಲದೆ ಆರಾಮವಾಗಿ ಮಾಡುವುದು ಮುಖ್ಯ. ಅದು ಮೆದುಳಿನ ಜ್ಞಾಪಕ ಶಕ್ತಿಯನ್ನು ಗಟ್ಟಿಗೊಳಿಸುತ್ತದೆ ಎಂದು ಇದರಲ್ಲಿ ತಿಳಿಸಿದೆ.
ಜ್ಞಾಪಕ ಶಕ್ತಿಗೆ ಒಳ್ಳೆಯ ನಿದ್ದೆ ಅವಶ್ಯಕ ಎಂದು ಈ ಹಿಂದೆಯೇ ಎಷ್ಟೋ ಸಂಶೋಧನೆಗಳು ತಿಳಿಸಿವೆ. ಆದರೆ ನಿರಂತರ ಬದಲಾಗುತ್ತಿರುವ ನಿದ್ದೆಯ ಚಲನವಲನಗಳು ಹೇಗೆ ಜ್ಞಾಪಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗ ತಿಳಿದುಬಂದಿದೆ.
ಇಲಿಯ ಮೇಲೆ ನಡೆಸಿದ ಪ್ರಯೋಗವೊಂದರಿಂದ, ಅಡ್ಡಿ, ಅಡಚಣೆ, ಆತಂಕಗಳಿಂದ ತುಂಬಿರುವ ನಿದ್ದೆಯಿಂದ ಖಂಡಿತ ಜ್ಞಾಪಕ ಶಕ್ತಿ ಕುಂದುತ್ತದೆ ಎಂದು ಕಂಡುಬಂದಿದೆ. ಸದಾ ಅತ್ತಿತ್ತ ಓಡಾಡುತ್ತಿದ್ದ ಇಲಿಯ ಮೇಲೆ ಈ ಪ್ರಯೋಗ ನಡೆಸಿದಾಗ, ಇಲಿ ತಾನು ಹಿಂದೆ ಕೂಡಿಟ್ಟಿದ್ದ ವಸ್ತುಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಇದು ಮನುಷ್ಯನಿಗೂ ಅನ್ವಯಿಸುತ್ತದೆ.
ಮನುಷ್ಯರಲ್ಲಿ ಮರೆಗುಳಿತನವನ್ನು ಹೋಗಲಾಡಿಸಲು ಎಷ್ಟು ನಿದ್ದೆಯ ಅವಶ್ಯಕತೆ ಇದೆ ಎಂಬುದರ ನಿಖರವಾಗಿ ಹೇಳಲು ಸಾಧ್ಯವಿಲ್ಲ, ದಿನಕ್ಕೆ 7 ಗಂಟೆ ನಿದ್ದೆ ಸಾಕು, ಆದರೆ ಆ ನಿದ್ದೆಯೂ ನಿರಾತಂಕವಾಗಿರಬೇಕು. ನಿದ್ದೆಯ ರೀತಿಗೂ ಮತ್ತು ಮನುಷ್ಯನ ಜ್ಞಾಪಕ ಶಕ್ತಿಗೂ ಸಂಬಂಧವಿದೆ, ನಿದ್ದೆಯಲ್ಲಿ ಅಸ್ವಸ್ಥತೆ ನಿರಂತರವಾದರೆ ಆತನ ಮೆದುಳಿನ ಮೇಲೆ ಪರಿಣಾಮ ಬೀರಿ ಜ್ಞಾಪಕ ಶಕ್ತಿ ಕುಂದುವಂತೆ ಮಾಡುತ್ತದೆ ಎಂದು ತಿಳಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
