Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚುಮು ಚುಮು ಚಳಿಯಲ್ಲಿ ಮುಂಜಾವಿನ ಮುದ...

ಬೆಳಗ್ಗೆ ಬೇಗ ಎದ್ದು, ರಾತ್ರಿ ಬೇಗ ನಿದ್ದೆಗೆ ಜಾರಬೇಕು ಅಂತ ಕೇಳಿರ್ತೀವಿ. ಆದರೆ ಅದನ್ನು ಅನುಸರಿಸೋದು ಕಷ್ಟ ಅನ್ನಿಸಿರುತ್ತೆ. ಕೆಲಸದ ಒತ್ತಡದ ಮಧ್ಯೆ ನಿದ್ದೆಗೆ ಸಮಯ ಸಿಗೋದೇ ಹೆಚ್ಚು ಅಂತಹದರಲ್ಲಿ ಬೇಗ ಏಳೋ ಮಾತೆಲ್ಲಿ? ಅಂತ ಅನ್ನುವವರು ಒಮ್ಮೆ ಇದನ್ನ ಅನುಸರಿಸೋದಕ್ಕೆ ಪ್ರಯತ್ನ ಪಟ್ಟರೆ ಅದರ ವ್ಯತ್ಯಾಸ ನೀವೇ ಕಾಣ್ತೀರ.
ಬೆಳಗ್ಗೆ ಬೇಗ ಏಳುವುದರಿಂದ ಏನೆಲ್ಲ ಉಪಯೋಗ ಇದೆ ಅನ್ನೋದರ ಬಗ್ಗೆ ಕೊಂಚ ಕಣ್ಣು ಹಾಯಿಸೋಣ...
* ಬೆಳಗ್ಗೆ ಬೇಗ ಎದ್ದು, ಸ್ನಾನ ಮುಗಿಸಿದರೆ ಸಾಕು ನಿದ್ದೆ ಮಂಪರು ಹೋಗಿ ದಿನನಿತ್ಯದ ಚಟುವಟಿಕೆಗಳನ್ನ ನಿಭಾಯಿಸಲು ನಮ್ಮ ಮನಸ್ಸು ಸಿದ್ದವಾಗಿಬಿಟ್ಟಿರುತ್ತೆ.
* ನಂತರ ದಿನದ ಮುಖ್ಯ ಕೆಲಸಗಳ ಬಗ್ಗೆ ಒಂದತ್ತು ನಿಮಿಷ ಪ್ಲಾನ್ ಮಾಡಿಕೊಂಡರೆ ಅದನ್ನ ಕಾರ್ಯಗತಗೊಳಿಸಲು ಸಹಾಯಕ ಆಗುತ್ತೆ.
* ಕೆಲವು ಸಣ್ಣ ವ್ಯಾಯಾಮ ಅಥವಾ ಧ್ಯಾನ ಮಾಡಲು ಮುಂಜಾನೆ ಸೂಕ್ತ ಸಮಯ. ಇಂತಹ ವ್ಯಾಯಾಮಗಳು ಆರೋಗ್ಯ ಮಾತ್ರವಲ್ಲ, ಮನಸ್ಸಿಗೆ ಚೈತನ್ಯವನ್ನೂ ನೀಡಿ ದಿನವಿಡೀ ಉಲ್ಲಾಸದಿಂದ ಇರುವಂತೆ ಮಾಡುತ್ತೆ.
* ಬೆಳಗ್ಗೆ ತುಸು ಬೇಗ ಎಚ್ಚರಗೊಳ್ಳೋದರಿಂದ ದಿನ ನಿತ್ಯದ ಜಂಜಾಟಗಳಿಂದ ಸ್ವಲ್ಪ ಮಟ್ಟಿಗಾದರೂ ರಿಲೀಫ್ ಖಂಡಿತ. ತಡವಾಗಿ ಎದ್ದು ತಡಕಾಡುವುದಕ್ಕಿಂತ ಸ್ವಲ್ಪ ಮುಂಚಿತವಾಗಿ ಎದ್ದು ಎಲ್ಲವನ್ನು ಸಿದ್ಧಪಡಿಸಿಕೊಂಡರೆ ಉತ್ತಮವಲ್ಲವೆ?
* ಮುಂಚಿತವಾಗಿ ಏಳೋದ್ರಿಂದ ತಿಂಡಿಯನ್ನ ಸಾವಧಾನವಾಗಿ ಮಾಡಿಕೊಳ್ಳಬಹುದು. ಇದು ಆರೋಗ್ಯಕ್ಕೆ ಹಿತ.
* ಮುಂಜಾನೆ ಬೇಗ ಏಳೋ ಅಭ್ಯಾಸ ಇಟ್ಟುಕೊಂಡವರಿಗೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಇದರಿಂದ ನಿದ್ರಾಹೀನತೆ ತೊಂದರೆಗೆ ಸಿಲುಕಬೇಕಾಗಿಲ್ಲ.
ಇದೆಲ್ಲ ಯಾರು ಬೇಕಾದ್ರೂ ಹೇಳ್ತಾರೆ ಆದ್ರೆ ಅನುಸರಿಸೋದು ಕಷ್ಟ ಅಂತ ನೀವು ಅನ್ನಬಹುದು, ಆದರೆ ಅಭ್ಯಾಸ ಮನುಷ್ಯನನ್ನು ಪಕ್ವಗೊಳಿಸುತ್ತದೆ ಎಂಬ ಮಾತು ಸುಳ್ಳಲ್ಲ, ಸುಮ್ಮನೆ ಮಾತೇಕೆ? ನೀವೇ ಟ್ರೈ ಮಾಡಿ ನೋಡಿ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
