Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಬ್ಬಿಣಾಂಶ ಕಡಿಮೆಯಾದರೆ ದೇಹಕ್ಕೆ ತುಕ್ಕು!

ಶರೀರದಲ್ಲಿ ಸಾಕಷ್ಟು ಕಬ್ಬಿಣಾಂಶವಿಲ್ಲದಿದ್ದರೆ ನಿಃಶಕ್ತಿ ಉಂಟಾಗುತ್ತದೆ. ಮತ್ತೂ ಕಡಿಮೆಯಾದರೆ ತೀವ್ರವಾದ ರಕ್ತಹೀನತೆಗೆ ಕಾರಣವಾಗುತ್ತದೆ. ಇದರಿಂದ ರೋಗರುಜಿನಗಳೊಂದಿಗೆ ಹೋರಾಡುವ ಶಕ್ತಿ ಕುಂಟಿತವಾಗುತ್ತದೆ ಎಂದು ಕಾರ್ಲೆಲ್ ವಿಶ್ವವಿದ್ಯಾಲಯದ ಸಂಶೋಧನೆ ಬಹಿರಂಗಪಡಿಸಿದೆ.
ಕಬ್ಬಿಣಾಂಶವನ್ನು ಅವಶ್ಯಕತೆ ಇದ್ದಷ್ಟು ತೆಗೆದುಕೊಂಡರೆ ಮೆದುಳಿನ ಕಾರ್ಯಚಟುವಟಿಕೆಗಳು, ಜೀವ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಅಮೆರಿಕ ಕೃಷಿ ವಿಭಾಗದ ಲೆಕ್ಕಗಳ ಪ್ರಕಾರ...ದಿನವೊಂದಕ್ಕೆ ಪುರುಷರಿಗೆ 8 ಮಿ.ಗ್ರಾಂ ಹಾಗೂ ವಯಸ್ಕ ಹುಡುಗರಿಗೆ 11 ಮಿ.ಗ್ರಾಂ ಕಬ್ಬಿಣಾಂಶ ಅವಶ್ಯಕ. ಮಹಿಳೆಯರು ದಿನಕ್ಕೆ 18 ಮಿ.ಗ್ರಾಂ ಹಾಗೂ ಯುವತಿಯರಿಗೆ 15 ಮಿ.ಗ್ರಾಂ ಕಬ್ಬಿಣಾಂಶ ತೆಗೆದುಕೊಳ್ಳಬೇಕು. ಅದೇ ಗರ್ಭಿಣಿ ಸ್ತ್ರಿಯರಿಗಾದರೆ ದಿನಕ್ಕೆ 27 ಮಿ.ಗ್ರಾಂ ಕಬ್ಬಿಣಾಂಶ ಅವಶ್ಯಕ.
ಕಬ್ಬಿಣಾಂಶ ಯಾವುದರಲ್ಲಿ ಅಧಿಕವಾಗಿರುತ್ತದೆ?
ಆಹಾರದಲ್ಲಿ ಕಬ್ಬಿಣಾಂಶ ಎರಡು ರೂಪಗಳಲ್ಲಿ ಲಭ್ಯವಾಗುತ್ತದೆ.ಹೀಮ್ ಐರನ್ ಪ್ರಾಣಿಗಳ ಪ್ರೋಟೀನ್ ಗಳಲ್ಲಿ, ನಾನ್ ಹೀಮ್ ಐರನ್ ಸಸ್ಯಗಳ ಮೂಲಕ ಲಭಿಸುವ ಪ್ರೋಟೀನ್ ಗಳಲ್ಲಿ ಇರುತ್ತದೆ. ನಾನ್ ಹೀಮ್ ಗಿಂಗಲೂ ಹೀಮ್ ಐರನ್ ಅಂಶವನ್ನು ದೇಹ ಚೆನ್ನಾಗಿ ಗ್ರಹಿಸುತ್ತದೆ.
ಮಾಂಸಾಹಾರದಲ್ಲಿ ಮುಖ್ಯವಾಗಿ ಲಿವರ್ ಮತ್ತು ಮೀನಿನ ಆಹಾರದಲ್ಲಿ ಅಧಿಕವಾರುತ್ತದೆ. ಶಾಕಾಹಾರದಲ್ಲಾದರೆ ಹುರುಳಿಕಾಯಿ, ಅವರೆಕಾಯಿ, ಸೊಪ್ಪು(ಪಾಲಾಕ್) , ಎಳ್ಳು, ಓಟ್ಸ್ ನಲ್ಲಿ ಅಧಿಕವಾಗಿರುತ್ತದೆ. ಇವುಗಳೊಂದಿಗೆ ಸಿ ವಿಟಮಿನ್ ತೆಗೆದುಕೊಂಡರೆ ದೇಹ ಕಬ್ಬಿಣಾಂಶಗವನ್ನು ಚೆನ್ನಾಗಿ ಗ್ರಹಿಸುತ್ತದೆ. ಕಾಫಿ, ಕೆಫಿನೇಟೆಡ್ ಟೀ, ರೆಡ್ ವೈನ್ ನಂತಹ ಆಹಾರ ಪದಾರ್ಥಗಳು ಕಬ್ಬಿಣವನ್ನು ದೇಹ ಗ್ರಹಿಸದಂತೆ ಅಡ್ಡಿಪಡಿಸುತ್ತವೆ. ಆದ ಕಾರಣ ಇವುಗಳನ್ನು ಮಿತಿ ಮೀರಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
