Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಕಲಬೆರಕೆ ಎಣ್ಣೆ ಪತ್ತೆ ಮಾಡುವುದು ತುಂಬಾ ಸುಲಭ..! ಇಲ್ಲಿದೆ ಹತ್ತಾರು ದಾರಿ..!
ನಾವು ನಿತ್ಯ ಅಡುಗೆಗೆ ಎಣ್ಣೆ ಬಳಸಿಯೇ ಬಳಸುತ್ತೇವೆ. ಎಣ್ಣೆ ಇಲ್ಲದೆ ಅಡುಗೆ ಮಾಡುವುದು, ತಿಂಡಿ ಮಾಡುವುದು ಅಸಾಧ್ಯ. ಆದರೆ ನಾವು ಕೆಲವು ಬಾರಿ ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡುತ್ತೇವೆ. ಏಕೆಂದರೆ ಎಣ್ಣೆ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಈ ಎಣ್ಣೆ ಕೊಲೆಸ್ಟ್ರಾಲ್, ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿರುತ್ತದೆ.
ಆದರೆ ನಾವು ನಿತ್ಯ ಬಳಸುವ ಎಣ್ಣೆ ನಕಲಿಯಾಗಿರುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಅಲ್ಲದೆ ಈಗ ಮಾರುಕಟ್ಟೆಯಲ್ಲಿ ಕಲಬೆರಕೆ ಎಣ್ಣೆಗಳು ಸಹ ಇವೆ. ಹತ್ತಾರು ಬ್ರಾಂಡೆಡ್ ಎಣ್ಣೆಗಳ ರೀತಿಯಲ್ಲಿ ನಕಲಿ ಹಾಗೂ ಕಲಬೆರಕೆ ಎಣ್ಣೆಗಳ ಮಾರಾಟ ಮಾಡಲಾಗುತ್ತಿದೆ. ಆದ್ರೆ ಈ ಕಲಬೆರಕೆ ಎಣ್ಣೆ ಯಾವುದು ಅನ್ನೋದನ್ನು ಸುಲಭವಾಗಿ ಪತ್ತೆ ಮಾಡಬಹುದಂತೆ.

ಹಾಗಾದ್ರೆ ಕಲಬೆರೆಕೆಯಾಗಿರುವ ಎಣ್ಣೆ ಯಾವುದು ಎಂದು ಕಂಡು ಹಿಡಿಯಲು FSSAI ಕೆಲವು ಮಾರ್ಗಗಳ ಅನುಸರಿಸುವಂತೆ ಹೇಳಿದೆ. ಯಾವುದು ಆ ಮಾರ್ಗ ಅನ್ನೋದನ್ನು ನಾವಿಂದು ನೋಡೋಣ.
ಎಣ್ಣೆ ಪ್ಯಾಕೆಟ್ ಹಿಂಭಾಗದಲ್ಲಿ ನಮೂದಿಸಲಾದ ಪೌಷ್ಟಿಕಾಂಶದ ಪ್ರೊಫೈಲ್ ಅನ್ನು ನೋಡಿ ಖಚಿತಪಡಿಸಿಕೊಳ್ಳಿ.
ಸಾವಯವ, GMO ಅಲ್ಲದ ಅಥವಾ ನಿರ್ದಿಷ್ಟವಾದಂತಹ ಪ್ರಮಾಣೀಕರಣಗಳನ್ನು ಪರಿಶೀಲಿಸಿ
ಯಾವಾಗಲೂ ಎಕ್ಸ್‌ಪೈರಿ ದಿನಾಂಕವನ್ನು ಪರಿಶೀಲಿಸಿ
ನೀವು ಖರೀದಿಸುತ್ತಿರುವ ತೈಲದ ಬೆಲೆ ಸರಾಸರಿ ಮಾರುಕಟ್ಟೆ ಬೆಲೆಗಿಂತ ಕಡಿಮೆಯಾಗಿದ್ದರೆ, ಅದು ಕಲಬೆರಕೆಯ ಸೂಚನೆಯಾಗಿರಬಹುದು
ಅಸಲಿ ಎಣ್ಣೆಗಳು ನಿರ್ದಿಷ್ಟ ಪರಿಮಳವನ್ನು ಹೊಂದಿರುತ್ತವೆ
ಎಣ್ಣೆಯಲ್ಲಿ ಬಿಳಿ ಬಣ್ಣದ ಮೋಡದ ರೀತಿ ಇದ್ದರೆ ಕಲಬೆರಕೆ ಆಗಿದ್ದಂತೆ
ಎಣ್ಣೆಯನ್ನು ಬಾರಿ ಬಾಯಿಗೆ ಕೈ ಬೆರಳಿಗೆ ಅದ್ದಿ ಅದರ ರುಚಿ ನೋಡಿ. ಅದು ಕಹಿ ಅನಿಸಿದರೆ ಅದರು ಕಲಬೆರಕೆಯಾಗಿದೆ ಎಂದರ್ಥ
ಸ್ವಲ್ಪ ಪ್ರಮಾಣದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಫ್ರೀಡ್ಜ್‌ನಲ್ಲಿಡಿ. ಎರಡು ಗಂಟೆಗಳ ನಂತರ ಅದು ಗಟ್ಟಿಯಾಗಿದ್ದರೆ ಅದು ಶುದ್ಧವಾದ ಎಣ್ಣೆ ಒಂದು ವೇಳೆ ದ್ರವವಾಗಿಯೇ ಉಳಿದರೆ ಅದರಲ್ಲಿ ಕಲಬೆರಕೆ ಇದೆ ಎಂದರ್ಥ.
ಬಿಳಿ ಕಾಗದದ ಮೇಲೆ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಹಾಕಿ ಮತ್ತು ಒಣಗಲು ಬಿಡಿ. ಹಾಳೆಯ ಮೇಲೆ ಕಲೆಯಾಗಿ ಅದು ಪಾರದರ್ಶಕವಾಗಿದ್ದರೆ ಎಣ್ಣೆ ಅಸಲಿ ಎಂದು ತಿಳಿಯಿರಿ.
ಸಾಸಿವೆ ಎಣ್ಣೆಯಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು, ಅದರಲ್ಲಿ ಒಂದು ಚಮಚ ನೈಟ್ರಿಕ್ ಆಮ್ಲವನ್ನು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ಸಾಸಿವೆ ಎಣ್ಣೆಯು ಬಣ್ಣವನ್ನು ಬದಲಾಯಿಸಿದರೆ ಅಥವಾ ಮೇಲ್ಭಾಗದಲ್ಲಿ ಉಂಗುರವನ್ನು ರೂಪಿಸಿದರೆ, ಅದು ಕಲಬೆರಕೆಯಾಗಿದೆ.
ನಕಲಿ ಎಣ್ಣೆ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ನಕಲಿ ತೈಲಗಳ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಹಲವಾರು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು, ಟ್ರಾನ್ಸ್ ಕೊಬ್ಬುಗಳು, ಹೃದ್ರೋಗ, ಸ್ಥೂಲಕಾಯತೆ ಮತ್ತು ಟೈಪ್ 2 ಮಧುಮೇಹದ ಹೆಚ್ಚಿನ ಅಪಾಯಗಳು ಹೆಚ್ಚಾಗುವ ಸಂಭವವಿದೆ. ಸಂಭಾವ್ಯ ಯಕೃತ್ತು ಮತ್ತು ಮೂತ್ರಪಿಂಡದ ಹಾನಿ, ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲತೆಗೆ ಕಾರಣವಾಗುತ್ತವೆ.
ಕಲಬೆರಕೆ ಎಣ್ಣೆಗಳು ದೀರ್ಘಾವಧಿಯ ಸೇವನೆಯು ನಿಮ್ಮ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಟದ ತೊಂದರೆ ಮತ್ತು ಉಬ್ಬಸಕ್ಕೆ ಕಾರಣವಾಗಬಹುದು.
ಇತ್ತೀಚಿಗೆ ರಾಜಸ್ಥಾನದ ಅಜ್ಮೀರ್‌ನಿಂದ ಕನಿಷ್ಠ 18,000 ಲೀಟರ್ ನಕಲಿ ಅಡುಗೆ ಎಣ್ಣೆ ತೈಲವನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಎಣ್ಣೆಗಳನ್ನು ಬ್ರಾಂಡೆಡ್ ಕಂಪನಿಗಳಂತೆ ಪ್ಯಾಕ್ ಮಾಡಲಾಗಿತ್ತು. ಇದರಿಂದಾಗಿ ಯಾರಿಗೂ ಗೊತ್ತಾಗದಂತೆ ಮಾರುಕಟ್ಟೆಯಲ್ಲಿ ನಕಲಿ ಎಣ್ಣೆಗಳ ಮಾರಾಟ ಮಾಡಲಾಗಿತ್ತು. ಈ ನಕಲಿ ತೈಲಗಳು ಹಾನಿಕಾರಕ ಪದಾರ್ಥಗಳನ್ನು ಮಾತ್ರ ಹೊಂದಿರುವುದಿಲ್ಲ ಆದರೆ ಪೌಷ್ಟಿಕಾಂಶದ ಯಾವುದೇ ಅಂಶವನ್ನು ಸಹ ಅವು ಹೊಂದಿರುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications